ಸಂಜೆವಾಣಿ ವಾರ್ತೆ
ಸಂಡೂರು : ಏ:11: ಸಂಡೂರು ತಾಲ್ಲೂಕು ತೋರಣಗಲ್ಲು ಗ್ರಾಮದ ಬಯಾಲಾಟ ಅಧ್ಯಯನ ಗುಡಿಸಲ ಹಾಲ್ ನಲ್ಲಿ ಖ್ಯಾತ ಕಲಾವಿದರಾದ ಬಳ್ಳಾರಿಯ ಬೆಳಗಲ್ಲು ವಿರಣ್ಣ ಮತ್ತು ಡೆಮಾಕ್ರಟಿಕ್ ಯೂತ್ ಪೇಡರೇಶನ್ ಆಫ್ ಇಂಡಿಯಾ ಸಂಸ್ಥಾಪಕ ಖಜಾಂಚಿ ಮತ್ತು ಅಖಿಲ ಭಾರತ ಸಮಿತಿಯ ಉಪಾಧ್ಯಕ್ಷರು ಕಾಮ್ರೇಡ್ ಮಾಜಿ ಸುನಿತಾ ಚೋಪ್ರಾ ರವರಿಗೆ ಸವಿನಯ ಗೌರವ ಶ್ರದ್ಧಾಂಜಲಿಯನ್ನು ಬಯಾಲಾಟ ಕಲಾವಿದರ ಸಂಗಿತ ವಾದ್ಯದೋಂದಿಗೆ ಅರ್ಪಿಸಲಾಯಿತು..
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸ್ವಾಮಿ ರವರು ಮಾತನಾಡಿ, ಸಾಂಸ್ಕೃತಿಕ ಲೋಕದ ಸರಸ್ವತಿ ಪುತ್ರನಾದ ಬೆಳಗಲ್ ವೀರಣ್ಣ 1940ರ ದಶಕದಲ್ಲಿ ಬೆಳಗಲ್ ಗ್ರಾಮದಲ್ಲಿ ಜನಿಸಿ ಅತ್ಯಂತ ಸಣ್ಣ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡ (ತಾಯಿ) ರವರನ್ನು ಕಳೆದುಕೊಂಡು ಅಕ್ಷರ ಕಲಿಯಬೇಕಾದ ವಯಸ್ಸಿನಲ್ಲೂ ತಂದೆಯ ರಂಗಭೂಮಿಯಲ್ಲಿ ತನ್ನ ಜೀವನದ ಆಸರೆಯನ್ನಾಗಿ ಆವರಿಸಿಕೊಂಡ ವೀರಣ್ಣ ತೊಗಲು ಗೋಂಬೆ ದೇಶ ವಿದೇಶಗಳಲ್ಲಿ ಹಚ್ಚುತ್ತಿದರು. ಇಂತಹ ಸಾಂಸ್ಕೃತಿಕ ಸಿರಿಗೆ ಹತ್ತು ಹಲವಾರು ಪ್ರಶಸ್ತಿಗಳು ಮುಡಿಗೇರಿದವು. ನಮ್ಮ ನಾಡಿನ ಜ್ಞಾನ ಪರ್ವತವಾದ ಕನ್ನಡ ವಿಶ್ವವಿದ್ಯಾಲಯವು ತನ್ನ ನಾಡಿನ ನಾಡೋಜ ಪದವಿಯನ್ನು ನೀಡಿ ಗೌರವ ಹೆಚ್ಚಿಸಿಕೊಂಡಿತು ಇಂತಹ ವೀರಣ್ಣನ ಅಗಲಿಕೆಯಿಂದ ನಾಡು ಒಬ್ಬ ಸಾಂಸ್ಕೃತಿಕ ದಿಗ್ಗಜರನ್ನು ಕಳೆದುಕೊಂಡು ದುಃಖದ ಮಡವಿನಲ್ಲಿ ನಿಂದಿದೆ ಇಂತಹ ಸಾಂಸ್ಕೃತಿಕ ಸಿರಿಗೆ ಡಿವೈಎಸ್ಐ ತನ್ನ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ ಅವರ ಕುಟುಂಬಸ್ಥರಿಗೆ ಪ್ರಕೃತಿ ಧೈರ್ಯ ತುಂಬುವಂತಹ ವಾಗಲೆಂದು ವ್ಯಕ್ತಪಡಿಸಿದರು.
ಅದೇ ರೀತಿ ತಾಲ್ಲೂಕು ಅಧ್ಯಕ್ಷರು ಶಿವು ರವರು ಮಾತನಾಡಿ
ಸುನೀತ್ ಚೋಪ್ರಾ ನಿನ್ನೆತಾನೆ ದೆಹಲಿಯಲ್ಲಿ ನಿಧನರಾಗಿದ್ದಾರೆ. ಅವರು ಹೆಸರಾಂತ ಕಲಾ ವಿಮರ್ಶಕರಾಗಿದ್ದರು ಮತ್ತು ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘದ ನಾಯಕರಾಗಿದ್ದರು.
ಮಜ್ದೂರ್ ಕಿಸಾನ್ ಸಂಘರ್ಷ ರ್ಯಾಲಿಯ ಸಿದ್ಧತೆಯಲ್ಲಿ ಪಾಲ್ಗೊಳ್ಳಲು ಗುಗಾರ್ಂವ್‍ನಿಂದ ಎಐಎಡಬ್ಲ್ಯುಯು ಕಚೇರಿಗೆ ದೆಹಲಿಗೆ ತೆರಳುತ್ತಿದ್ದಾಗ ಅವರು ಕುಸಿದುಬಿದ್ದರು.
ಅವರು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‍ಐ) ಪ್ರಾರಂಭದ ಸಮಯದಲ್ಲಿ ಸೇರಿದರು ಮತ್ತು 1980 ರಲ್ಲಿ ಅದರ ಸಂಸ್ಥಾಪಕ ಖಜಾಂಚಿಯಾಗಿ ಆಯ್ಕೆಯಾದರು. ಅವರು #ಜಥಿಜಿi ನ ಅಖಿಲ ಭಾರತ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಆಙಈI ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕು ಸಮಿತಿಯು ಕಾಮ್ರೇಡ್ ಸುನೀತ್ ಚೋಪ್ರಾ ಅವರ ಕುಟುಂಬದ ಎಲ್ಲ ಸದಸ್ಯರಿಗೆ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ ಹಾಗೂ ಅವರ ಜೀವನ ಮತ್ತು ಹೋರಾಟಕ್ಕೆ ಗೌರವ ಶ್ರದ್ಧಾಂಜಲಿ ಸಲ್ಲಿಸುತ್ತದೆ ಎಂದರು..
ಈ ಸಂದರ್ಭದಲ್ಲಿ ತಾಲ್ಲೂಕು ಸಾಂಸ್ಕೃತಿಕ ಕಾರ್ಯದರ್ಶಿ ನಾಗಭೂಷಣ, ತಾಲ್ಲೂಕು ಅಧ್ಯಕ್ಷರು ಶಿವು, ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ಮುಖಂಡರಾದ ಪಾಲ್ ಪಕ್ಕಿರ್, ಅಕ್ಷಯ್, ಲೋಕೇಶ್,ಅನಿಲ್, ಕಲಾವಿದರಾದ ಆ.ದೇವಣ್ಣ, ಹೋನ್ನರಪ್ಪ, ಲೋಕಪ್ಪ, ಚೆನ್ನ ಬಸಪ್ಪ, ಬಾಬು, ಅಂಜಿನಿ,ಹನುಮಂತ ಇತರರು ಭಾಗವಹಿಸಿದ್ದರು..