ಬೆಳಂದೂರು ಗುಂಡಿನಾರಿನಲ್ಲಿ ಮನೆಗೆ ತೆಂಗಿನಮರ ಬಿದ್ದು ಹಾನಿ

ಕಡಬ, ಎ.೧೯- ಭಾನುವಾರ ಸಾಯಂಕಾಲ ಭಾರಿ ಗಾಳಿ ಮಳೆಗೆ ಮನೆಗೆ ತೆಂಗಿನ ಮರ ಬಿದ್ದ ಘಟನೆ ಬೆಳಂದೂರು ಸಮೀಪ ನಡೆದಿದೆ. ಬೆಳಂದೂರು ಗ್ರಾಮದ ಗುಂಡಿನಾರು ಸುಲೈಮಾನ್ ಎಂಬವರ ಮನೆಗೆ ತೆಂಗಿನ ಮರ ತುಂಡಾಗಿ ಬಿದ್ದು ಅಲ್ಪ ಹಾನಿಯಾಗಿದೆ.