ಬೆಳೆಗಳಲ್ಲಿ ಮೊಳಕಾಲುದ್ದಕ್ಕೂ ನೀರು ಹೆಚ್ಚು ಬೆಳೆಗಳು ಹಾನಿ

ಸೇಡಂ, ಜು,14: ತಾಲೂಕಿನಲ್ಲಿ ಕಳೆದೊಂದು ವಾರದಿಂದ ಮಳೆ ಸುರಿಯುತ್ತಿದ್ದು ತೊಗರಿ, ಹೆಸರು ,ಉದ್ದು ,ಸೋಯಬಿನ್,ಹತ್ತಿ ಇನ್ನಿತರ ಬೆಳೆಗಳಲ್ಲಿ ಮೊಳಕಾಲುದ್ದಕ್ಕೂ ನೀರು ನಿಂತಿದ್ದು ಬಿಜನಳ್ಳಿ, ಬೀರನಹಳ್ಳಿ, ಸಂಗಾಮಿ, ಮಳಖೇಡ, ಹೂಡಾ ಇನ್ನಿತರ ಗ್ರಾಮಗಳಲ್ಲಿ ಹೆಚ್ಚು ಬೆಳೆಗಳು ಹಾನಿಯಾಗಿದ್ದು ಕಂಡು ಬಂದಿದೆ.

ತಾಲೂಕಿನ ಎಲ್ಲಾ ರೈತರು ತೊಗರಿ, ಹೆಸರು ,ಉದ್ದು ,ಸೋಯಬಿನ್, ಹತ್ತಿ, ಇನ್ನಿತರ ಬೆಳೆಗಳ ಮೇಲೆ ವಿಮೆ ಇದೇ ತಿಂಗಳ 31 ರವರೆಗೆ ಮಾಡಿಸಿಕೊಳ್ಳಲು ಅವಕಾಶವಿದ್ದು ಇದರ ಉಪಯೋಗ ತೆಗೆದುಕೊಂಡು ರೈತರಿಗೆ ಹಾನಿಗೊಳಗಾದ ಬೆಳೆಗಳ ಮೇಲೆ ಸರ್ಕಾರ ಪರಿಹಾರ ಕಲ್ಪಿಸಿಕೊಡಲಾಗುತ್ತದೆ.

ಹಂಪಣ್ಣ ವೈ ಎಲ್
ಸಹಾಯಕ ಕೃಷಿ ನಿರ್ದೇಶಕರು ಸೇಡಂ.


ಈಗಾಗಲೇ ಕೃಷಿ ಇಲಾಖೆಯಿಂದ ತೊಗರಿ ಹೆಸರು ಉದ್ದು ಇನ್ನಿತರ ಬೆಳೆಗಳು ನಾವು ತೆಗೆದುಕೊಂಡು ಭೂಮಿಗೆ ಬಿತ್ತಿದ್ದೇವೆ ಒಂದು ವಾರದಿಂದ ಮಳೆ ಸುರಿತ್ತಿದ್ದು ಬೆಳೆಗಳು ಸಂಪೂರ್ಣ ಹಾನಿಯಾಗಿದೆ ಸರ್ಕಾರವು ಮತ್ತೊಮ್ಮೆ ತೊಗರಿ, ಹೆಸರು ,ಉದ್ದು ,ಸೋಯಬಿನ್, ಹತ್ತಿ, ಕೊಡುವಂತ ವ್ಯವಸ್ಥೆ ಮಾಡಬೇಕು ಹಾಗೂ ಪರಿಹಾರ ಕೊಡಬೇಕು.

ಶರಣಪ್ಪ ಪೂಜಾರಿ, ಸಿದ್ದಪ್ಪ ಪೂಜಾರಿ
ಬಿಜನಳ್ಳಿ ರೈತರು