ಬೆಲ್ಲದ ಹಣ್ಣಿನಲ್ಲಿದೆ ಔಷಧೀಯ ಗುಣ

ಯಾವಕಾಲದಲ್ಲಾದರೂ ಎಲ್ಲಾ ಹಣ್ಣುಗಳು ಸಿಗುತ್ತವೆ ಆದರೆ ಈ ಬೇಲದ ಹಣ್ಣು ಮಾತ್ರ ಆಯಾ ಕಾಲಕ್ಕೆ ಮಾತ್ರ ಸಿಗುತ್ತದೆ. ಈ ಹಣ್ಣಿನಲ್ಲಿ ಹಲವಾರು ಔಷಧಿಗುಣಗಳು ಅಡಗಿವೆ. ಕಫ ನಿವಾರಣೆಗೆ ಬಾಯಿಂದv ಬರುವ ದುರ್ವಾಸನೆ ತಡಗಟ್ಟಲು ವಸಡುಗಳ ತೊಂದರೆ ಇದ್ದವರು ಹಾಗೂ ಆಮಶಂಕೆ ಭೇಧಿಯ ನಿವಾರಣೆಗೆ ಹಣ್ಣಾದ ಬೇಲದ ಹಣ್ಣಿನಿಂದ ಮೂಲವ್ಯಾಧಿ ಹಾಗೂ ಸಕ್ಕರೆ ಖಾಯಿಲೆಯವರು ಬಳಸ ಬಹುದು.

ಬೇಲದ ಹಣ್ಣಿಗೆ ಸಮಪ್ರಮಾಣ ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ಕಫ ಕಡಿಮೆಯಾಗುತ್ತದೆ.

  • ಆಮಶಂಕೆ ಭೇದಿಯಾಗುತ್ತಿದ್ದರೆ ಬೀಜಗಳನ್ನು ತೆಗೆದ ಬೇಲದ ಕಾಯಿಯ ತಿರುಳನ್ನು ನುಣ್ಣಗೆ ರುಬ್ಬಿ ಸೇವಿಸಿದರೆ ಭೇದಿ ನಿಲ್ಲುತ್ತದೆ.
  • ಬೇಲದ ಎಳೆಗಳ ರಸಕ್ಕೆ ಸೈನದವ ಉಪ್ಪು ಮತ್ತು ಬಿಸಿ ನೀರನ್ನು ಸೇರಿಸಿ ಸೇವಿಸಿದರೆ ಅಸ್ತಮಾ ಕಡಿಮೆಯಾಗುತ್ತದೆ.
  • ಬಿಕ್ಕಳಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ ಬೇಲದ ಹಣ್ಣಿನ ರಸ ಮತ್ತು ನೆಲ್ಲಿಕಾಯು ರಸ ಸೇವಿಸಿ ದಿನಕ್ಕೆ ೨ ಚಮಚ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ ಬೇಲದ ಹಣ್ಣಿನ ರಸಕ್ಕೆ ಒಣಶುಂಠಿ ಪುಡಿ ಮತ್ತು ಬೆಲ್ಲ ಸೇರಿಸಿ ಸೇವಿಸಿದರೆ ತಾಯಿಯ ಎದೆಹಾಲು ವೃದ್ಧಿಸುತ್ತದೆ. ಶರೀರವನ್ನು ತಂಪುಗೊಳಿಸಲು ಮತ್ತು ಬಾಯಿಯ ದುರ್ಗಂಧವನ್ನು ನಿವಾರಣೆ ಮಾಡಲು ಬೇಲದ ಹಣ್ಣಿನ ಪಾನಕವನ್ನು ಸೇವಿಸಬೇಕು.