ಬೆಳೆಗಳಿಗೆ ಕೀಟಬಾಧೆ

ಲಕ್ಷ್ಮೇಶ್ವರ,ಜು.22: ಜುಲೈ ತಿಂಗಳಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ಭೂಮಿಯಲ್ಲಿನ ತೇವಾಂಶದ ಹೆಚ್ಚಳ ಮತ್ತು ಬಿಸಿಲಿನ ಕೊರತೆಯಿಂದಾಗಿ ಬೆಳೆಗಳಿಗೆ ಕೀಟಭಾದೆ, ರೋಗಭಾಧೆ ಕಾಣಿಸಿಕೊಂಡಿದ್ದು ಇದು ರೈತರನ್ನು ಚಿಂತೆಗೀಡು ಮಾಡಿದೆ.
ಈಗ ರೈತರು ಕೃಷಿಯಲ್ಲಿ ಆಧುನಿಕತೆಯತ್ತ ಮತ್ತು ತಂತ್ರಜ್ಞಾನದತ್ತ ಹೆಚ್ಚು ಒಲವು ತೋರಿಸುತ್ತಿರುವುದರಿಂದ ಮೊದಲಿನಷ್ಟು ಸಮಸ್ಯೆಯಾಗದಿದ್ದರೂ ಇನ್ನೂ ಕೆಲವು ಕೆಲಸಗಳಿಗಾಗಿ ಕೃಷಿ ಕೂಲಿ ಕಾರ್ಮಿಕರನ್ನೇ ನಂಬಿಕೊಂಡು ಕುಳಿತುಕೊಳ್ಳುವ ಸ್ಥಿತಿ ಇತ್ತು.
ಅದರಲ್ಲೂ ವಿಶೇಷವಾಗಿ ಕ್ರಿಮಿಕೀಟಗಳಿಗೆ ಕೀಟನಾಶಕ ಸಿಂಪಡಿಸಲು ಕೃಷಿ ಕಾರ್ಮಿಕರನ್ನು ನಂಬಿಕೊಂಡೆ ಇರಬೇಕಾಗಿತ್ತು.
ಆದರೆ ಬೆಂಗಳೂರಿನ ಕ್ರಿಯಾಜೀನ್ ಆಗ್ರೋ ಅಂಡ್ ಪ್ರೈವೇಟ್ ಲಿಮಿಟೆಡ್ ನವರು ವಿಶೇಷವಾದ ಅಗ್ರಿ ಡ್ರೋಣ ವಿಶೇಷ ಮಾದರಿಯ ಹೆಲಿಕ್ಯಾಪ್ಟರ್ ರೀತಿಯ ಯಂತ್ರವನ್ನು ಸಿದ್ಧಪಡಿಸಿದ್ದು ಅದು ಈಗ ರೈತರ ಪಾಲಿಗೆ ವರದಾನವಾಗಿದೆ.
ಈ ದ್ರೋಣ 5 ರಿಂದ 10 ನಿಮಿಷದಲ್ಲಿ ಒಂದು ಎಕರೆ ಜಮೀನಿಗೆ ಕ್ರಿಮಿನಾಶಕ ಸಿಂಪಡಿಸುವ ರಿಮೋಟ್ ಆಧಾರಿತ ಯಂತ್ರ ಆಗಸದಲ್ಲಿ ಹಾರಾಡುತ್ತಾ ಹೆಲಿಕ್ಯಾಪ್ಟರ್ ರೀತಿ ಸಪ್ಪಳ ಮಾಡುತ್ತಾ ಸಿಂಪಡಣೆ ಮಾಡುವುದು ರೈತರಿಗೆ ಖುಷಿ ತಂದಿದೆ. ಪ್ರತಿದಿನ 40 ರಿಂದ 50 ಎಕರೆ ಜಮೀನಿಗೆ ಸಿಂಪಡಣೆ ಮಾಡುವ ಸಾಮರ್ಥ್ಯವನ್ನು ಈ ಡ್ರೋಣ ಹೊಂದಿದೆ.
ಆಂಧ್ರ ಮೂಲದ ಜಿತೇಂದ್ರ ರಿಮೋಟ್ ಆಪರೇಟರ್ ಆಗಿದ್ದು ಅವರು ಹೇಳುವ ಪ್ರಕಾರ ಈ ಡ್ರೋಣ 10 ಲೀಟರ್ ನೀರಿನ ಸಾಮರ್ಥ್ಯದ ಟ್ಯಾಂಕರ್ ಹೊಂದಿದ್ದು ಅದಕ್ಕೆ ಕ್ರಿಮಿನಾಶಕ್ಕೆ ಬೆರೆಸಿ ಸಿಂಪಡಣೆ ಮಾಡಲಾಗುವುದು ಎಂದರು. ಇದನ್ನು ಉಪಯೋಗಿಸುವುದರಿಂದ ರೈತರಿಗೆ ನೀರಿನ ಉಳಿತಾಯ ಕಾರ್ಮಿಕರ ಕೊರತೆಯ ಸಮಸ್ಯೆಯನ್ನು ಬಗೆಹರಿಸಲಿದೆ ಎಂದರು. ಈಗಾಗಲೇ ಕರ್ನಾಟಕದ ಬೆಳಗಾವಿ, ದಾವಣಗೆರೆ, ಚಿಕ್ಕೋಡಿ, ಗದಗ, ಬೆಂಗಳೂರು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಿದ್ದು, ಇದುವರೆಗೆ 2,000 ಎಕರೆ ಪ್ರದೇಶದಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ ಎಂದರು.
ಈಗಾಗಲೇ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಜಿತೇಂದ್ರ ನೇತ್ರತ್ವದ ತಂಡ ಕಾರ್ಯ ನಿರ್ವಹಿಸುತ್ತಿದ್ದು ರೈತರ ಪಾಲಿನ ಅಗ್ರಿ ಡ್ರೋಣ ಪಡೆಯಲು ರೈತರು 9113822012 ಸಂಪರ್ಕಿಸಬಹುದಾಗಿದೆ ಎಂದರು.