ಬೆಳಗು ಸಂಸ್ಥೆಯಿಂದ ಬಡವರಿಗೆ ಅಲ್ಪ ನೆರವು

ಬೀದರ:ಮೇ.31: ಕೋವಿಡ್ ಮಹಾಮಾರಿಯ ಪ್ರಭಾವಕ್ಕೆ ತುತ್ತಾಗಿ ತತ್ತರಿಸಿ ಹೋದ ಸಮಯದಲ್ಲಿ ನಗರದ ಹೊರವಲಯದ ನೌಬಾದನಲ್ಲಿ ಬೀಡು ಬಿಟ್ಟಿದ್ದ ಸುಮಾರು ಐವತ್ತು ಅಲೆಮಾರಿ ಬಡ ಕುಟುಂಬಗಳಿಗೆ ಭಾನುವಾರ ಬೆಳಗು ಸಾಂಸ್ಕೃತಿಕ ಹಾಗೂ ಸಾಮಾಜಿಕ ಟ್ರಸ್ಟ್ ವತಿಯಿಂದ ಅಕ್ಕಿ, ಬೇಳೆ ಕಿಟ್ ವಿತರಣೆ ಮಾಡಲಾಯಿತು.

ದುಡಿಮೆಯೇ ಇಲ್ಲದ ಈ ಸಮಯದಲ್ಲಿ ಬಡವರಿಗೆ ಅಳಿಲು ಸೇವೆ ಮಾಡಿ ಬೆಳಗು ಸಂಸ್ಥೆ ಮಾನವೀಯತೆ ಮೆರೆದಿದೆ.

ಸಂಸ್ಥೆಯ ಅಧ್ಯಕ್ಷ ಅನೀಲಕುಮಾರ್ ದೇಶಮುಖ, ಕಾರ್ಯದರ್ಶಿ ಗುರುದೇವ, ಪದಾಧಿಕಾರಿಗಳಾದ ರವಿ ಮೂಲಗೆ, ಡಾ.ವಿ.ವಿ.ನಾಗರಾಜ, ಆಬೇದ್ ಅಲಿ ಖಾನ, ಮಲ್ಲಿಕಾರ್ಜುನ ಶೀಲವಂತ, ಡಾ.ಡಿ.ಎ.ಪಾಟೀಲ ಹಾಗೂ ಖಜಾಂಚಿ ನಾಗಶೆಟ್ಟಿ ಲಕೋಟಿ ಉಪಸ್ಥಿತರಿದ್ದರು.