ಬೆಳಕಿನ ಜ್ಞಾನ ದೀವಿಗೆಯಿಂದ ಅಜ್ಞಾನ ದೂರ: ಡಾ. ಸುಭಾಶ್ಚಂದ್ರ ಕೌಲಗಿ

ಯಾದಗಿರಿ;ಜ.12: ಡಾನ್ ಬಾಸ್ಕೋ ಸೇವಾ ಕೇಂದ್ರ ವತಿಯಿಂದ ಮಹಿಳಾ ಸಬಲೀಕರಣ ವೆಕ್ಯಾನ್ ಸರ್ಕಾರಿ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಸರ್ಕಾರಿ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಸೋಮವಾರ ಜರುಗಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಶರಣಪ್ಪ ಸಿ. ಅಮರಾಪೂರ ಜ್ಞಾನವಿದ್ದರೆ ಏನಾದರೂ ಸಾಧಿಸಬಹುದು ಜ್ಞಾನದಿಂದಲೇ ಎಲ್ಲವನ್ನು ಪಡೆದುಕೊಳ್ಳಬಹುದು. ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ವಸ್ತುವೆಂದರೆ ಜ್ಞಾನ ಮತ್ತು ಪ್ರಪಂಚದಲ್ಲಿ ಅತ್ಯಂತ ಕನಿಷ್ಠ ವಸ್ತುವೆಂದರೆ ಅಜ್ಞಾನ
ಇಂತಹ ತರಬೇತಿಗಳನ್ನು ಪಡೆದುಕೊಂಡು ಜ್ಞಾನವೆಂಬ ಬೆಳಕಿನ ಕಡೆಗೆ ನಡೆಯೋಣ ಎಂದು ಮಾತನಾಡಿದರು.
ಪದವಿ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಸುಭಾಶ್ಚಂದ್ರ ಕೌಲಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಜ್ಞಾನ ತುಂಬಿದಕಡೆ ಬೆಳಕೆಂಬ ಜ್ಞಾನದ ದೀವಿಗೆ ಹಚ್ಚಿನ ಅಜ್ಞಾನದ ಕತ್ತಲನ್ನು ಹೊಡೆದೋಡಿಸಿ ಎಂಬ ಬಸವಣ್ಣವರ ವಚನದಂತೆ ಸಬಲೀಕರಣ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಜ್ಞಾನವನ್ನು ಬೆಳೆಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಸಬಲೀಕರಣ ಸಾಧ್ಯ ಎಂದ ಅವರು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ನ್ಯಾಯವಾದಿ ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯೆ ಶ್ರೀಮತಿ ನಿರ್ಮಲಾದೇವಿ ಮಾತನಾಡಿ ಮಹಿಳೆಯರ ಹಕ್ಕುಗಳ ಬಗ್ಗೆ ಹಾಗೂ ಮಹಿಳೆಯರ ರಕ್ಷಣೆ, ಸಮಾನತೆ ಮಹಿಳಾ ಶಿಕ್ಷಣದ, ಮಹಿಳಾ ಕಾನೂನು ಕುರಿತು ಮಾತನಾಡಿ ವಿವರವಾದ ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ಸಹಾಯವಾಣಿ ಸಂಯೋಜಕ ಶರಬಯ್ಯ ಮಾತನಾಡಿ ಬಾಲ್ಯವಿವಾಹ, ಪೊಕ್ಸೊ ಕಾಯ್ದೆ ಕುರಿತು ಪಿಪಿಟಿ ಮೂಲಕ ವಿವರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪದವಿ ಮಹಾವಿದ್ಯಾಲಯದಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು,
ಡಾನ್ ಬಾಸ್ಕೊ ಸಮಾಜ ಸೇವಾ ಕೇಂದ್ರ ನಿರ್ದೇಶಕ ಫಾದರ್ ಫ್ರವೀಣ ಕೆ.ಜೆ., ಪದವಿ ಕಾಲೇಜಿನ ಉಪನ್ಯಾಸಕರಾದ ಉಮೇಶ.ಟಿ, ಎನ್.ಎಸ್.ಎಸ್. ಅಧಿಕಾರಿ ಚಂದ್ರಶೇಖರ, ಯುವ ಸಬಲೀಕರಣ ವಿಭಾಗದ ಶಹನಾಜ್ ಬೇಗಂ, ಅಶೋಕರೆಡ್ಡಿ ಪಾಟೀಲ್, ಕುಮಾರ ಮಹೇಶ, ವಂದನಾ, ಶ್ರೀಮತಿ ಈರಮ್ಮ, ದೈಹಿಕ ನಿರ್ದೇಶಕ ಡಾ. ಪ್ರಸಾದ ಭಂಡಾರಿ ಉಪಸ್ಥಿತರಿದ್ದರು.
ವೆಕಾನ್ ಸಂಯೋಜಕಿ ಕುಮಾರಿ ಅಶ್ವಿನಿ ನಾಯಕ ಸ್ವಾಗತಿಸಿದರು, ಫಾಸ್ಟರ್ ಕೇರ್ ಸಂಯೋಜಕ ದೇವೇಂದ್ರಪ್ಪ ನಿರೂಪಿಸಿದರು,