ಬೆಳೆಗಳಿಗೆ ತುಕ್ಕು ರೋಗ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಜು 15: ಕಿತ್ತೂರ ಹೋಬಳಿಯಲ್ಲಿ ಅಲ್ಪಸ್ವಲ್ಪ ಮಳೆಯಾದರಿಂದ ಬಿತ್ತನೆಯ ಕಾರ್ಯ ಪ್ರಾರಂಭವಾಗಿದ್ದು ಬಿತ್ತಿದ ಬೀಜ ಮೊಳಕೆ ಒಡೆದಿವೆ. ಎಂದು ಕೃಷಿ ಅಧಿಕಾರಿ ಮಂಜುನಾಥ ಕೆಂಚರಾವುತ ಹೇಳಿದ್ದಾರೆ.
ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬೆಳೆಗಳಿಗೆ ರೋಗ ಮತ್ತು ಕೀಟಬಾದೆ ಹೆಚ್ಚಾಗಿ ಕಂಡು ಬರಲಿದ್ದು ರೈತ ಬಾಂಧವರು ಕಾಲ-ಕಾಲಕ್ಕೆ ಸಮಗ್ರ ರೋಗ ನಿರ್ವಹನಾ ಕ್ರಮಗಳನ್ನು ಕೈಗೊಳ್ಳಲು ಕಿತ್ತೂರ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬೇಕೆಂದರು.
ಮೊಡ ಕವಿದ ವಾತಾವರಣದಿಂದ ಬೆಳೆಗಳಿಗೆ ಕುಂಕುಮ ಮತ್ತು ಬಂಡಾರ (ತುಕ್ಕು) ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ ಒಂದುಎಂಎಲ್, ಪ್ರಾಪಿಕೊನಾಜೋಲ್ ಹಾಗೂ 5 ಗ್ರಾಂ. 13.0.45 ನೀರಿನಲ್ಲಿ ಕರಗುವ ರಸಗೊಬ್ಬರ ಸಿಂಪಡಿಸಬೇಕೆಂದರು.
ಈ ವೇಳೆ ಕೃಷಿ ಸಿಬ್ಬಂದಿ ಉಪಸ್ಥಿತರಿದ್ದರು.