ಬೆಲ್ ಬಾಟಂ ಜೊತೆಗೆ ಅಕ್ಷಯ್ ರೆಟ್ರೋ ಲುಕ್

ಮುಂಬೈ, ಸೆ.೧೨ :ಈ ವಾರ ಸುದ್ದಿಯಾದವರಲ್ಲಿ ಬ್ಯಾಡ್ ಅಂಡ್ ಗುಡ್ ಬಾಯ್ ಅಕ್ಷಯ ಕುಮಾರ್ ಗೇ ಪ್ರಮುಖ ಸ್ಥಾನ. ಏಕೆಂದರೆ ಅಕ್ಷಯ್ ಏನು ಮಾಡಿದರೂ ಅದು ಸುದ್ದಿ.. ಮೊನ್ನೆಯಷ್ಟೇ ೫೩ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಕ್ಷಯ್ ಫೋಟೋ ಶೂಟ್ ನಲ್ಲಿ ಕಂಗೊಳಿಸಿರುವುದು ರೆಟ್ರೋ ಲುಕ್ ನಲ್ಲಿ.. ಸದ್ಯ ಸ್ಕಾಟ್ ಲ್ಯಾಂಡ್ ನಲ್ಲಿ ತಮ್ಮ ಕುಟುಂಬದ ಜೊತೆಯಲ್ಲಿ ಕಳೆಯುತ್ತಿರುವ ಅಕ್ಷಯ್ ಗೆ ಹುಟ್ಟುಹಬ್ಬದ ಸಲುವಾಗಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಈಚೆಗಷ್ಟೇ ತಮ್ಮ ಪತ್ನಿ ಟ್ವಿಂಕಲ್ ಖನ್ನಾಗೆ ಹೊಟ್ಟೆ ಉರಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಕ್ಕು ನಗಿಸಿದ ಈ ಚಿರಯುವಕ ರೆಟ್ರೋ ಲುಕ್ ನಲ್ಲಿ ನಲಿಯುತ್ತಿರುವುದು ಏಕೆಂದರೆ ಸದ್ಯವೇ ನ ಬೆಲ್ ಬಾಟಂ ಚಿತ್ರ ಸೆಟ್ಟೇರುತ್ತದೆ. ಆ ಚಿತ್ರದಲ್ಲಿ ಇಂತಹ ಲುಕ್ ನಲ್ಲಿಯೇ ಗಮನ ಸೆಳೆಯಬೇಕು. ಹಾಗಾಗಿ ತಮ್ಮ ಹುಟ್ಟು ಹಬ್ಬಕ್ಕೆ ರೆಟ್ರೋ ಮಾದರಿಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಅಕ್ಷಯ್. ಅಂದ ಹಾಗೆ ರಿಷಬ್ ಶೆಟ್ಟಿ ಅಭಿನಯದ ಹಾಗೂ ಜಯತೀರ್ಥ ನಿರ್ದೇಶನದ ಕನ್ನಡದ ಬೆಲ್ ಬಾಟಂ ಚಿತ್ರ ಸೂಪರ್ ಹಿಟ್ ಆಗಿತ್ತು..