ಬೆಳವಾಟ ಪ್ರೀಮಿಯರ್ ಲಿಂಗ್ ಆರಂಭ

ಮಾನ್ವಿ,ಮಾ.೦೭- ಕ್ರೀಡೆಯಿಂದಾಗಿ ಗ್ರಾಮೀಣ ಭಾಗದ ಯುವಕರಲ್ಲಿ ಆತ್ಮೀಯ ಬಾಂಧವ್ಯದ ಸಂಬಂಧಗಳು ಗಟ್ಟಿಯಾಗುತ್ತದೆ ಹಾಗೂ ಇತರೆ ಗ್ರಾಮದ ಯುವಕರಿಗೆ ಕ್ರೀಡೆ ಮನೋಭಾವನೆ ಮೂಡುತ್ತದೆ. ಬೆಳವಾಟ ಸೇರಿದಂತೆ ಭಾಗವಹಿಸಿದ ಕ್ರಿಕೆಟ್ ಸ್ಪರ್ಧಾಳುಗಳಿಗೆ ಕಾಂಗ್ರೆಸ್ ಯುವ ಮುಖಂಡ ಎಸ್.ಎಂ ಪಾಟೀಲ ಹುರಿದುಂಬಿಸಿದರು.
ಬೆಳವಾಟ ಪ್ರೀಮಿಯರ್ ಲೀಗ್ ಕ್ರಿಕೆಟ್ ಸ್ಪರ್ಧೆಯ ಮೊದಲ ಪಂದ್ಯವನ್ನು ಮರಿಬಸವರಾಜ ಸ್ವಾಮಿ ಉಟಕನೂರು ಇವರು ಉದ್ಘಾಟನೆ ಮಾಡಿ ಆಶೀರ್ವಾಚನ ನೀಡಿದರು. ನಂತರ ಎಸ್.ಎಂ ಪಾಟೀಲ ಮಾತಾನಾಡಿ, ಈ ಕ್ರೀಡೆಯಿಂದಾಗಿ ಮನಸ್ಸೋಲ್ಲಾಸದ ಜೊತೆಗೆ ಗಟ್ಟಿತನದ ಬಾಂಧವ್ಯ ಬೆಳೆಯುತ್ತದೆ ಬೆಳವಾಟ ಗ್ರಾಮದ ಯುವಕರಂತೇ ನಮ್ಮ ಸುತ್ತಮುತ್ತಲಿನ ಗ್ರಾಮದ ಯುವಕರು ಕ್ರೀಡಾ ಆಸಕ್ತಿಯನ್ನು ಬೆಳಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸ್ಪರ್ಧೆ ವಿಜೇತರಿಗೆ ಪ್ರಥಮ ಬಹುಮಾನ ೩೫ ಸಾವಿರ ಶಾಸಕ ವೆಂಕಟಪ್ಪ ನಾಯಕ, ದ್ವೀತಿಯ ಬಹುಮಾನ ೨೫ ಸಾವಿರ ಗೋಪಾಲ ನಾಯಕ ಮಾಜಿ ಜಿಲ್ಲಾ ಪಂಚಾಯತ ಸದಸ್ಯ, ತೃತೀಯ ಬಹುಮಾನ ೧೫ ಸಾವಿರ ಎಸ್ ಎಂ ಪಾಟೀಲ ಉದ್ಬಾಳ, ಜೊತೆಗೆ ಇನ್ನುಳಿದ ಬಹುಮಾನವನ್ನು ಇತರರು ಕೊಡುಗೆಯಾಗಿ ನೀಡಲಿದ್ದಾರೆ ಎಂದು ಕ್ರೀಡಾ ಆಯೋಜಕರು ತಿಳಿಸಿದ್ದಾರೆ.