ಬೆಲ್ದಾಳೆ ಮನೆಯಲ್ಲಿ ಭೋಜನ ಸವಿದ ವಿಜಯೆಂದ್ರ

ಬೀದರ್:ಜ.30: ವಿಜಯೇಂದ್ರ ಅವರು ಪ್ರತಾಪನಗರದಲ್ಲಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರೂ ಆದ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಳೆ ಅವರ ಮನೆಗೆ ಭೇಟಿ ನೀಡಿ ಭೋಜನ ಕೂಟದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ, ಔರಾದ್ ಶಾಸಕರಾದ ಪ್ರಭು ಚವ್ಹಾಣ, ಶಾಸಕರಾದ ಶರಣು ಸಲಗಾರ, ಸಿದ್ದು ಪಾಟೀಲ, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ, ಸುನೀಲ ವಲ್ಯಾಪುರೆ, ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಸುಭಾಸ ಕಲ್ಲೂರ, ಮಾಲಿಕಯ್ಯ ಗುತ್ತೆದಾರ ಸೇರಿದಂತೆ ಅನೇಕ ಮುಖಂಡರು ಇದ್ದರು.