ಬೆಳೆನಷ್ಠಕ್ಕೆ ಪರಿಹಾರಕ್ಕೆ ರೈತ ಸಂಘ ಮನವಿ

ಕೋಲಾರ,ನ.೨೧: ಅತಿಯಾದ ಮಳೆಯಿಂದ ನಷ್ಟವಾಗಿರುವ ಬೆಳೆಗಳಿಗೆ ಬೆಳೆ ಪರಿಹಾರ, ಮಳೆಗೆ ಉರುಳಿರುವ ಮನೆಗಳಿಗೆ ಪರಿಹಾರ, ಪ್ರಾಣಹಾನಿಯಾಗಿರುವ ಕುಟುಂಬಕ್ಕೆ ಪರಿಹಾರ ಹಾಗೂ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು ನಮ್ಮ ಕೋಲಾರ ರೈತ ಸಂಘವು ಕೋಲಾರ ತಾಲ್ಲೂಕು ತಹಸೀಲ್ದಾರ್ರವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಅಂದಾಜು ಸುಮಾರು ೫೦ ಸಾವಿರ ಎಕರೆ ಜಮೀನು ಅತಿಯಾದ ಮಳೆಯಿಂದ ಬೆಳೆ ನಷ್ಟ ಉಂಟಾಗಿದ್ದು, ರಾಗಿ ಕಟಾವಿನ ಹಂತದಲ್ಲಿ ನೆಲಕ್ಕೆ ಬಿದ್ದು ನೀರು ತುಂಬಿಕೊಂಡಿದೆ. ಟೊಮೋಟೋ, ಭತ್ತ, ಆಲುಗಡೆ?ಡ, ಹೂಕೋಸು, ಗೆಡ್ಡೆಕೋಸು, ಕ್ಯಾಪ್ಸಿಕಂ, ಇಪ್ಪುನೆರಳೆ ಇನ್ನಿತರ ಬೆಳೆಗಳು ನಷ್ಠದಲ್ಲಿದೆ. ರೈತ ಆರು ತಿಂಗಳಿನಿಂದ ಪಟ್ಟ ಶ್ರಮ ನೀರಿನಲ್ಲಿ ಮುಳುಗಡೆಯಾಗಿ ರೈತನು ನಷ್ಠ ಅನುಭವಿಸುತ್ತಿದ್ದಾನೆ. ಅಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆ ಮಾಡಿಸಿ ನಷ್ಠವಾಗಿರುವ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ನಮ್ಮ ಕೋಲಾರ ರೈತ ಸಂಘವು ಒತ್ತಾಯಿಸಿದೆ.
ಒಂದು ವರ್ಷದಲ್ಲಿ ಬೀಳಬೇಕಾದ ಮಳೆಯು ಕೇವಲ ೨ ದಿನಗಳಲ್ಲಿ ಬಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟದೊಂದಿಗೆ ಮನೆಗಳು ಸಹ ಧರೆಗುರುಳಿದೆ. ಇದರಿಂದ ಸೂರಿಲ್ಲದೆ ಪರಿತಪಿಸುತ್ತಿದ್ದಾರೆ. ಇಂತಹವರಿಗೆ ಶೀಘ್ರವಾಗಿ ಮನೆ ನಿರ್ಮಾಣ ಮಾಡಿಕೊಡಬೇಕು ಕೋರಿದ್ದಾರೆ.
ಕೆರೆಗಳು ತುಂಬಿದ್ದು, ಕೆರೆಯ ಪೂರ್ಣ ವ್ಯಾಪ್ತಿಯನ್ನು ಕೆರೆಯು ನಮಗೆ ಕಾಣುವಂತೆ ಮಾಡುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳು ಒತ್ತುವರಿಯಾಗಿರುವುದು ಸ್ಪಷ್ಠವಾಗಿ ಈಗ ನಿಮಗೆ ಕಾಣುತ್ತದೆ. ಆಗಾಗಿ ತಾವು ಎಲ್ಲಾ ಕೆರೆಗಳನ್ನು ವೀಕ್ಷಣೆ ಮಾಡಿ ಕೆರೆ ತುಂಬಿರುವ ಸ್ಥಳದವರೆಗೂ ಗುರುತು ಮಾಡಿ ಒತ್ತುವರಿಯನ್ನು ತೆರುವುಗೊಳಿಸಿ, ಶಿಥಿಲ ವ್ಯವಸ್ಥೆಯಲ್ಲಿರುವ ಕೆರೆ ಕಟ್ಟೆಗಳನ್ನು ಭದ್ರಗೊಳಿಸಲು ಸೂಕ್ತ ಕ್ರಮ ವಹಿಸಬೇಕೆಂದು ರೈತ ಸಂಘವು ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಅರಾಭಿಕೊತ್ತನೂರು ಮುನಿವೆಂಕಟಪ್ಪ, ಜಿಲ್ಲಾ ಕಾರ್ಯಧ್ಯಕ್ಷ ಕಾಮಧೇನಹಳ್ಳಿ ವೆಂಕಟಾಚಲಪತಿ, ಅಬ್ಬಣಿ ಮುನೇಗೌಡ, ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥಗೌಡ, ಸಂಘಟನಾ ಕಾರ್ಯದರ್ಶಿ ಕೆಂಬೋಡಿ ರವಿ, ವೀರಾಪುರ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಕೋಲಾರ ತಾಲ್ಲೂಕು ಅಧ್ಯಕ್ಷ ಶಿಳ್ಳಂಗೆರೆ ಗೋಪಾಲ್, ಕೋಲಾರ ತಾಲ್ಲೂಕು ಗೌರವಾಧ್ಯಕ್ಷ ನಾರಾಯಣಪ್ಪ, ಅಶೋಕ್, ಗಣೇಶ್ ಮತ್ತಿತರರು ಹಾಜರಿದ್ದರು.