ಬೆಳಿಗ್ಗೆ 10ರ ವರೆಗೆ ಮಾತ್ರ ಖರೀದಿಗೆ ಅವಕಾಶ ಜನ ಜಂಗುಳಿಯಿಂದ ತುಂಬಿದ ರಸ್ತೆಗಳು

ಹೊಸಪೇಟೆ ಮೇ1: ಜನತಾಕಪ್ರ್ಯೂ ನಿಯಮ ಮೀರಿದರೆ ವ್ಯಾಪಾರಸ್ಥರಿಗಷ್ಟೆ ಅಲ್ಲ ಸಾರ್ವಜನಿಕರಿಗೂ ದಂಡಕ್ಕೆ ಮುಂದಾಗುತ್ತಿರುವ ಸರ್ಕಾರದ ಕ್ರಮದ ಹಿನ್ನೆಲೆಯಲ್ಲಿ ಭಾನುವಾರ ನಗರದ ಬಹುತೇಕ ರಸ್ತೆಗಳು ಜನ ಜಂಗುಳಿಯಿಂದ ತುಂಬಿ ತುಳುಕುತ್ತು.
ಬೆಳಿಗ್ಗೆ 10 ಗಂಟೆಯವರಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದರೂ ಶನಿವಾರ ರಾತ್ರಿ ವಿಸ್ತೂರಿಸಿ ಆದೇಶವೊಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದೆಯಾದರೂ ಯಾರು ದೃಢೀಕರಿಸಲು ಮುಂದಾಗುತ್ತಿಲ್ಲಾ ಈ ಹಿನ್ನೆಲೆಯಲ್ಲಿಯೇ ಜನರು ಸಹ ಯಾಕೆ ಬೇಕು ಸುಮ್ಮನೆ 10 ಗಂಟೆಯೊಳಗೆ ಖರೀದಿ ಮುಗಿಸಿದರಾಯಿತು ಎಂದು ತಮ್ಮ ಗಡಿಬಿಡಿಯಲ್ಲಿ ತೊಡಗಿರೊದು ಸಾಮಾನ್ಯವಾಗಿದ್ದ ಹಿನ್ನೆಲೆಯಲ್ಲಿ ಜನಜಂಗುಳಿ ಕಾಣುತ್ತಿತು
ಈ ಮಧ್ಯ ಹೊಸಪೇಟೆ ಉಪವಿಭಾಗದ ಸಹಾಯಕ ಆಯುಕ್ತರಾದ ಸಿದ್ಧರಾಮೇಶ್ವರ ಸಂಜೆವಾಣಿಯೊಂದಿಗೆ ಮಾತನಾಡಿ ನಿನ್ನೆ ತಡವಾಗಿ ಆದೇಶ ಆಗಿರುವುದರಿಂದ ಸಣ್ಣಮಟ್ಟದ ಗೊಂದಲವಿದೆ ಅದನ್ನ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸಾರ್ವಜನಿಕರ ಗೊಂದಲ ಸರಿಪಡಿಸುವುದಾಗಿ ಹೇಳಿದರು. ಈ ಮಧ್ಯ ನಿಯಮ ಬದ್ಧವಾಗಿ ಕಾಯಾಚರಣೆ ಮಾಡಿದರೂ ಪರವಾಗಿಲ್ಲ ಎಂದರು.
ಅನಗತ್ಯ ತಿರುಗಾಟ:
ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನರು ಸುಮ್ಮನೆ ತಿರುಗಾಡುವ ದೃಶ್ಯ ಕಂಡು ಬಂದಿತು. ಕೆಲವರು ಮಾಸ್ಕ್ ಧರಿಸಿದೇ ರಸ್ತೆ ಅಕ್ಕ-ಪಕ್ಕದಲ್ಲಿ ಇರುವ ದೃಶ್ಯ ಸಾಮಾನ್ಯವಾಗಿತ್ತು. ಬೇಕಾಬಿಟ್ಟಿ ರಸ್ತೆಯಲ್ಲಿ ತಿರುಗಾಡುವ ಜನರು ಕೂಡಲೇ ಮನೆ ಸೇರಿಕೊಳ್ಳಬೇಕು ಎಂದು ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡುತ್ತಿರುವ ಪೊಲೀಸರು ಲಾಟಿರುಚಿ ತೋರಿಸುವ ದೃಶ್ಯಗಳು ಸಹ ಕಂಡುಬಂದವು.