
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.02: ನಾಡೋಜ ಬೆಳಗಲ್ಲು ವೀರಣ್ಣ ಅವರು ಸದಾ ಎನಗಿಂತ ಕಿರಿಯರಿಲ್ಲ ಎಂಬಂತೆ ವ್ಯಕ್ತಿತ್ವ ಬೆಳಸಿಕೊಂಡು ಬಂದವರು. ಅವರ ನಿಧನಕ್ಕೆ ಹಲವಾರು ಸಂಘ ಸಂಸ್ಥೆ, ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಚಿವ ಬಿ.ಶ್ರೀರಾಮುಲು, ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿ, ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಮಾಜಿ ಸಚಿವರ ಅಲ್ಲಂ ವೀರಭದ್ರಪ್ಪ, ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಮೊದಲಾದವರು ತಮ್ಮ ಸಂತಾಪ ಸಂದೇಶ ನೀಡಿದ್ದಾರೆ.
ಕಸಾಪ ಜಿಲ್ಲಾ ಅಧ್ಯಕ್ಷರಿಂದ:
ಅಂತರರಾಷ್ಟ್ರೀಯ ಖ್ಯಾತ ತೊಗಲುಗೊಂಬೆ ಕಲಾವಿದರಾದ ನಾಡೋಜ ಬೆಳಗಲ್ಲು ವೀರಣ್ಣನವರು ಇಂದು ಅಪಘಾತದಲ್ಲಿ ದೈವಾಧೀನರಾಗಿದ್ದು ಕನ್ನಡ ನಾಡಿನ ಕಲಾ ಲೋಕಕ್ಕೆ ಬಹು ದೊಡ್ಡ ನಷ್ಪವನ್ನುಂಟು ಮಾಡಿದೆ.
ನಿನ್ನೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಬೆಳಗಲ್ಲು ವೀರಣ್ಣನವರು ಇಂದು ದೈವಾಧೀನರಾಗಿದ್ದು ತೀವ್ರ ನೋವನ್ನುಂಟು ಮಾಡಿದೆ.
ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆಂದು ಕಸಾಪ ಜಿಲ್ಲಾ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಹೇಳಿದ್ದಾರೆ.
ಬಳ್ಳಾರಿಯ ರಂಗಭೂಮಿಗೆ ಕೀರ್ತಿ ತಂದವರು ನೀವು. ಕಲಾವಿದ ಮತ್ತು ಕಲಾವಿದೆ ಕಲಾರಂಗದಲ್ಲಿ ಹೇಗೆ ಬದುಕಬೇಕೆಂದು ನಿರೂಪಿಸಿದವರು ನೀವು. ನೀವಿಲ್ಲದೇ ಬರಡಾಯಿತು ಬಳ್ಳಾರಿ ರಂಗಭೂಮಿ. ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಹೆಸರು ಬೆಳಗಲ್ಲು ವೀರಣ್ಣನವರು ಮತ್ತು ಮನ್ಸೂರು ಸುಭದ್ರಮ್ಮನವರು… ಸುಭದ್ರಮ್ಮನವರು ಅಗಲಿದ ನೋವು ಮರೆಯುವ ಮುನ್ನವೇ ಇಂದು ಬೆಳಗಲ್ಲು ವೀರಣ್ಣನವರು ಅಗಲಿದ ವಾರ್ತೆ… ಭರಿಸಲಾಗದ ದುಃಖ.
ರಂಗಕರ್ಮಿ ಕೆ.ಜಗದೀಶ ಹೇಳಿದ್ದಾರೆ.
ಅಲಾಪ್ ಸಂಗೀತ ಕಲಾ ಟ್ರಸ್ಟ್ ನಿಂದ ಕನ್ನಡದ ರಂಗಭೂಮಿ ಪರಂಪರೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ರಂಗಚೇತನಾರದ ಶ್ರೀ ಬೆಳಗಲ್ಲು ವೀರಣ್ಣನವರಿಗೆ ಭಾವಪೂರ್ಣ ಅಂತಿಮ ನಮನಗಳು ಎಂದು ರಂಗ ಸಂಘಟಕ ರಮಣಪ್ಪ ಹೇಳಿದ್ದಾರೆ.
ಕಸಾಪ ತಾಲೂಕು ಘಟಕ: ನಾಡೋಜ ಬೆಳಗಲ್ಲು ವೀರಣ್ಣ ಅವರು ನಿನ್ನೆಯಷ್ಟೇ ಖಾಸಗೀ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕಸಾಪ ತಾಲ್ಲೂಕು ಘಟಕದ ದತ್ತಿ ಉಪನ್ಯಾಸ ಹಾಗೂ ಯುಗಾದಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದರು. ಹಾಗೂ ಇದೇ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಘಟಕವತಿಯಿಂದ ಗೌರವ ಸತ್ಕಾರವನ್ನು ಮಾಡುವ ಮೂಲಕ ಅವರನ್ನು ಗೌರವಿಸಲಾಯಿತು. ಆದರೆ ಇಂದು ಅವರ ಅಗಲಿಕೆಯು ರಂಗಭೂಮಿ ಹಾಗೂ ಕಲಾ ಕ್ಷೇತ್ರಕ್ಕೆ ತುಂಬಲಾರದ ಅಪಾರ ನಷ್ಟವನ್ನುಂಟು ಮಾಡಿದೆ, ನಾನು ಕಣ್ಣೆದುರಿಗೆ ಕಂಡ ಮಹಾನ್ ಚೇತನ, ಸಾಧಕ , ಗುರು ,ಕಂಚಿನ ಕಂಠ, ಧ್ವನಿ, ಸ್ಪಷ್ಟತೆ, ಜಾನಪದ ,ಪುರಾಣ, ಇತಿಹಾಸ,ತೊಗಲುಗೊಂಬೆಯಾಟ,ಸಂಗೀತ, ಶಿಷ್ಯ ವೃಂದ, ಆಚಾರ,ವಿಚಾರ, ಶಿಸ್ತು, ಕಲಾನುಭವ , ಕಲಾ ಸೇವೆ ಹೀಗೆ ಇವರ ವ್ಯಕ್ತಿತ್ವ ಅನನ್ಯ. ಅವರು ಸಲ್ಲಿಸಿದ ಕಲಾ ಸೇವೆಯು ಇತಿಹಾಸದ ಪುಟಗಳಲ್ಲಿ ಸದಾ ಜೀವಂತ.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಇಂತಹ ಹಿರಿಯ ಚೇತನರಿಗೆ ಭಾವಪೂರ್ಣ ನಮನಗಳು ಎಂದು ಬಳ್ಳಾರಿ ತಾಲೂಕಿನ ಕಸಾಪದ ಗೌರವ ಕಾರ್ಯದರ್ಶಿ
ಕಾರ್ತಿಕ್ ಮರಿಸ್ವಾಮಿ ಮಠ ಗೌರವ ಕಾರ್ಯದರ್ಶಿ ಹೇಳಿದ್ದಾರೆ.
ಬಿಸಿಲಹಳ್ಳಿ ಬಸವರಾಜ್:
ಖ್ಯಾತ ತೊಗಲುಗೊಂಬೆ ಕಲಾವಿದರು ನಾಡೋಜ ಬೆಳಗಲ್ಲು ವೀರಣ್ಣ ಅವರು ನಮ್ಮನ್ನು ಅಗಲಿದ ವಿಷಯ ತಿಳಿದು ಬಹಳ ದುಃಖವಾಯಿತು. ಅವರು ಶತಾಯುಷಿ ಯಾಗಿ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುತ್ತಾರೆ ಎಂದು ತಿಳಿದಿದ್ದೆವು.ಆದರೆ ವಿಧಿಯಾಟ ನಮ್ಮಿಂದ ಅವರು ದೂರಾಗಿದ್ದಾರೆ. ನಮ್ಮ ಸಂಸ್ಥೆಯಿಂದ ಅವರಿಗೆ 2014 ಜನವರಿ 25ರಂದು “ನಮ್ಮ ಬಳ್ಳಾರಿ ಪ್ರಶಸ್ತಿ”ನೀಡಿ ಗೌರವಿಸಲಾಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ಎಂದು ನಗರದ ದ ಶ್ರೀ ಮಹಾದೇವ ಎಜುಕೇಶನ್ ಆರ್ಟ್ & ಕಲ್ಚರಲ್ ಟ್ರಸ್ಟ್ ನ
ಗೌರವಾಧ್ಯಕ್ಷ ಬಿಸಿಲಹಳ್ಳಿ ಬಸವರಾಜ್ ತಿಳಿಸಿದ್ದಾರೆ.
ಟಿ.ಹೆಚ್.ಎಂ.ಬಸವರಾಜ್:
ಬೆಳಗಲ್ಲು ವೀರಣ್ಣ ಅವರ ನಿಧನಕ್ಕೆ ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಅವರು ತೀವ್ರ ಸಂತಾಪ ತಿಳಿಸಿದ್ದು. ಕಳೆದ ಎರೆಡು ದಿನಗಳ ಹಿಂದೆ ಅವರೊಡನೆ ಕಾರ್ಯಕ್ರಮವೊಂದರಲ್ಲಿ ಭಾಗವಹಸಿತ್ತು. ಅವರ ಕಂಠಸಿರಿಯಲ್ಲಿ ರಂಗಗೀತೆ ಕೆರಳಿ ಆನಂದಿಸಿತ್ತು. ಇಂದು ಅವರ ನಿಧನ ದುಖಃ ತಂದಿದೆ. ದೇವರು ಅವರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದಿದ್ದಾರೆ.
ಪನ್ನರಾಜ್:
ಬೆಳಗಲ್ಲು ವೀರಣ ಅವರ ನಿಧನ ದುರಂತವೇ. ಆಘಾತಕಾರಿ ಸುದ್ದಿ.
ನಾಡಿನ ಸಾಂಸ್ಕೃತಿಕ ಜಗತ್ತಿನ ದಿಗ್ಗಜರಾದ ನಾಡೋಜ ವೀರಣ್ಣ ಬಳ್ಳಾರಿಯ ಹೆಮ್ಮೆಯಾಗಿದ್ದರು.
ಬಳ್ಳಾರಿಯ ರಾಜಕುಮಾರ್ ಎಂತಲೇ ನಾನು ಕರೀತಾ ಇದ್ದೆ ಅವರ ಆತಗಮಕ್ಕೆ ಚಿರ ಶಾಂತಿ ದೊರೆಯಲ್ಲಿ ಎಂದು ಆಖಿಲ ಭಾರತ ಲೆಕ್ಕ ಪರಿಶೋಧಕರ ಸಂಘದ ದಕ್ಷಿಣ ಭಾರತ ಪ್ರಾಂತದ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಹೇಳಿದ್ದಾರೆ.
ಮಹದೇವ ತಾತಾ ಕಲಾ ಸಂಘ :
ರಂಗಭೂಮಿಯ ಹಿರಿಯ ಚೇತನ ಬೆಳಗಲ್ಲು ವೀರಣ್ಣ ಅವರು ಅಪಘಾತದಲ್ಲಿ ಸಾವನ್ನಪ್ಪಿದ ವಿಷಯ ಕೇಳಿ ಆಘಾತವಾಯ್ತು. ಅವರ ಸಿರಿಕಂಟ ಸ್ಥಗಿತಗೊಂಡು ನಮ್ಮಂತಹ ಕಲಾವಿದರಿಗೆ ಅವರು ನೀಡುತ್ತಿದ್ದ ಮಾರ್ಗದರ್ಶನ ಇನ್ನಿಲ್ಲಾವಾಗಿದೆಂದು ಹಂದ್ಯಾಳಿನ ಮಹದೇವತಾತಾ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ತಮ್ಮ ದುಖಃ ತಪ್ತ ಸಂದೇಶದಲ್ಲಿ ಹೇಳಿದ್ದಾರೆ.
ಪತ್ರಕರ್ತರಿಂದ:
ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿದ್ದ ಬೆಳಗಲ್ಲು ವೀರಣ್ಣಾವರು
ಪತ್ರಕರ್ತರೆಲ್ಲ ಸೇರಿ ಅಭಿಮನ್ಯ ಕಾಳಗ ಬಯಲಾಟ ಪ್ರದರ್ಶನಕ್ಕೆ ಅಣಿಗೊಳಿಸಿದ ಕೀರ್ತಿ ಅವರದಾಗಿತ್ತು. ಕಲಿಕೆಗೆ ಅವರ ಮಾರ್ಗದರ್ಸನ, ಪಾತ್ರದಾರಿಗಳು ಮಾತುಗಳನ್ನು ಅರ್ಥರಹಿತವಾಗಿ ಹೇಳುವುದನ್ನು ಅರ್ಥಗರ್ಭಿತವಾಗಿ ಹೇಳುವಂತೆ ತಿದ್ದಿತೀಡುತ್ತಿದ್ದ ಪರಿ ಮರೆಯಲಾಗದೆಂದು ಪತ್ರಕರ್ತರಾದ ಎನ್.ವೀರಭದ್ರಗೌಡ, ಕೆ.ಎಂ. ಮಂಜುನಾಥ,ಪಿ.ವೆಂಕೋಬಿ ಹೇಳಿದ್ದಾರೆ.
ನಾರಾ ಭರತ್ ರೆಡ್ಡಿಯಿಂದ:
ಭಾರತದ ಪಾರಂಪರಿಕ ತೊಗಲುಗೊಂಬೆಯಾಟದ ಕಲೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿ, ಕಲೆಯ ರಸಸ್ವಾದವನ್ನು ಹಂಚಿದ್ದ ಹಿರಿಯ ಕಲಾವಿದರು, ರಾಷ್ಟ್ರಪತಿ ಪ್ರಶಸ್ತಿ ವಿಜೇತರು, ಬಳ್ಳಾರಿ ಜಿಲ್ಲೆಯ ಹೆಮ್ಮೆಯ ಪುತ್ರರು ಆದ ನಾಡೋಜ ಬೆಳಗಲ್ಲು ವೀರಣ್ಣನವರ ನಿಧನದ ಸುದ್ದಿ ಕೇಳಿ ಟಚ್‌ಫಾರ್‌ಲೈಫ್ ಪೌಂಡೇಷ್‌ನ ಸಂಸ್ಥಾಪಕ ಅಧ್ಯಕ್ಷರು ಆದ ನಾರಾ ಭರತ್ ರೆಡ್ಡಿ ದಿಗ್ಬ್ರಾಂತಿ ವ್ಯಕ್ತಪಡಿಸಿ.
ರಾಜ್ಯದ ಕಲಾ ಕ್ಷೇತ್ರದಲ್ಲಿ ಹಿರಿಯ ಕೊಂಡಿಯಂತಿದ್ದ ಬೆಳಗಲ್ಲು ವೀರಣ್ಣನವರು ತೊಗಲುಗೊಂಬೆಯಾಟ ಪ್ರದರ್ಶಿಸಿ ತನ್ಮೂಲಕ ಸದರಿ ಕಲೆಯನ್ನು ರಾಜ್ಯ, ದೇಶ, ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕಲಾಲೋಕದ ಹಿರಿಯ ಚೇತನರಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿಯನ್ನು, ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಯರಿಸ್ವಾಮಿ:
ಆಮ್ ಆದ್ಮಿಯ ಪಕ್ಷದ ಮುಖಂಡ ಕೆ.ಯರಿಸ್ವಾಮಿ ಅವರು ಸಹ ವೀರಣ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.