ಬೆಳೆಸಾಲ ಮಂಜೂರು ಮಾಡಲು ಕರವೇ ಆಗ್ರಹ

ಚಿಂಚೋಳಿ,ಜೂ.7- ತಾಲೂಕಿನ ಐನಾಪುರ ಗ್ರಾಮದ ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರಿ ಬ್ಯಾಂಕ್ ಶಾಖೆಯಿಂದ ಇಲ್ಲಿನ ಎಲ್ಲ ರೈತರಿಗೆ ಬೆಳೆ ಸಾಲ ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಐನಾಪುರ ನಾಡ ಕಚೇರಿಯ ಉಪ ತಹಶೀಲ್ದಾರ ಮುಖಾಂತರ ಮುುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನಾ ಪ್ರದರ್ಶಣ ಉದ್ಧೇಶಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ವೀರಶೆಟ್ಟಿ ಹಳ್ಳಿ ಐನಾಪುರ ಅವರು, ಐನಾಪುರ ವಲಯದ ರೈತರಿಗೆ ಕಳೆವ 3 ರಿಂದ 4 ವರ್ಷಗಳಿಂದ ಬೇಳೆ ಸಾಲ ಸಿಕ್ಕಿರುವುದಿಲ್ಲ. ಮುಂಗಾರು ಬಿತ್ತನೆಗಾಗಿ ಸಿದ್ದತೆ ಮಾಢಿಕೊಂಡಿರುವ ರೈತರೆಲ್ಲರಿಗೂ ಕಡ್ಡಾಯ ಸಾಲ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕೂಡಲೇ ರೈತರಿಗೆ ಬೇಳೆ ಸಾಲ ಮಂಜೂರು ಮಾಡಬೇಕು ಒಂದು ವೇಳೆ ರೈತರಿಗೆ ಸಾಲವನ್ನು ಮಂಜೂರು ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಸೂರ್ಯಕಾಂತ ಮಠಪತಿ.ಸಂಗಪ್ಪ ಮುಣಜಿ. ರವಿ ಸಲಗೇರ್. ವೀರಯ್ಯ ಸ್ವಾಮಿ. ಮತ್ತು ರೈತರು ಹಾಗೂ ಕರವೇ ಕಾರ್ಯಕರ್ತರು ಉಪಸಿತರಿದ್ದರು.