ಬೆಳೆಹನಿ ಪರಿಹಾರ ನೀಡಲು ಆಗ್ರಹ


ಲಕ್ಷ್ಮೇಶ್ವರ,ಆ.17: ತಾಲೂಕಿನಾದ್ಯಂತ ಕಳೆದ 25 ದಿನಗಳಿಂದ ಮಳೆ ಯಾಗದಿರುವುದರಿಂದ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗಲಾರಂಬಿಸಿವೆ. ಈಗಾಗಲೇ ಮಸಾರಿ ಜಮೀನುಗಳಲ್ಲಿನ ಗೋವಿನಜೋಳ ನಾಶಪಡಿಸುತ್ತಿರುವ ಬೆನ್ನಲ್ಲಿಯೇ ಈಗ ಶೇಂಗಾ ಬೆಳೆಯುಒಣಗಲಾರಂಬಿಸಿದ್ದು ರೈತರ ಜಂಘಾ ಬಲವನ್ನೆ ಉಡಗಿಸಿದೆ.
ಕೃಷಿ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜುಲೈ ತಿಂಗಳಲ್ಲಿ ವಾಡಿಕೆಯ 68 ಎಂಎಂ ಮಳೆ ಆಗಬೇಕಾಗಿತ್ತು ಆದರೆ ಸುಮಾರು ಹದಿಮೂರು ದಿನಗಳ ಕಾಲ ಸತತ ಸುರಿದ ಜಿ ಟಿ ಜಿಟಿ ಮಳೆಯಿಂದ ಒಟ್ಟು152 ಎಂ ಎಂ ಮಳೆ ದಾಖಲಾಗಿತ್ತು.
ಇದೀಗ ಆಗಸ್ಟ್ ಮೂರನೇಯ ವಾರ ಕಾಲಾಡುತ್ತಿದ್ದು 21 ದಿನಗಳಿಂದಲೂ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಒಣಗಲಾಂಬಿಸಿವೆ.
ತಾಲೂಕಿನಲ್ಲಿ ಕೃಷಿ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ 10,000 ಹೆಕ್ಟರ್ ಶೇಂಗಾ ಬೆಳೆ ಗುರಿಯನ್ನು ಹೊಂದಲಾಗಿತ್ತು ಆದರೆ ಜೂನ್ ತಿಂಗಳಲ್ಲೂ ಸಹ ಮಳೆ ಕೈಕೊಟ್ಟಿದ್ದರಿಂದ ಆರಿದ್ರ ಮಳೆಗೆ ರೈತರು ಶೇಂಗಾ ಬಿತ್ತನೆ ಮಾಡಲಿಲ್ಲ ಇದರಿಂದ ಒಂದು ಅಂದಾಜಿನ ಪ್ರಕಾರ 3 ಸಾವಿರದಿಂದ 5,000 ಬಿತ್ತನೆಯಾಗಿದೆ ಎಂದು ಅಂದಾಜಿಸಲಾಗಿದೆ.
ಈ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳು ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದೆ ಎಂದಿದ್ದಾರೆ
ಸರ್ಕಾರ ಬೆಳೆಗಳ ಸಮೀಕ್ಷೆ ನಡೆಸಿ ರೈತರಿಗೆ ಕೂಡಲೇ ಬೆಳೆ ಹಾನಿ ಪರಿಹಾರ ನೀಡಬೇಕು ಎಂಬುದು ರೈತ ಪರ ಸಂಘಟನೆಗಳ ಆಗ್ರಹವಾಗಿದೆ.