ಬೆಳಮಗಿ ; ಮುರಾರ್ಜಿ ಶಾಲೆಗೆ ರಸ್ತೆ ನಿರ್ಮಿಸಲು ಒತ್ತಾಯ

ಆಳಂದ ;ಎ.22: ತಾಲೂಕಿನ ಬೆಳಮಗಿಯಲ್ಲಿ ಇರುವ ಮುರಾರ್ಜಿ ವಸತಿ ಶಾಲೆಗೆ ಸರಿಯಾದ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಕರ್ನಾಟಕ ಮಾದಿಗ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ಸುನೀಲ ಸಲಗರೆ ಆಗ್ರಹಿಸಿದ್ದಾರೆ.ಗ್ರಾಮದ ಶೈಕ್ಷಣಿಕ ಪ್ರಗತಿಗಾಗಿ ಮುರಾರ್ಜಿ ವಸತಿ ಶಾಲೆ ಆರಂಭಿಸಲಾಗಿದೆ.ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಗ್ರಾಮದಿಂದ 1 ಕೀಮಿ ದೂರದಲ್ಲಿ ಇದ್ದು ಶಾಲೆಗೆ ಹೋಗಲು ಸರಿಯಾದ ರಸ್ತೆ ಮಾತ್ರ ಇಲ್ಲ ಹೋಗುವ ರಸ್ತೆ ಸಂಪೂರ್ಣವಾಗಿ ಕೆಟ್ಟು ಹೋಗಿದ್ದ ನಡೆಯಲು ಕೂಡಾ ಸಾದ್ಯವಾಗಷ್ಟು ಹಾಳಾಗಿದೆ ಇದರಿಂದ ಶಾಲೆಗೆ ಹೋಗುವ ಸಿಬ್ಬಂದಿಗಳಿಗೆ ವಿದ್ಯಾಥಿಗಳಿಗೆ ತುಂಬಾ ತೊಂದರೆ ಆಗುತ್ತಿದೆ ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.