ಬೆಳಗಾವಿಯಲ್ಲಿ ೧೦ ದಿನ ಅಧಿವೇಶನ:ಕಾಗೇರಿ

ಧಾರವಾಡ, ನ.೧೭- ಬೆಳಗಾವಿಯಲ್ಲಿ ಹತ್ತು ದಿನಗಳ ಚಳಿಗಾಲದ ಅಧಿವೇಶನ ನಡೆಸುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.ಎಷ್ಟು ದಿನ ನಡೆಸಬೇಕೆಂಬ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧರಿಸಿ ದ ಬಳಿಕ ಕಲಾಪ ನಡೆಸುವ ಕುರಿತು ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಧಿವೇಶನದ ದಿನಾಂಕದ ಬಗ್ಗೆ ಚರ್ಚೆಯಾಗಿದೆ. ಈ ಬಾರಿ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಒಳ್ಳೆಯ ರೀತಿಯಲ್ಲಿ ಅಧಿವೇಶನ ನಡೆಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟದಲ್ಲಿ ನಿರ್ಧರಿಸಿ ಹೇಳಬೇಕಿದೆ. ಅದಕ್ಕಾಗಿ ಕಾಯುತ್ತಿರಯವುದಾಗಿ ಹೇಳಿದರು.
ಕಲಾಪ ನಡೆಸಲು ೧೦ ದಿನ ಸಾಕಾಗುವುದಿಲ್ಲ. ಚರ್ಚೆಗೆ ಸಮಯ ಸಾಕಾಗಲಾರದು ಎಂಬ ಸಲಹೆಗೆ ಪ್ರತಿಕ್ರಿಯಿಸಿದ ಅವರು, ಸಂಪುಟದಲ್ಲಿ ಏನು ನಿರ್ಧಾರವಾಗುತ್ತದೋ ಅದರಂತೆ ಮಾಡುತ್ತೇವೆ ಎಂದು ಉತ್ತರಿಸಿದರು.