ಬೆಳೆಗಳ ರಕ್ಷಣೆಗಾಗಿ ಗೇಟ್ ಎತ್ತಿ ನೀರು ಪಡೆಯುತ್ತಿರುವ ರೈತರು

ನೀರು ಹರಿಸುವಲಿ ಅಧಿಕಾರಿಗಳು ವಿಫಲ- ರಾಜಾ ಆದರ್ಶನಾಯಕ
ಸಿರವಾರ: ಮಾ.೭. ಒಂದು ಕಡೆ ನೀರು ಇಲ್ಲದೆ ಬಾಡುತ್ತಿರುವ ಬೆಳೆಗಳು, ನೀರು ಹರಿಸುತ್ತೆವೆಂದು ಹೇಳಿದ ಅಧಿಕಾರಿಗಳು ವಿಫಲರಾಗಿದ್ದರಿಂದ ರೈತರೆ ಕೆರೆಯ ಗೇಟ್ ಗಳನ್ನು ಎತ್ತುವ ಮೂಲಕ ನೀರು ಪಡೆಯುತ್ತಿದ್ದಾರೆಂದು ಜೆ.ಡಿಎಸ್ ಯುವ ಮುಖಂಡ ಹಾಗೂ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಸಹೋದರ ರಾಜಾ ಆದರ್ಶನಾಯಕ ಹೇಳಿದರು. ರಾಯಚೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಬಂಗಾರಪ್ಪ( ಗಣೇಕಲ್ ಜಲಾಶಯ) ಕೆರೆ ಖಾಲಿಯಾಗಿದೆ, ಕೆಳೆಭಾಗದ ರೈತರಿಗೆ ಹಿಂಗಾರು ಬೆಳೆಗೆ ನೀರು ಇಲ್ಲದೆ ಒಣಗಿವೆ ಎಂದು ಅತ್ತನೂರು, ನೀಲಗಲ್ ಕ್ಯಾಂಪ್, ಕಲ್ಲೂರು ನೂರಾರು ರೈತರು ಬಂಗಾರಪ್ಪನ ಕೆರೆಯ(ಬಿ.ಆರ್.) ಗೇಟ್ ಸೋಮವಾರ ಎತ್ತಿ ಕೆಳಭಾಗದ ಹೊಲಗಳಿಗೆ ನೀರು ಹರಿಸಿದ ಘಟನೆ ಜರುಗಿತು. ರೈತರ ಪರವಾಗಿ ಮಾತನಾಡಿದ ಅವರು ಕೊನೆ ಭಾಗಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ಶನಿವಾರ ೭ಮೈಲ್ ನಲ್ಲಿ ರಸ್ತೆತಡೆಯ ಪ್ರತಿಭಟನೆ ಮಾಡಿದಾಗ ಕೆಳೆಭಾಗಕ್ಕೆ ಸಮರ್ಪಕ ನೀರು, ಕೆರೆ ತುಂಬಿಸುವ ಭರವಸೆಯನ್ನು ಮುನಿರಾಬಾದ್ ಮುಖ್ಯ ಅಭಿಯಂತರರ ಭರವಸೆ ಹುಸಿಯಾಗಿದೆ. ಕಾಲುವೆಯಲ್ಲಿ ನೀರು ಇಲ್ಲಾ, ಸಮರ್ಪಕವಾಗಿ ಗೇಜ್ ಇಲ್ಲಾ, ಮೇಲ್ಭಾಗದಿಂದ ಕೆರೆಗೆ ನೀರು ಹರಿದುಬರುತ್ತಿಲ್ಲಾ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿ, ನಮ್ಮ ಹೊಲಗದ್ದೆಗಳಿಗೆ ನೀರು ಬೇಕೆ ಬೇಕು ಎಂದು ಗೇಟ್ ಮುಂದೆ ನೂರಾರು ರೈತರು ಪ್ರತಿಭಟನೆಯ ಮಾಡಿ, ರಾತ್ರಿ-ಹಗಲು ಇಲ್ಲೆ ವಾಸ ಮಾಡಲಾಗುವುದು ಎಂದರು. ನಂತರ ಸ್ಥಳಕ್ಕೆ ಬಂದ ಯರಮರಸ್ ಎಇಇ ವಿದ್ಯಾಸಾಗರ ಘಟನೆಯ ಬಗ್ಗೆ ಜಿಲ್ಲಾಧಿಕಾರಿ, ಸಿ.ಇ ಅವರಿಗೆ ಮಾಹಿತಿ ನೀಡಿದರು. ಕೆಳಭಾಗದ ರೈತರಿಗೆ ನೀರಿನ ಸಮಸ್ಯೆ ಪರಿಹರಿಸಿ, ಕೆರೆಯನ್ನು ತುಂಬಿಸಲಾಗುವದು ಎಂದರು.
ಈ ಸಂದರ್ಭದಲ್ಲಿ ಜೇಮ್ಸೀರ್ ಅಲಿ ಅತ್ತನೂರು, ಪ.ಪಂ ಮಾಜಿ ಸದಸ್ಯ ಇಮಾಮ್ ಸಿರವಾರ, ವಿಕ್ರಮ ಪಾಟೀಲ್ ಶಾಂತಪ್ಪ ಪಿತಗಲ್ , ಸತ್ಯಬಾಬು ರಡ್ಡಿ, ವೆಂಕಟರಾಮರಡ್ಡಿ, ಮೈಲಸಾಬ್, ಮಲ್ಲಪ್ಪ ಗುಡದಿನ್ನಿ, ಗಂಗಪ್ಪ ಗಣೇಕಲ್ , ಬಾಯಿದೊಡ್ಡಿ ಗ್ರಾಮಸ್ಥರು ಈಶಪ್ಪ,ತಾಯಪ್ಪ, ವೀರೇಶ ಬಾಯಿದೊಡ್ಡಿ, ಕುತುಬ್ದೂನ್, ದದ್ದಲ ಭೀಮಪ್ಪ ಸೇರಿದಂತೆ ಇನ್ನಿತರರು ಇದರು.