ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ಸುಳ್ಳು ವದಂತಿ ನಂಬಬೇಡಿ: ಎಸ್‍ಪಿ ಸಂಜೀವ ಪಾಟೀಲ

ಅಥಣಿ /ಬೆಳಗಾವಿ :ಸೆ.15: ಜಿಲ್ಲೆಯಲ್ಲಿ ಯಾವುದೇ ಮಕ್ಕಳ ಕಳ್ಳತನ ಪ್ರಕರಣಗಳು ಸದ್ಯದ ದಿನಗಳಲ್ಲಿ ನಡೆದಿಲ್ಲ. ಅದೇ ರೀತಿ ಮಕ್ಕಳನ್ನು ಅಪಹರಣ ಮಾಡುವುದಾಗಲಿ ಅಥವಾ ಅವರಿಗೆ ದೈಹಿಕ ಹಿಂಸೆ ನೀಡುವ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವ ನಾಗರಿಕರು ಯಾವದೇ ರೀತಿಯ ವದಂತಿಗಳನ್ನು ನಂಬಬಾರದು ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಸಂಜೀವ ಪಾಟೀಲ ಅವರು, ಬೆಳಗಾವಿ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಬೇರೆ ರಾಜ್ಯಗಳಿಂದ ಮಕ್ಕಳ ಕಳ್ಳರು ಬಂದಿದ್ದಾರೆ. ಮಕ್ಕಳನ್ನು ಹೊತ್ತುಕೊಂಡು ಹೋಗಿ ಅವರ ದೇಹದ ಭಾಗಗಳನ್ನು ತೆಗೆದು ಮಾರಾಟ ಮಾಡುತ್ತಿದ್ದಾರೆ ಎಂಬ ವದಂತಿ ಕೇಳಿ ಬಂದಿವೆ. ಈಗಾಗಲೇ ಮಾಧ್ಯಮಗಳಲ್ಲಿ ಆ ರೀತಿ ಘಟನೆಗಳು ನಡೆದಿಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು. ನಂದಗಡದಲ್ಲಿ ಒಂದು ಬಾರಿ ರಗ್ಗನ್ನು ಮಾರಲು ಬಂದವರನ್ನು ಹಿಡಿದು ಅವರು ಮಕ್ಕಳ ಕಳ್ಳರು ಎಂದು ತಿಳಿದುಕೊಂಡಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಬೇರೆ ರಾಜ್ಯದಿಂದ ರಗ್ಗ ಮಾರಲು ಬಂದು ಬೆಳಗಾವಿಯಲ್ಲಿ ವಾಸವಿರುವುದು ಖಚಿತವಾಗಿದೆ. ನಂದಗಡ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ಅಸ್ವಸ್ಥ ವ್ಯಕ್ತಿಯನ್ನು ಕರೆದುಕೊಂಡು ಬಂದು ಅವನ ಮೇಲೆ ಸಂಶಯ ಇದೆ ಎಂದು ಹೇಳಿದಾಗ. ಅವನ ವಿಚಾರಣೆ ಮಾಡಿದಾಗ ಆತ ಮನೆ ಬಿಟ್ಟು ಬಂದಿದ್ದು, ಆತನನ್ನು ಅವನ ಕುಟುಂಬಕ್ಕೆ ಸೇರಿಸಲಾಗಿತ್ತು. ಆತ ಯಾವುದೇ ರೀತಿ ಕಳ್ಳ ಆಗಿರಲಿಲ್ಲ ಎಂದರು.

ಅದೇ ರೀತಿ ಬೈಲಹೊಂಗಲ ಠಾಣಾ ವ್ಯಾಪ್ತಿಯಲ್ಲಿಯೂ ಈ ರೀತಿ ವದಂತಿಗಳು ಕೇಳಿ ಬಂದಿದ್ದವು. ವಿಚಾರಣೆ ಮಾಡಿದಾಗ, ಅಲ್ಲಿಯೂ ಈ ತರಹದ ಘಟನೆಗಳು ನಡೆದಿಲ್ಲ ಎಂಬುದು ತಿಳಿದು ಬಂದಿದೆ. ಕಿತ್ತೂರಿನಲ್ಲಿಯೂ ಸಹಿತ ಮಕ್ಕಳ ಕಳ್ಳ ಬಂದು ಮಗುವನ್ನು ಅಪಹರಿಸಲು ಪ್ರಯತ್ನ ಪಟ್ಟಿದ್ದ ಎಂಬ ಘಟನೆ ಕೇಳಿ ಬಂದ ನಂತರ ಸ್ಥಳಕ್ಕೆ ಖುದ್ದು ಬೈಲಹೊಂಗಲ ಡಿಎಸ್ಪಿ ಭೇಟಿ ನೀಡಿ, ಪರೀಶೀಲನೆ ಮಾಡಿದ ಬಳಿಕ ಇದು ಕೇವಲ ವದಂತಿ ಮಾತ್ರ ಎಂದು ತಿಳಿಸಿದ್ದಾರೆ. ಕುಲಗೋಡ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಉತ್ತರ ಭಾರತದಿಂದ ಬಂದಿದ್ದ ಕೆಲ ಸಾಧು ವೇಷಧಾರಿಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದಾಗ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಉತ್ತರ ಪ್ರದೇಶದ ಅಲಿಘಡ ಮತ್ತು ಹಾತ್ಸರ ಜಿಲ್ಲೆಗಳಿಂದ ಬಂದು ರಾಮೇಶ್ವರಕ್ಕೆ ಹೋಗುತ್ತಿದ್ದರು ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿದೆ.

ಮಂಗಳವಾರ ಶಿರಸಂಗಿ ಗ್ರಾಮಕ್ಕೆ ಬಂದಿದ್ದ ಇಬ್ಬರು ಅಪರಿಚಿತರನ್ನು ಅಲ್ಲಿನ ಜನರು ಮಕ್ಕಳ ಕಳ್ಳರೆಂದು ಭಾವಿಸಿ ಆತಂಕಗೊಂಡ ಪ್ರಕರಣ ನಡೆದಿದೆ. ಗ್ರಾಮಸ್ಥರು 112ಗೆ ಕರೆ ಮಾಡಿ ದೂರಿದ ಹಿನ್ನೆಲೆಯಲ್ಲಿ ಪೆÇಲೀಸರು ಈ ಇಬ್ಬರು ಆಗಂತುಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಇಬ್ಬರ ಜತೆ ಬಂದಿರುವ ಮತ್ತಿಬ್ಬರು ವಸತಿಗೃಹದಲ್ಲಿ ತಂಗಿದ್ದು ಇವರೆಲ್ಲ ನಾಗಪುರದ ಆಶ್ರಮವೊಂದರಿಂದ ಚಂದಾ ಸಂಗ್ರಹಿಸಲು ಬಂದವರು ಎಂದು ತಿಳಿದು ಬಂದಿದೆ ಎಂದು ಡಾ. ಸಂಜೀವ ಪಾಟೀಲ ತಿಳಿಸಿದರು.


ಇತ್ತೀಚಿನ ದಿನಗಳಲ್ಲಿ ಯಾವುದೇ ಮಕ್ಕಳ ಕಳ್ಳತನ ಪ್ರಕರಣಗಳು ಬೆಳಗಾವಿ ಜಿಲ್ಲೆಯಲ್ಲಿ ನಡೆದಿಲ್ಲ. ಮಕ್ಕಳನ್ನು ಅಪಹರಣ ಮಾಡುವುದಾಗಲಿ ಅಥವಾ ಅವರಿಗೆ ದೈಹಿಕ ಹಿಂಸೆ ನೀಡುವ ಪ್ರಕರಣಗಳು ಬೆಳಗಾವಿ ಜಿಲ್ಲೆಯಲ್ಲಿ ದಾಖಲಾಗಿಲ್ಲ.ಈ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ನಾಗರಿಕರು ಯಾರೂ ವದಂತಿಗಳನ್ನು ನಂಬಬಾರದು. ಅದೇ ರೀತಿ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ನಿಮ್ಮ ಪ್ರದೇಶದಲ್ಲಿ ಯಾರಾದರೂ ಅಪರಿಚಿತರು ಕಂಡು ಬಂದರೆ ಕೂಡಲೇ 112 ನಂಬರ್‍ಗೆ ಕರೆ ಮಾಡಿ ಪೆÇಲೀಸರಿಗೆ ಮಾಹಿತಿ ನೀಡಿ. ಸ್ಥಳಿಯ ಪೆÇಲೀಸರು ನಿಮ್ಮ ಜಾಗಕ್ಕೆ ಬಂದು ಸತ್ಯಾಸತ್ಯತೆಯನ್ನು ಪರೀಶೀಲಿಸಿ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ನಮ್ಮ ಜೊತೆ ಕೈಜೋಡಿಸಬೇಕು ಎಂದು ಜಿಲ್ಲಾ ಪೆÇಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಮನವಿ ಮಾಡಿದ್ದಾರೆ.