ಬೆಳೆಗಳು ಜಲಾವೃತ ರೈತನಿಗೆ ಎದುರಾದ ಸಂಕಷ್ಟ


ಲಕ್ಷ್ಮೇಶ್ವರ, ನ 21: ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಜಮೀನುಗಳಲ್ಲಿರುವ ಶೇಂಗಾ, ಹತ್ತಿ, ಮೆಣಸಿನಕಾಯಿ ಮತ್ತು ಗೋವಿನಜೋಳದ ಬೆಳೆಗಳು ಜಲಾವೃತಗೊಂಡು ಹಾಳಾಗುತ್ತಿದ್ದು ರೈತರು ಇನ್ನಿಲ್ಲದ ಸಂಕಷ್ಟವನ್ನು ಎದುರಿಸುವಂತಾಗಿದೆ.
ಕೃಷಿ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಯತ್ನಳ್ಳಿ ಗ್ರಾಮವೊಂದರಲ್ಲಿ ಸುಮಾರು 800 ಹೆಕ್ಟೇರ್ ಹತ್ತಿ ಬೆಳೆ, 250-300 ಹೆಕ್ಟೇರ್ ಹಬ್ಬು ಶೇಂಗಾ ಮತ್ತು 100 ಹೆಕ್ಟೇರ್‍ನಲ್ಲಿ ತೋಟಗಾರಿಕಾ ಬೆಳೆಯಾದ ಮೆಣಸಿನಕಾಯಿ ಮತ್ತು 50 ಹೆಕ್ಟೇರ್‍ನಲ್ಲಿ ಈರುಳ್ಳಿ ಬೆಳೆ ನಾಶವಾಗಿದೆ.
ತಾಲೂಕಿನಾದ್ಯಂತ ಕಟಾವು ಮಾಡಿ ಇಟ್ಟಿರುವ ಗೋವಿನ ಜೋಳವು ಮೊಳಕೆ ಬರುತ್ತಿದ್ದು ಇದು ರೈತರನ್ನು ಕಂಗಾಲಾಗಿಸಿದೆ.
ಒಟ್ಟಾರೆ ತಾಲೂಕಿನಾದ್ಯಂತ ಒಂದು ರೀತಿಯಲ್ಲಿ ಅತಿವೃಷ್ಟಿ ಎದುರಾಗಿದ್ದು ಕೂಡಲೇ ರೈತರ ನೆರವಿಗೆ ಬರಲು ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.