ಬೆಳೆಗಳು ಒಣಗುತ್ತಿವೆ ವಿದ್ಯುತ್ ಸಂಪರ್ಕ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ

ಸಿರವಾರ.ಜ.೨೦ – ಏರೆಟೆಲ್ ಸ್ಕಿಮ್‌ನಲ್ಲಿ ಆರ್.ಆರ್.ಸಂಖ್ಯೆ ಪಡೆದುಕೊಂಡು, ಕಾಮಗಾರಿ ಪೂರ್ಣಗೊಂಡರೂ ವಿದ್ಯುತ್ ಸಂಪರ್ಕ ನೀಡುವಲ್ಲಿ ಜೆಸ್ಕಾಂ ಅಧಿಕಾರಿಗಳು ವಿಫಲವಾಗಿದರಿಂದ ನನ್ನ ಬೆಳೆಗಳು ಒಣಗುತ್ತಿವೆ ಎಂದು ರೈತರಾದ ಎಂ.ಡಿ.ಹುಸೇನ್ ಅವರು ಆರೋಪಿಸಿದ್ದಾರೆ.
ಸಿರವಾರ ಹೊರವಲಯದಲ್ಲಿ ನನ್ನ ಜಮೀನು ಇದೆ. ಪಂಪ್ ಸೇಟ್ ಗಾಗಿ ಆರ್.ಆರ್.ಸಂಖ್ಯೆ ಪಡೆದುಕೊಳಲಾಗಿತು. ಏರೆಟೆಲ್ ಸ್ಕಿಮ್‌ನಲ್ಲಿ ಕಂಬ ವಿದ್ಯುತ್ ಪರಿವರ್ತಕವನ್ನು ಅಳವಡಿಸಿ ಮೂರು ವರ್ಷಗಳು ಮುಗಿಯುತಾ ಬಂದಿವೆ, ಸಂಪರ್ಕ ನೀಡುವಂತೆ ಮನವಿ ಮಾಡಿಕೊಂಡರೆ ಶಾಖಾಧಿಕಾರಿಗಳು, ಎಇಇ ಗೆ ತಿಳಿಸಿ ಎಂದು ಹೇಳುತ್ತಿದ್ದಾರೆ, ಎಇಇ ಯವರ ಗಮನಕ್ಕೆ ತಂದರೆ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಮೊದಲೆ ನಾಲೆಗೆ ನೀರು ಬರುತ್ತಿಲ್ಲ, ಜಮೀನಿಗೆ ಪಂಪ್ ಸೇಟ್ ಮೂಲಕ ನೀರು ಕಟ್ಟಿ ಕೊಳಬೇಕೆಂದರೆ ವಿದ್ಯುತ್ ಇಲ್ಲ. ಶೀಘ್ರವಾಗಿ ವಿದ್ಯುತ್ ಸಂಪರ್ಕ ಕೊಡದಿದ್ದರೆ ಬೆಳೆಗಳು ಹಾಳಾಗುತ್ತವೆ. ನನಗೆ ನಷ್ಟವಾಗುತ್ತದೆ, ಕೂಡಲೇ ನನಗೆ ನೀಡಿರುವ ಟಿಸಿಗೆ ವಿದ್ಯುತ್ ಸಂಪರ್ಕವನ್ನು ನೀಡಬೇಕು ಇಲ್ಲದರೆ ನನಗೆ ಬೆಳೆ ನಷ್ಟವಾದರೆ ಜೆಸ್ಕಾಂ ಅಧಿಕಾರಿಗಳೆ ನೇರ ಹೊಣೆಯಾಗುತ್ತಾರೆ ಎಂದು ಆರೋಪಿಸಿದ್ದಾರೆ.