ಬೆಳಗಾವಿ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ತರಲು ಸಿದ್ಧ: ಸಂಸದೆ ಅಂಗಡಿ

ಬೆಳಗಾವಿ, ಮೇ 16: ಲಾಕ್‍ಡೌನ್‍ನಿಂದಾಗಿ ಎರಡು ದಿನಗಳಿಂದ ಕೋವಿಡ್ ಸೋಂಕಿನ ಪ್ರಮಾಣವೂ ಇಳಿಮುಖವಾಗಿದೆ. ಎಲ್ಲರೂ ಪಕ್ಷ ಭೇದ ಮರೆತು ಈ ಸಂಕಷ್ಟ ಸ್ಥಿತಿಯಲ್ಲಿ ಕೆಲಸ ಮಾಡಬೇಕು. ದಿ.ಸುರೇಶ ಅಂಗಡಿ ಅವರ ಕನಸಿನಂತೆ ಬೆಳಗಾವಿ ಅಭಿವೃದ್ಧಿ ಸಾಧಿಸಬೇಕು. ಇದಕ್ಕಾಗಿ ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ಕೆಲಸ ಮಾಡಲು ಸಿದ್ಧಳಿದ್ದೇನೆ ಎಂದು ಸಂಸದೆ ಮಂಗಲಾ ಅಂಗಡಿ ತಿಳಿಸಿದರು.

ಬೆಳಗಾವಿ ಸದಾಶಿವ ನಗರದಲ್ಲಿ ಇರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳಗೋಷ್ಠಿ ನಡೆಸಿ ಮಾತನಾಡದ ಅವರು, ಕೋವಿಡ್ ಸಂಕಷ್ಟ ಸ್ಥಿತಿಯ ಸವಾಲು ಎದುರಾಗಿದೆ. ಇದನ್ನು ನಿರ್ವಹಿಸಲು ರಾಜ್ಯ, ಕೇಂದ್ರ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿವೆ ಎಂದು ಅವರು ಈದೇ ವೇಳೆ ತಿಳಿಸಿದರು.

ಜಿಲ್ಲೆಯ ಸಚಿವರು, ಶಾಸಕರು, ನಾಯಕರು, ಸಂಘ, ಸಂಸ್ಥೆಗಳು ಈ ಸಂಕಷ್ಟ ಸ್ಥಿತಿಯಲ್ಲಿ ಒಂದಾಗಿ ನಿಂತು ಕೆಲಸ ಮಾಡುತ್ತಿದ್ದಾರೆ. ನಾವೆಲ್ಲ ಪಕ್ಷ ಭೇದ ಮರೆತು ಒಂದಾಗಿ ಕೆಲಸ ಮಾಡುವಂತಾಗಬೇಕು. ಬೆಳಗಾವಿಯ ಸಮಗ್ರ ಅಭಿವೃದ್ಧಿ ದಿ.ಸುರೇಶ ಅಂಗಡಿ ಅವರ ಕನಸಾಗಿತ್ತು. ಅದನ್ನು ನನಸಾಗಿಸಲು ಬದ್ಧಳಾಗಿ ಕೆಲಸ ಮಾಡುತ್ತೇನೆ.