ಬೆಳೆನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಿ

(ಸಂಜೆವಾಣಿ ವಾರ್ತೆ)
ಬಳ್ಳಾರಿ ಡಿ 05: ಮಣಸಿನಕಾಯಿ ಮತ್ತು  ಭತ್ತ ಮುಂತಾದ ಬೆಳೆಗಳು ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ನಷ್ಟ ಪರಿಹಾರಕ್ಕೆ  ಅರ್ಜಿ ಸಲ್ಲಿಸುವ ದಿನಾಂಕವನ್ನು‌ ವಿಸ್ತರಿಸಬೇಕು ಎಂದು ಕಾಂಗ್ರೆಸ್ ಕುಸಾನ್ ಸೆಲ್ ನ ಜಿಲ್ಲಾ ಅಧ್ಯಕ್ಷ ಎಂ.ಶ್ರೀಧರ್ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ‌ ಅವರಿಗೆ ಮನವಿ‌ಮಾಡಿದ್ದಾರೆ.
ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಕೊರ್ಲಗುಂದಿ ತಿಮ್ಮಾರೆಡ್ಡಿ, ಪಕ್ಷದ ಮುಖಂಡ ದೇವೆಂದ್ರಪ್ಪ ಅವರೊಂದಿಗೆ ಮನವಿ ಸಲ್ಲಿಸಿ.
ಅಕಾಲಿಕ, ಭಾರಿ ಮಳೆಯಿಂದ ಮೆಣಸಿನಕಾಯಿ, ಭತ್ತ, ಹತ್ತಿ, ಕಡಲೆ, ಸೇಂಗಾ ಮುಂತಾದ ಬೆಳೆಗಳು ನಷ್ಟವಾಗಿವೆ. ಇದಕ್ಕೆ ಸರ್ಕಾರದಿಂದ ನಷ್ಟ ಪರಿಹಾರ ನೀಡಲು ಆದೇಶ ನೀಡಿರುತ್ತದೆ. ಆದರೆ ನಷ್ಟ ಪರಿಹಾರದ ಅರ್ಜಿಯನ್ನು ಕೊಡಲು ಕಾಲವಕಾಶ ವಿಸ್ತರಿಸಬೇಕು. ಹಾಗೆಯೇ ಈ  ನಷ್ಟವನ್ನು ರೈತರು ತುಂಬಿಕೊಳ್ಳಲು ಮುಂದಿನ ಅಲ್ಪಾವಧಿ ಬೆಳೆಗೆ ಹೆಚ್.ಎಲ್.ಸಿ. ಕಾಲುವೆಗೆ ನೀರು ಹರಿಸುವುದರ ಬಗ್ಗೆ ನೀವು ಮತ್ತು ಶಾಸಕರು ಚರ್ಚೆಯನ್ನು ನಡೆಸಿ ಈ ಡಿಸೆಂಬರ್ ತಿಂಗಳ ಒಳಗಾಗಿ ನೀರು ಬಿಟ್ಟು ಬೆಳೆಗಳನ್ನು ಬೆಳೆದುಕೊಳ್ಳಲು ರೈತರಿಗೆ ಅನುಕೂಲ ಮಾಡಿಕೊಡಬೇಕು  ಸರ್ಕಾರದಿಂದ ಘೋಷಣೆಯಾಗಿರುವ ನಷ್ಟ ಪರಿಹಾರದ ಮೊತ್ತವನ್ನು ಹೆಚ್ಚು  ಮಾಡಬೇಕೆಂದು ಕೋರಿದ್ದಾರೆ.