ಬೆಳವಣಿಗೆ ಕುಂಠಿತವಿರುವ ಮಕ್ಕಳೂ ಸಮಾಜದ ಮುಖ್ಯವಾಹಿನಿಗೆ ಬರಲಿ

ಕಲಬುರಗಿ,ಡಿ.20-ಬೆಳೆವಣಿಗೆ ಕುಂಠಿತವಿರುವ ಮಕ್ಕಳನ್ನು ಸಾÀಮಾನ್ಯ ಮಕ್ಕಳೊಡನೆ ಕಲಿಯಲು ಅವಕಾಶ ಮಾಡಿಕೊಟ್ಟು ಅವರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಲು ಅವಕಾಶ ಕಲ್ಪಿಸಬೇಕು ಎಂದು ಕಲಬುರಗಿ ಧರ್ಮಕ್ಷೇತ್ರದ ಫಾದರ್ ಸ್ಟ್ಯಾನಿ ಲೋಬೋ ಹೇಳಿದರು.
ನಗರದ ಮದರ್ ತೆರೆಸಾ ಸಭಾಂಗಣದಲ್ಲಿ ಸೇವಾ ಸಂಗಮ ಸಂಸ್ಥೆ ಮತ್ತು ಅಜೀಮ್ ಪ್ರೇಮಜೀ ಫೌಂಡೇಶನ ಆಶ್ರಯದಲ್ಲಿ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂತ ಮೇರಿ ಚರ್ಚನ ಮುಖ್ಯಗುರು ಫಾದರ್ ಪ್ರವೀಣ್ ಜೋಸೆಫ್ ಅವರು ಮಾತನಾಡುತ್ತ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಒಳ್ಳೆಯ ಪೌಷ್ಠಿಕ ಆಹಾರವನ್ನು ಕೊಟ್ಟು ಬೆಳೆಸಬೇಕು ಎಂದರು.
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಜೈ ಪ್ರಕಾಶ ಅವರು ಮಾತನಾಡಿ, ಜಿಲ್ಲಾ ವಿಕಲಚೇತನರ ಪುನರವಸತಿ ಕೇಂದ್ರದಡಿಯಲ್ಲಿ ಬರುವಂತಹ ಸೌಲಭ್ಯಗಳ ಕುರಿತು ವಿಕಲಚೇತನ ಮಕ್ಕಳಿಗೆ ಮತ್ತು ಪಾಲಕರಿಗೆ ತಿಳಿಸಿದರು. ಜೊತೆಗೆ ಸೇವಾ ಸಂಗಮ ಸಂಸ್ಥೆ ಸಮಾಜಕ್ಕೆ ನೀಡುತ್ತಿರುವ ಸೇವೆ ಶ್ಲಾಘನಿಯವಾದುದ್ದಾಗಿದೆ ಎಂದು ಪ್ರಂಶಸಿದರು.
ಥೆರೆಫಿಸ್ಟ್ ಸದಾನಂದ ಅವರು ಮಾತನಾಡುತ್ತ, ಸೇವಾ ಸಂಗಮ ಸಮಾಜ ಸೇವಾ ಸಂಸ್ಥೆ ಸುಮಾರು 17 ವರ್ಷಗಳಿಂದ ಕಲಬುರಗಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿವಿಧ ಯೋಜನೆಯ ಮೂಲಕ ಸಮಾಜದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತ ಬಂದಿದೆ. ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳು ಜನರಿಗೆ ತಲೂಪುವ ಹಾಗೆ ಸಂಸ್ಥೆ ಶ್ರಮಿಸುತ್ತಿದೆ ಎಂದು ಹೇಳಿದರು.
ಸೇವಾ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ವಿಕ್ಟರ್ ವಾಸ್ ಮತ್ತು ಸಹ ನಿರ್ದೇಶಕÀ ಫಾದರ್ ದೀಪಕ, ಕಾರ್ಯಕ್ರಮದ ಸಂಯೋಜಕಿ ಶ್ವೇತಾ, ಕಾರ್ಯಕರ್ತರು 44 ಪಾಲಕರು ಮತ್ತು ಮಕ್ಕಳು ಭಾಗವಹಿಸಿದರು.
ಶ್ವೇತಾ ಸ್ವಾಗತಿಸಿದರು. ಶಿವಕಾಂತ ನಿರೂಪಿಸಿದರು. ಜಗದೇವಿ ವಂದಿಸಿದರು.