ಬೆಳಕು ಪ್ರಶಸ್ತಿ ಸ್ವೀಕರಿಸಿದ ಟಿಹೆಚ್ ಎಂ ಬಸವರಾಜ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಡಿ.25:  ರಾಯಚೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಬೆಳಕು ಟ್ರಸ್ಟ್ ಹಮ್ಮಿಕೊಂಡಿದ್ದ  ರಾಜ್ಯಮಟ್ಟದ ಬೆಳಕು ಸಂಭ್ರಮ ಕಾರ್ಯಕ್ರಮವನ್ನು ಕರ್ನಾಟಕ ಇತಿಹಾಸ ಅಕಾಡೆಮಿಯ  ಬಳ್ಳಾರಿ ಜಿಲ್ಲಾಧ್ಯಕ್ಷ ಟಿ. ಹೆಚ್. ಎಂ. ಬಸವರಾಜ್ ಉದ್ಘಾಟಿಸಿದರು.
ಇಳಕಲ್ಲು ಮಠದ  ಬಸವ ಪ್ರಸಾದ ಶರಣರು, ಬೆಂಗಳೂರಿನ ಅಭಯ ಸಮಾಜ ಸೇವಾ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ. ಅಭಯ ಕೃಷ್ಣಯ್ಯ, ಬೆಳಕು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ, ಡಾ. ಅಭಯ ಶೀಲಾ,  ನಿರೂಪಕಿ ಸೌಮ್ಯ ಗೌಡ,ಜಿಲ್ಲಾ ವೈದ್ಯಾಧಿಕಾರಿ ಡಾ. ಸುರೇಂದ್ರಬಾಬು, ಮಾಜಿ ಸೈನಿಕ ರಾಧಾ ಬಸವರಾಜ ರಾಮಗೇರಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಸವರಾಜ್ ಅವರಿಗೆ ಬೆಳಕು ಪ್ರಶಸ್ತಿ ನೀಡಿ   ಗೌರವಿಸಲಾಯಿತು.