ಬೆಳಕಿನೆಡೆಗೆ ದಾರಿ ತೋರಿಸುವವನೆ ಗುರು

(ಸಂಜೆವಾಣಿ ವಾರ್ತೆ)
ಶಿರಹಟ್ಟಿ,ಜು6: ವ್ಯಕ್ತಿಯ ಬದುಕಿನಲ್ಲಿ ಕತ್ತಲೆಯನ್ನು ಕಳೆದು ಬೆಕಿನಡೆ ದಾರಿ ತೋರಿಸುವವನೇ ನಿಜವಾದ ಗುರು ಎಂದು ಶಿರಹಟ್ಟಿ ಶ್ರೀ.ಜ.ಫಕ್ಕಿರೇಶ್ವರ ಮಠದ ಉತ್ತರಾದಿಕಾರಿ ದಿಂಗಾಲೇಶ್ವರ ಸ್ವಾಮಿಜಿ ಹೇಳಿದರು.
ಅವರು ಪಟ್ಟಣದ ಶ್ರೀ ಜ.ಫಕ್ಕಿರೇಶ್ವರ ಮಠದಲ್ಲಿನ ಗುರು ಪೂರ್ಣಿಮೆ ನಿಮಿತ್ಯ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾನಿದ್ಯವಹಿಸಿ ಮಾತನಾಡಿದರು.
ಯಾರು ಬದುಕಿನಲ್ಲಿ ಗುರು ಹಾಗೂ ಗುರಿಯನ್ನು ಇಟ್ಟುಕೊಂಡು ಮುಂದೆ ಸಾಗುತ್ತಾರೆಯೋ ಅವರೆಲ್ಲರೂ ಬಹು ಬೇಗನೆ ಯಶಸ್ವಿಯಾಗುತ್ತಾರೆ. ಮಡಿಕೆ ಮಾಡಲು ಮಣ್ಣು ಬೇಕು . ಆಭರಣ ಮಾಡಲು ಹೊನ್ನು ಬೇಕು. ಬದುಕಿನಲ್ಲಿ ಯಶಸ್ವಿಯಾಗಲು ಒಬ್ಬ ಸಮರ್ಥಗುರುವಿನ ಆರ್ಶಿವಾದ ಮಾರ್ಗದರ್ಶನ ಅವಶ್ಯವಾಗಿ ಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ನ ತಾಲೂಕಾದ್ಯಕ್ಷ ಕೆ.ಎ.ಬಳಿಗೇರ ಮಾತನಾಡಿ, ಗುರುವಿನ ಅನುಗ್ರಹವಿಲ್ಲದೇ ಮನಷ್ಯನ ಜನ್ಮ ಏನನ್ನು ಸಾಧಿಸಲಾರದು. ಆತ್ಮ ಪರಮಾತ್ಮನ ಸಾಕ್ಷಾತ್ಕಾರಗೊಳ್ಳಲು ಗುರುವಿನ ದಯೆ ಅತೀ ಮುಖ್ಯವಾದುದಾಗಿದೆ. ಗುರುವಿನ ಅಂತ:ಕರಣದಿಂದ ಬಂದಂತಹ ಮಾರ್ಗದರ್ಶನ ಜೀವನ ಪಾವನಗೊಳಿಸುವುದರ ಜೊತೆಗೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಶ್ರೀಮಠದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಗುರುನಾಮಸ್ಮರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿವೀರಬಸವ ದೇವರು ನವಲಗುಂದ, ಬಿ.ಎಸ್. ಹಿರೇಮಠ, ಶಿವಪ್ರಕಾಶ ಮಹಾಜನಶೆಟ್ಟರ, ಜಿ.ಕೆ. ಹಳ್ಳಿ, ಎಚ್.ಎಮ್.ಪಲ್ಲೇದ, ಜಿ.ಬಿ. ಚಿಂಚಲಿ, ಷóಡಕ್ಷರಿ ಶಾಸ್ತ್ರಿಗಳು, ಜಯಶ್ರೀ ನೂರಶೆಟ್ಟರ, ಮಧುಮತಿ ಮಹಾರಾಜಪೇಟ, ಗೀತಾ ಹಲಸೂರ, ಮುಂತಾದವರು ಉಪಸ್ಥಿತರಿದ್ದರು.