ಬೆಳಗಲ್ಲು ವೀರಣ್ಣ ನಿಧನಕ್ಕೆ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಸಂತಾಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.05: ಬಳ್ಳಾರಿಯ ಡಿ.ಆರ್.ಕೆ ರಂಗಸಿರಿ ಆವರಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಳ್ಳಾರಿ ವತಿಯಿಂದ ಇತ್ತೀಚೆಗೆ ನಿಧನರಾದ ಅಂತಾರಾಷ್ಟ್ರೀಯ ಖ್ಯಾತ ತೊಗಲುಗೊಂಬೆ ಮತ್ತು ರಂಗಭೂಮಿ ಕಲಾವಿದರಾದ ಬೆಳಗಲ್ ವೀರಣ್ಣ ಇವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಹಿರಿಯ ರಂಗ ನಿರ್ದೇಶಕರಾದ ಜಗದೀಶ್ ಕೆ. ಅಭಿನಯ ಕಲಾ ಕೇಂದ್ರ ಅಧ್ಯಕ್ಷರು ರಂಗಭೂಮಿ ನಿರ್ದೇಶಕರು  ಬಳ್ಳಾರಿ ಇವರು ಮಾತನಾಡಿ ರಂಗಭೂಮಿಗೆ ವಿರಣ್ಣನವರ ಕೊಡುಗೆ ಅಪಾರವಾದುದು ಎಂದರು. ಶರೀರ ಮತ್ತು
ಶಾರೀರವನ್ನು ತಮ್ಮ ಕೊನೆಯ ಜೀವನದವರೆಗೂ ಉಳಿಸಿಕೊಂಡಿದ್ದರು ರಂಗಭೂಮಿಯ ಬೇರೆ ಬೇರೆ ಆಯಾಮಗಳಾದ ಬೀದಿ ನಾಟಕ ತೊಗಲಗೊಂಬೆ ಪ್ರದರ್ಶನ ರಂಗಭೂಮಿ ಮುಂತಾದ ಆಯಾಮಗಳಲ್ಲಿ ನಿರಂತರವಾಗಿ ತಮ್ಮನ ತಾವು ತೊಡಗಿಸಿಕೊಂಡಿದ್ದರು ಎಂದು ಮಾತನಾಡಿದರು
ಮಕ್ಕಳ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಎ ಎಂ ಪಿ ವೀರೇಶ ಸ್ವಾಮಿ ಮಾತನಾಡಿ ಕಡಲಾಚೆಗೆ ಭಾರತೀಯ ಜನಪದ ಕಲೆ ಪರಿಚಯಿಸಿದ ಕೀರ್ತಿ ವೀರಣ್ಣನವರಿಗೆ ಸಲ್ಲುತ್ತದೆ ಎಂದರು. ಗೌರವಾಧ್ಯಕ್ಷರಾದ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಬಳ್ಳಾರಿ ರಂಗಭೂಮಿ ಕ್ಷೇತ್ರಕ್ಕೆ ವಿರಣ್ಣನವರ ಕೊಡುಗೆ ಸ್ಮರಣಿಯವಾದುದು ಎಂದರು. ಕೋಶಾಧ್ಯಕ್ಷರಾದ ಶ್ರೀ ಖಾಸಿಂ ಅಲಿ, ರಂಗಭೂಮಿ ಕಲಾವಿದ ಅಮರೇಶ, ಉಪಾಧ್ಯಕ್ಷ ಶ್ರೀ ಗಿರಿಜಾಪತಿ, ರಂಗಭೂಮಿ ಕಲಾವಿದರಾದ ವೆಂಕೋಬಾಚಾರಿ, ರಘುರಾಮ್ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರದ ಡಾ. ಅನಿಲ್ ಕುಮಾರ್ ಪ್ರಸನ್ನ ದೇವರ ಮಠ ಇವರು ವಹಿಸಿಕೊಂಡು ವಿರಣ್ಣನವರ ಅಗಲಿಕೆಯ ಮೂಲಕ ಬಳ್ಳಾರಿ ಜನಪದ ಮತ್ತು ರಂಗಭೂಮಿಯ ಹೆಮ್ಮರ ಧರೆಗುರುಳಿತು ಎಂದರು. ಪ್ರಾರ್ಥನೆಯನ್ನು ಯರೇಗೌಡ ಮತ್ತು ಖಾಸಿಂ ಅಲಿ ಅವರು ಮಾಡಿದರು. ಸ್ವಾಗತವನ್ನು ಶಿಕ್ಷಕಿ ಶ್ರೀಮತಿ ಸಂಧ್ಯಾದೀಪ ಅವರು ಕೋರಿದರು. ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ರಂಗಭೂಮಿ ಕಲಾವಿದರು ಮತ್ತು ಮಕ್ಕಳು ಭಾಗವಿಸಿದ್ದರು

One attachment • Scanned by Gmail