ಬೆಳವಾಟ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ

ಮಾನ್ವಿ,ಮಾ.೩೧- ತಾಲೂಕಿನ ಬೆಳವಾಟ ಗ್ರಾಮದ ಯುವಕರು ನಡೆಸಿಕೊಟ್ಟಿರುವ ಬೆಳವಾಟ ಪ್ರೀಮಿಯರ್ ಲೀಗ್ ಕ್ರಿಕೆಟ್ ಆಟದಲ್ಲಿ ವೆಂಕನಗೌಡ ಪೋಲಿಸ್ ಪಾಟೀಲ ತಂಡದವರು ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದು ಇದನ್ನು ಜೆ ಡಿ ಎಸ್ ಯುವ ಮುಖಂಡ ರಾಮಚಂದ್ರ ನಾಯಕ ಇವರು ೩೫ ಸಾವಿರ ನಗದು ಹಾಗೂ ಟ್ರೋಫಿಯನ್ನು ವಿತರಣೆ ಮಾಡಿದರು.
ನಂತರ ದ್ವೀತಿಯ ಬಹುಮಾನವನ್ನು ಮಾಜಿ ಶಾಸಕ ಗಂಗಾಧರ ನಾಯಕ ಇವರು ದ್ವೀತಿಯ ಸ್ಥಾನ ಪಡೆದ ಅಪ್ಪು ವಾರಿಯರ್ಸ್ ತಂಡಕ್ಕೆ ೨೫ ಸಾವಿರ ನಗದು ಟ್ರೋಫಿ, ಹಾಗೂ ತೃತೀಯ ಸ್ಥಾನ ಪಡೆದ ಹೆಬ್ಬುಳಿ ಬಾಯ್ಸ್ ತಂಡದವರಿಗೆ ಯುವ ಮುಖಂಡ ಎಸ್‌ಎಂ ಪಾಟೀಲ ಇವರು ೧೫ ಸಾವಿರ ನಗದು ಹಾಗೂ ಟ್ರೋಫಿಯನ್ನು ವಿತರಣೆ ಮಾಡಿದರು. ನಂತರ ವಿವಿಧ ವಿಭಾಗದಲ್ಲಿ ಅತ್ಯುತ್ತಮ ಸ್ಥಾನ ಪಡೆದಿರುವ ಆಟಗಾರರಿಗೆ ಬಹುಮಾನ ಹಾಗೂ ನೆನಪಿನ ಕಾಣಿಕೆಯನ್ನು ವಿತರಣೆ ಮಾಡಿದರು, ಆಟದಲ್ಲಿ ಪಲ್ಗೋಂಡ ಯುವಕರು ಗೆಲುವಿನ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರಾದ ದುರಗಪ್ಪ ಬೆಳವಾಟ್, ಯಂಕನಗೌಡ,ಅಯ್ಯಪ್ಪ, ತಮ್ಮಣ, ಹನುಮೇಶ,ಪಂಪಾಪತಿ, ದೊಡ್ಡ ಕನಕಪ್ಪ, ವೆಂಕಟೇಶ ಗ್ರಾಂ ಪ ಸದಸ್ಯ,ರಾಮಣ್ಣ, ಗೋಂವಿದಪ್ಪ ಮಾಜಿ ಅಧ್ಯಕ್ಷರು ,ಅಜೀತ ಬೆಳವಾಟ, ಬಾಳಪ್ಪ ಬೆಳವಾಟ ಸೇರಿದಂತೆ ನೂರಾರು ಯುವಕರು ಇದ್ದರು.