ಬೆಳಗಿನ ಜಾವ ನಡೆದ ಕುರುಗೋಡು ದೊಡ್ಡಬಸವೇಶ್ವರ ರಥೋತ್ಸವ

ಬಳ್ಳಾರಿ, ಮಾ.28: ಜಿಲ್ಲೆಯ ಕುರುಗೋಡು ಪಟ್ಟದ ಆರಾಧ್ಯ ದೈವ, ಐತಿಹಾಸಿಕ ಶ್ರೀ ದೊಡ್ಡಬಸವೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಭಕ್ತರ ಹರ್ಷೋದ್ಘಾರಗಳ ನಡುವೆ ನಡೆಯಿತು.
ಪ್ರತಿವರ್ಷ ಸಂಜೆ ವೇಳೆ ನಡೆಯುತ್ತಿತ್ತು ರಥೋತ್ಸವ ಆದರೆ.ಕೋವಿಡ್ ಸೋಂಕಿನ ಎರಡನೇ ಅಲೆಯ ಹಿನ್ನಲೆಯಲ್ಲಿ ರಥೋತ್ಸವ ಮತ್ತು ದೇವರ ದರ್ಶನವನ್ನು ಸಹ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.

ಅದಕ್ಕಾಗಿ ಭಕ್ತ ಸಮೂಹ ಜಿಲ್ಲಾಡಳಿತದ ಆದೇಶವನ್ನು ಲೆಕ್ಕಿಸದೇ ಸಿದ್ದಪಡಿಸಿದ್ದ ರಥವನ್ನು ಜಯ ಘೋಷಣಗಳ ಮಧ್ಯೆ ಒಂದಿಷ್ಟು ದೂರ ಎಳೆದು ತಮ್ಮ ಭಕ್ತಿ ಸಮರ್ಪಿಸಿದರು.
ಮಲ್ಲಿಗೆ ಹೂವಿನ ಮೂಲಕ ದೊಡ್ಡ ಬಸವೇಶ್ವರ ವಿಗ್ರಹವನ್ನು ಅಲಂಕರಿಸಲಾಗಿದೆ. ಅದಕ್ಕೂ ಮುನ್ನ ರುದ್ರಾಭಿಷೇಕ, ಪೂಜೆ ನಡೆಯಿತು. ದೊಡ್ಡ ಬಸವೇಶ್ವರ ಮನೆ ದೇವರನ್ನಾಗಿಸಿಕೊಂಡಿರುವ ನೂರಾರು ಭಕ್ತ ಸಮೂಹ ಈ ಸಂದರ್ಭದಲ್ಲಿ ಇದ್ದು ನಮನ ಸಲ್ಲಿಸಿದರು.
ಮುಂಜಾನೆಯ ನಂತರ ದೇವರ ದರ್ಶನಕ್ಕೆ ನಿರ್ಬಂಧ ವಿಧಿಸಿದೆ.