ಬೆಳವಣಕಿ ಆಯ್ಕೆ

ನವಲಗುಂದ, ನ 14: ಸರಕಾರದ ಆದೇಶದಂತೆ ಕರ್ನಾಟಕ ರಾಜ್ಯ ಕಬ್ಬು ನಿಯಂತ್ರಣ ಮಂಡಳಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರಾದ ತಾಲೂಕಿನ ಅಳಗವಾಡಿ ಗ್ರಾಮದ ಬಸಣ್ಣ ಮಹಾದೇವಪ್ಪ ಬೆಳವಣಕಿ ಅವರನ್ನು ನೇಮಿಸಿ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ಸಕ್ಕರೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎನ್. ರಾಜಶೇಖರ ಅವರು ಆದೇಶ ಹೊರಡಿಸಿದ್ದಾರೆ.