ಬೆಳೆದ ಬೆಳೆ ಉಳಿಸಿಕೊಳ್ಳಲು ಅನ್ನದಾತರ ಪರದಾಟ;  ರೈತರಿಗೆ ನೆರವಾದ ನಂದಿಗಾವಿ ಶ್ರೀನಿವಾಸ್

ಸಂಜೆವಾಣಿ ವಾರ್ತೆ

 ಹರಿಹರ ಅ 16; ಬಿತ್ತಿದ  ಬೆಳೆಗಳೆಲ್ಲ ತೇವಾಂಶವಿಲ್ಲದೇ ಒಣಗುತ್ತಿದ್ದು, ಇದನ್ನು ನೋಡಲಾಗದೆ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದನ್ನು ನೋಡಿ ಕೂಡಲೇ ರೈತರ ಕಷ್ಟಗಳಿಗೆ ಸ್ಪಂದಿಸಿ ಬೆಳೆದ ಬೆಳೆಗಳಿಗೆ ನೀರು ಉಣಿಸಲು ಮುಂದಾದರು ಬೈಪಾಸ್ ರಸ್ತೆಯಲ್ಲಿರುವ ತಾಲೂಕಿನ ದೇವರ ಬೆಳಕೇರಿ ಪಿಕಪ್ ಚಾನೆಲ್ ನಲ್ಲಿ ಹಾದು ಹೋಗಿರುವ ಪೈಪ್ಲೈನ್ ಏರ್ ಬ್ಲಾಕ್ ಆಗಿ ಚಾನಲಿನಲ್ಲಿ ನೀರು ಇಲ್ಲದೆ ಮಣ್ಣಿನ ಹೂಳು ತುಂಬಿಕೊಂಡು ಚಾನಲ್ ನೀರು ಸರಗವಾಗಿ ಹರಿಯದೆ ನಿಂತಲ್ಲೇ ನಿಂತು ಬೆಳೆದ ಬೆಳೆಗಳಿಗೆ ನೀರು ಇಲ್ಲದೆ ಒಣಗುತ್ತಿದ್ದು ರೈತರು ಕಳೆದ ಒಂದು ವಾರದಿಂದ ಸಂಬಂಧಪಟ್ಟ ಶಾಸಕರಿಗೂ ನೀರಾವರಿ ಇಲಾಖೆಯ ಇಂಜಿನಿಯರ್ ಅಧಿಕಾರಿಗಳಿಗೂ ತಿಳಿಸಿದರು ರೈತರಿಗೆ ಸ್ಪಂದನೆ ಸಿಗದೇ ನಿರ್ಲಕ್ಷ ಧೋರಣೆ ತೋರುತ್ತಿದ್ದನ್ನು ಖಂಡಿಸಿ ಕೂಡಲೇ   ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಬಳಿ ಹೋಗಿ ರೈತರು ಆಗುತ್ತಿರುವ ಸಮಸ್ಯೆಗಳನ್ನು ತೋಡಿಕೊಂಡರು ಕೊಡಲೇ ಸ್ಥಳಕ್ಕೆ ಧಾವಿಸಿ ಚಾನಲ್ ಪರಿಶೀಲಿಸಿ ಸಂಬಂಧಿಸಿದ ಇಲಾಖೆ ಇಂಜಿನಿಯರ್ ಗಳನ್ನು ಸ್ಥಳಕ್ಕೆ ಕರೆಸಿ ಚಾನಲ್ ಗೆ ಅಡ್ಡಲಾಗಿ ಹೂಳು ತುಂಬಿಕೊಂಡಿದ್ದ ಮಣ್ಣನ್ನು ಇಟಾಚಿಯಿಂದ ತೆಗೆಸಬೇಕೆಂದು  ಸ್ಥಳದಲ್ಲಿ  ಪಟ್ಟು ಹಿಡಿದರು ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಹಿಟಾಚಿ ತಂದು ಮಣ್ಣನ್ನು ತೆಗೆಸುವುದಕ್ಕೆ ಮುಂದಾದರುಕೂಡಲೇ  ಸ್ಪಂದಿಸಿದ  ನಂದಿಗಾವಿ ಶ್ರೀನಿವಾಸ್ ಗೆ  ರೈತರು ಹರ್ಷ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ರೈತರಿಗೆ  ನೆರವಾಗುವಂತಹ ಕಾರ್ಯಗಳನ್ನು ಮಾಡಲೆಂದು ಹಾರೈಸಿದರು