ಬೆಳಗಲ್ ವೀರಣ್ಣ ನಿಧನಕ್ಕೆ ಸಂತಾಪ


ಸಂಜೆವಾಣಿ ವಾರ್ತೆ
ಸಂಡೂರು :ಏ: 4: ತೊಗಲು ಗೊಂಬೆ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿ ಪ್ರದರ್ಶನ ನೀಡಿದ ಕೀರ್ತಿ ಬೆಳಗಲ್ ವೀರಣ್ಣನವರಿಗೆ ಸಲ್ಲುತ್ತದೆ ಅಂತಹ ಶ್ರೇಷ್ಠ ಕಲಾವಿದ ನಮ್ಮನ್ನು ಅಗಲಿದ್ದು ಕಲಾ ಜಗತ್ತಿಗೆ ತುಂಬಲಾರದ ನಷ್ಟ ಎಂದು ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮಿಗಳು ಸಂತಾಪ ಸೂಚಿಸಿದರು.
ಅವರು ಪಟ್ಟಣದ ಬಿಕೆಜಿ ಕಛೇರಿಯ ಅವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಬೆಳಗಲ್ ವೀರಣ್ಣ ನುಡಿನಮನ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಬಯಲಾಟ ಮತ್ತು ತೊಗಲು ಗೊಂಬೆ ಕಲೆಗಳು ಬಳ್ಳಾರಿ ಜಿಲ್ಲೆಯ ಮೂಲದವು, ಅವುಗಳನ್ನು ಬೆಳೆಯುವಂತೆ ಮಾಡಿದವರು ಬೆಳಗಲ್ ವೀರಣ್ಣನವರು, ಅವರು ಅ ಕಲೆಯಲ್ಲಿ ವಿನೂತನ ಪ್ರಯೋಗಗಳನ್ನು ಮಾಡಿದರು, ಅದರಲ್ಲೂ ಪ್ರವಾದಿ ಬಸವೇಶ್ವರ ತೊಗಲು ಗೊಂಬೆ ನಾಟಕ ಪ್ರಯೋಗ ಇಡೀ ಕರ್ನಾಟಕದಲ್ಲಿಯೇ ಪ್ರಸಿದ್ದಿಯನ್ನು ಪಡೆದುಕೊಂಡಿತು, ಅದಕ್ಕೆ ಸಂಶೋಧಕರಾಗಿದ್ದ ಎಂ.ಎಂ. ಕಲಬುರ್ಗಿಯವರು ನಿರಂತರ ಮಾರ್ಗದರ್ಶನ ಮಾಡುವ ಮೂಲಕ ಯಾವ ರೀತಿಯಲ್ಲಿ ಪ್ರದರ್ಶನ ಮಾಡಿದರೆ ಉತ್ತಮ ಎಂಬುದನ್ನು ಬೆಳಗಲ್ ವೀರಣ್ಣನವರು ಅವರಿಗೆ ಮಾರ್ಗದರ್ಶನ ಮಾಡಿದ್ದರೂ, ಅದರಲ್ಲೂ ನಾಡೋಜ ವಿ.ಟಿ. ಕಾಳೇಯವರು ಅದಕ್ಕೆ ಬೇಕಾದಂತಹ ಎಲ್ಲಾ ರೀತಿಯ ಗೊಂಬೆಗಳ ತಯಾರಿಯನ್ನು ಮಾಡಿಕೊಡುವ ಮೂಲಕ ಕಲೆಯನ್ನು ಬೆಳೆಸಿದ ಕೀರ್ತಿ ಬೆಳಗಲ್ ವೀರಣ್ಣನವರಿಗೆ ಸಲ್ಲುತ್ತದೆ, ಅಂತಹ ಶ್ರೇಷ್ಠ ಕಲಾವಿದ ನಮ್ಮನ್ನು ಅಗಲಿದ್ದು ಇಡೀ ಕಲಾ ಜಗತ್ತಿಗೆ, ಅದರಲ್ಲೂ ಜಿಲ್ಲೆಗೆ ಅಪಾರ ನಷ್ಟ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ನಾಗನಗೌಡ ಅಧ್ಯಕ್ಷತೆ ವಹಿಸಿ ಮಾತನಾಢಿ ಕಲಾವಿದ ಎಂದರೆ ಸ್ಪರದೃಪಿ, ಅಜಾನುಭಾವು, ಕಂಚಿನ ಕಂಠ, ನಗುಮೊಗದ ವ್ಯಕ್ತಿ ಯಾರಾದರೂ ಇದ್ದರೆ ಅದು ಬೆಳಗಲ್ ವೀರಣ್ಣನವರು, ಒಬ್ಬ ಕಲಾವಿದನಿಗೆ ಬೇಕಾದ ಎಲ್ಲಾ ಗುಣಗಳು ಅವರಲ್ಲಿ ಮೈಗೂಡಿಸಿಕೊಂಡಿದ್ದವು, ಅಂತಹ ಶ್ರೇಷ್ಠ ಕಲಾವಿದೆ ಶಿಕ್ಷಣ ಪಡೆಯದೇ ಬಾಲ್ಯದಲ್ಲಿಯೇ ಕಷ್ಟಗಳನ್ನು ಅನುಭವಿಸಿ ಕಲೆಯನ್ನು ಅರಾಧಿಸಿ ಜಿಲ್ಲೆಯ ಕೀರ್ತಿಯ ಜೊತೆಗೆ ದೇಶದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದವರು ನಾಡೋಜ ಬೆಳಗಲ್ ವೀರಣ್ಣನವರು, ಅವರನ್ನು ಗುರುತಿಸಿ ಕಲಾ ಜಗತ್ತಿನಲ್ಲಿ ಬೆಳಗುವಂತೆ ಮಾಡಿದ ಕೀರ್ತಿ ಚೋರುನೂರು ಕೊಟ್ರಪ್ಪ ಅವರಿಗೆ ಸಲ್ಲುತ್ತದೆ, ಇಂದಿಗೂ ಸಹ ನೂರಾರು ಕಲಾವಿದರು ತಮ್ಮ ಕಲೆಯನ್ನು ಬೆಳೆಸಿದ್ದಾರೆ ಎಂದರೆ ಅದಕ್ಕೆ ಚೋರುನೂರು ಕೊಟ್ರಪ್ಪ ಅವರ ಶ್ರಮ, ಇಂತಹ ಬಡ ಕಲಾವಿದರು ಬೆಳೆಯಲು ಸಹಕಾರಿಯಾಗಿತ್ತು, ಇಂತಹ ಕಲಾವಿದರು ಮತ್ತೋಮ್ಮೆ ಹುಟ್ಟಿ ಬರಲಿ ಎಂದರು.
ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಅರ್. ಮಸೂತಿ ಮಾತನಾಡಿ ಸದಾ ಚಟುವಟಿಕೆಯಿಂದ ಕೂಡಿದ ನಾಡೋಜ ಬೆಳಗಲ್ ವೀರಣ್ಣನವರು ಇಂದು ನಮ್ಮನ್ನು ಅಪಘಾತದಿಂದ ಅಗಲಿದ್ದು ಅಪಾರ ದು:ಖವನ್ನು ಉಂಟುಮಾಡಿದೆ, ಒಬ್ಬ ಅನಕ್ಷರಸ್ಥ, ಬಡತನದಿಂದ ಮೇಲೆದ್ದು ಅಂತರಾಷ್ಟ್ರೀಯ ಮಟ್ಟದ ಕಲಾವಿದರಾಗಿ ಬೆಳೆದು ಬಂದ ದಾರಿ ಬಹುದೊಡ್ಡದು, ಗುಬ್ಬಿವೀರಣ್ಣನವರ ನಾಟಕ ಕಂಪನಿಯಲ್ಲಿ ತರಬೇತಿ ಪಡೆದು, ಒಬ್ಬ ಅಕ್ಷರಸ್ಥ ಸಹ ಮಾತನಾಡಲಾರ, ಅಂತಹ ಉತ್ತಮ ರೀತಿಯಲ್ಲಿ ಸಾಹಿತ್ಯವನ್ನು ತಪ್ಪಿಲ್ಲದಂತೆ ನಾಟಕಗಳಲ್ಲಿ ಪ್ರಸ್ತುತ ಪಡಿಸುತ್ತಿದ್ದ ರ್ಶರೇಷ್ಠ ಕಲಾವಿದೆ, ಸಂಡೂರಿಗೂ ಮತ್ತು ಅವರಿಗೂ ಉತ್ತಮವಾದ ನಂಟನ್ನು ಹೊಂದಿದ್ದರು, ಕಾರಣ ನಾಡೋಜ ವಿ.ಟಿ. ಕಾಳೇ, ಹಾಗೂ ಬೆಳಗಲ್ ವೀರಣ್ಣನವರು ಇಬ್ಬರೂ ಕಲಾವಿದರು ಮತ್ಸರವಿಲ್ಲದೇ ಪ್ರೀತಿಯಿಂದ ಕೆಲಯನ್ನು ಹಂಚಿಕೊಂಡು, ಬಳಸಿಕೊಂಡು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಕಾರಣರಾದರು, ಅವರ ವಿನೂತನ ನಾಟಕ ಪ್ರಯೋಗಗಳು, ಕೇವಲ ಪೌರಾಣಿಕ ಕಥೆಗಳಿಗೆ ಸೀಮಿತವಾಗಿದ್ದ ಕಲೆಯನ್ನು ಬಸವೇಶ್ವರ, ಗಾಂಧೀಜಿಯವರ ನಾಟಕಗಳನ್ನು ಈ ಕಲೆಯಲ್ಲಿ ಅಳವಡಿಸಿಕೊಂಡು ವಿನೂತನ ಪ್ರಯೋಗ ಮಾಡಿ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವಂತೆ ಮಾಡಿದರು, ಸ್ವಿಜ್ಜರ್‍ಲ್ಯಾಂಡ್, ಯೂರೋಪ್ ರಾಷ್ರಗಳ್ಳಲಿಯೂ ಸಹ ಪ್ರಯೋಗ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಮಾಜಿ ಅಧ್ಯಕ್ಷ ಸಿ.ಎಂ. ಸಿಗ್ಗಾವಿ ಮಾತನಾಡಿ ತೊಗಲುಗೊಂಬೆ ಕಲೆಯ ಮಾಂತ್ರಿಕ, ಕಂಚಿನ ಕಂಠದ ಕಲಾವಿದ ನಮ್ಮನ್ನು ಅಗಲಿದ್ದು ನಾಡಿಗೆ ತುಂಬಲಾರದ ನಷ್ಟ ಎಂದರು, ಹೆಚ್. ಎನ್. ಬೋಸ್ಲೆಯವರು ತಮ್ಮೊಂದಿಗೆ ಅವರ ಒಡನಾಟ, ಕಲಾವಿದ ವಿ.ಟಿ. ಕಾಳೆಯವರೊಂದಿಗೆ ಯಾವ ರೀತಿ ಒಂದೇ ಕುಟುಂಬದ ರೀತಿಯಲ್ಲಿ ಇರುತ್ತಿದ್ದರು ಎಂಬುದನ್ನು ತಿಳಿಸಿದರು. ಎ.ಚಂದ್ರಶೇಖರಪ್ಪ ತಮ್ಮ ನುಡಿನಮನ ಸಲ್ಲಿಸಿದರು.
ಸಮಾರಂಭದಲ್ಲಿ ಶಿಕ್ಷಕಿ ನೀಲಾಂಬಿಕ, ನಿವೃತ್ತ ಶಿಕ್ಷಕಿ ಎಸ್.ಡಿ. ಪ್ರೇಮಲೀಲಾ, ಮುಖಂಡರಾದ ಪುಷ್ಪಾ, ಶ್ವೇತಾ ಉಳ್ಳಾಗಡ್ಡಿ, ಎಂ.ಟಿ. ರಾಥೋಡ್, ಜಿ. ವೀರೇಶ್, ಎ.ಎಂ. ಶಿವಮೂರ್ತಿ ಸ್ವಾಮಿ, ಇತರ ಹಲವಾರು ಗಣ್ಯರು ತಮ್ಮ ನುಡಿಗಳ ಮೂಲಕ ಸಂತಾಪ ಸೂಚಿಸಿದರು.