ಬೆಳಕು ಜ್ಞಾನದ ಸಂಕೇತ – ಗಂಗಾಧರ ಸ್ವಾಮೀಜಿ

ಸಂಡೂರು :ಡಿ:22 : ದೀಪ ಮನುಷ್ಯನ ಬಾಳಿಗೆ ಜ್ಯೊತಿಯಾಗಿ ಬೆಳಕು ನೀಡಿ ಜ್ಞಾನದ ಸಂಕೇತವಾಗಿದ್ದು, ಅಜ್ಞಾನವೆಂಬ ಕತ್ತಲೆಯನ್ನ ಹೊಡೆದೂಡಿಸಿ ಜ್ಞಾನ ಮಾರ್ಗ ಬೆಳಸಿಕೊಳ್ಳಲು ಗುರುವಿನ ಮಾರ್ಗದರ್ಶನ ಮತ್ತು ಸಹಕಾರ ಮುಖ್ಯ. ಪ್ರತಿಯೋಬ್ಬರು ಜ್ಞಾನ ಮಾರ್ಗದತ್ತ ಸಾಗಬೇಕಾದರೆ, ದೀಪ ಬೆಳಗಿಸುವುದು ಅತಿಶೆಯೋಕ್ತಿಯಾಗಿದೆ ಎಂದು ಯಶವಂತನಗರದ ಶ್ರೀ ಗುರು ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಪರಮಪೂಜ್ಯಶ್ರೀ ಗಂಗಾಧರ ಮಹಾಸ್ವಾಮಿಗಳು ತಮ್ಮ ಮನದಾಳದ ಮಾತುಗಳನ್ನಾಡಿದರು ಎಂದರು.
ಅವರು ತಾಲ್ಲೂಕಿನ ಯಶವಂತನಗರದ ಶ್ರೀ ಗುರು ಸಿದ್ದರಾಮೇಶ್ವರ ಸಂಸ್ಥಾನ ಮಠದಲ್ಲಿ ದಿ. 21 ರಂದು ಕಾರ್ತಿಕೊತ್ಸವ ಸಮಾರಂಭವನ್ನ ಮೀನುಗೊಳ್ಳದ ಕತೃಗರ್ಜೆಗೆ ಶ್ರೀ ಮಠದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದ ಶಿವಶರಣ ಬಸವಣ್ಣನವರ ವಚನ ಸಾಹಿತ್ಯದಂತೆ ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ. ಎನ್ನುವ ಸಾಹಿತ್ಯವನ್ನು ಎಳೆಎಳೆಯಾಗಿ ಬಿಡಿಸುವುದರ ಮೂಲಕ ಮಾತನಾಡಿದರು. ಈ ಸಂಧರ್ಭದಲ್ಲಿ ಸಂಡೂರಿನ ವಿರಕ್ತಮಠಾಧೀಶ್ವರರಾದ ಪರಮಪೂಜ್ಯ ಶ್ರೀ ಪ್ರಭುಮಹಾಸ್ವಾಮಿಗಳು, ಸಿಂಧಗಿ ಪಟ್ಟಾದ್ಯಕ್ಷರಾದ ಶಿವಾನಂದಸ್ವಾಮಿಗಳು ಸಾರಥ್ಯದಲ್ಲಿ ಕಾರ್ತಿಕೋತ್ಸವ ನೆರವೇರಿತು.
ಈ ಸಂದರ್ಭದಲ್ಲಿ ಅಕ್ಕನ ಬಳಗದ ಸರ್ವ ಸದಸ್ಯರು ಸಂಡೂರಿನ ಮತ್ತು ಸುತ್ತಮುತ್ತಲಿನಗ್ರಾಮಸ್ಥರು, ಚಿತ್ರಿಕಿ ಕುರುಗೋಡಪ್ಪ, ಚಿತ್ರಿಕಿ ಪ್ರಕಾಶ್ ಪಲ್ಯದ ವೀರಣ್ಣ ಎನ್. ವೀರಣ್ಣ, ಪ್ರಭಾಕರ ಅಲ್ಲದೇ ಹಲವಾರು ಮುಖಂಡರುಗಳ ಜೊತೆ ಸಂಡೂರಿನ ಶಾಸಕರಾದ ಈ. ತುಕರಾಂ ರವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಷ್ ರವರು ಉಪಸ್ಥಿತಿರದ್ದರು.