ಬೆಳಗಾವಿಯ ಸುವರ್ಣಸೌಧ ಬಳಿ ಧರಣಿ

ಸಂಜೆವಾಣಿ ವಾರ್ತೆ

ದಾವಣಗೆರೆ. ಡಿ.8; ಡ್ರೈವಿಂಗ್ ಸ್ಕೂಲ್ ಮಾಲೀಕರ ವಿವಿಧ ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ರಾಜ್ಯ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘಗಳ ಒಕ್ಕೂಟದಿಂದ ಡಿ.೮ ರಂದು ಬೆಳಗ್ಗೆ ೯ ಗಂಟೆಗೆ ಬೆಳಗಾವಿಯ ಸುವರ್ಣಸೌಧಕ್ಕೆ ಪಾದಯಾತ್ರೆ ಮೂಲಕ. ತೆರಳಿ‌ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಫಯಾಜ್ ಅಹಮದ್ ಹೇಳಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ‌ ಸುಮಾರು 2000 ಮೋಟಾರು ಡ್ರೈವಿಂಗ್ ಸ್ಕೂಲ್ ಗಳಿವೆ  ಇದನ್ನೇ ನಂಬಿಕೊಂಡು ಸಾವಿರಾರು  ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವು 2022 ರಿಂದ ನಮಗೆ ಮಾರಕವಾದ ಹೊಸ ನೀತಿಯನ್ನು ಜಾರಿ ಮಾಡಿರುವುದು ವಿಷಾಧನಿಯ ಸಂಗತಿ, ಕೆಲವು ರಾಜ್ಯಗಳಲ್ಲಿ ಇವುಗಳನ್ನು ಅನುಷ್ಠಾನಗೋಳಿಸದೇ ಆ ರಾಜ್ಯದ ಜನರ ಅನುಕೂಲಕ್ಕೆ ತಕ್ಕಂತೆ ಕಾನೂನು ರೂಪಿಸಿಕೊಂಡಿವೆ. ಅದೇರೀತಿ ಕರ್ನಾಟಕಕ್ಕೂ ಹೊಸ ನೀತಿ ತಂದರೆ ನಮ್ಮ ಮೊಟಾರ್ ಡ್ರೈವಿಂಗ್ ಸ್ಕೂಲ್ ಗಳು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಬರಲಿದೆ.  ಈಗಾಗಲೇ  ಸಾರಿಗೆ ಆಯುಕ್ತರಿಗೂ ಮತ್ತು ಹಿಂದಿನ ಸರ್ಕಾರದ ಸಾರಿಗೆ ಸಚಿವರಿಗೂ ಹಲವು ಬಾರಿ ಮನವಿ ಪತ್ರಗಳನ್ನು ನೀಡಿದ್ದೇವೆ. ಈವರೆಗೂ ಇಲಾಖೆಗೆ ಸಂಬಂಧಿಸಿದ ಆಯುಕ್ತರು ಕ್ರಮ ಕೈಗೊಳ್ಳದೇ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಆದ್ದರಿಂದ ಡಿ.೮ ರಂದು ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನ ಸಮಯದಲ್ಲಿ ಬೆಳಿಗ್ಗೆ 9 ಗಂಟೆಗೆ ಬೆಳಗಾವಿ ನಗರದ ಯಡಿಯೂರಪ್ಪ ಮಾರ್ಗದಿಂದ ಬೆಳಗಾವಿಯ ಸುವರ್ಣ ಸೌಧಕ್ಕೆ ಪಾದಯಾತ್ರೆಯ ಮೂಲಕ ತೆರಳಿ ಧರಣಿ ನಡೆಸಲಾಗುವುದು ಎಂದರು.ನಮ್ಮ ಬೇಡಿಕೆಗಳಾದ ವಾಹನ ಚಾಲನಾ ಪರವಾನಿಗೆ ಪಡೆಯುವ ಅಭ್ಯರ್ಥಿಗಳು ಕಲಿಕಾ ಚಾಲನಾ ಪತ್ರ ಪಡೆಯುವ ಪ್ರತಿಯೊಬ್ಬ ಅಭ್ಯರ್ಥಿಗೆ ವಾಹನ ಚಾಲನಾ ತರಬೇತಿ ಶಾಲೆಗಳಿಂದ ನಮೂನೆ-14 ಪ್ರಮಾಣ ಪತ್ರ ಕಡ್ಡಾಯಗೊಳಿಸಬೇಕು. ರಾಜ್ಯದ ಮೋಟಾರು ಡ್ರೈವಿಂಗ್ ಸ್ಕೂಲ್ ಮಾಲೀಕರ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಸಾರಿಗೆ ಆಯುಕ್ತರು ಪ್ರತಿ ತಿಂಗಳು ಸಭೆ ಕರೆದು ನಮ್ಮ ಕುಂದು ಕೊರತೆಗಳನ್ನು ಆಲಿಸಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ‌ ಈಶ್ವರ್,ತಬರೇಜ್,ಹೆಚ್.ಹೆಚ್ ಅಮೀರ್,ನಾಗರಾಜ್ ಮತ್ತಿತರರಿದ್ದರು.