ಬೆಳಗಿನ ಜಾವದಿಂದಲೇ ಲಸಿಕೆಗಾಗಿ ಲೈನ್

ಬಳ್ಳಾರಿ, ಮೇ.29: ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿನ‌ ಕೋವಿಡ್ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಲು ಜನತೆ ಬೆಳಗಿನ ಜಾವ ಐದು ಗಂಟೆಯಿಂದಲೇ ಇಂದು ಸಾಲುಗಟ್ಟಿ‌ ನಿಂತಿದ್ದರು.
ಲಸಿಕೆ ನೀಡಿಕೆ ಆರಂಭವಾಗುವುದು ಬೆಳಿಗ್ಗೆ 10 ಗಂಟೆಯಿಂದ, ಆದರೂ ಬೆಳಗಿನ‌ಜಾವ ಬಂದ ಜನ‌ ಉಪಹಾರ ಇಲ್ಲದೆ ಪರಿತಪ್ಪಿಸುತ್ತಿದ್ದುದು ಕಂಡು‌ಬಂತು.
ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಉಪಹಾರ ಇದ್ದರು ಸಾಲು ಬಿಟ್ಟು ಹೋಗಲು ಆಗುತ್ತಿರಲಿಲ್ಲ. ಅದಕ್ಕಾಗಿ‌ ಬೆಳಿಗ್ಗೆ ಬಂದವರಿಗೆ ‌ಲಸಿಕೆಯ ದಾಸ್ತಾನಿಗೆ ಅನುಗುಣವಾಗಿ ಟೋಕನ್ ನೀಡಿದರೆ ಅದನ್ನು ಪಡೆದು ನಂತರ ಉಪಹಾರ ಮಾಡಿಕೊಂಡು‌ ಬಂದು ಲಸಿಕೆ ಪಡೆಯಲು ಸಹಾಯ ಆಗುತ್ತದೆ ಎಂದು ಸಾಲಿನಲ್ಲಿ ‌ನಿಂತವರ ಅಭಿಪ್ರಾಯವಾಗಿತ್ತು.