ಬೆಲೆ ಹೆಚ್ಚಾದಂತೆ ಕಂಡ ಕಂಡಲ್ಲಿ ಫಸಲು ಕಟಾವು, ಕಳ್ಳರ ಕಾಟ

ಚಾಮರಾಜನಗರ, ನ,08:- ಕಷ್ಟಪಟ್ಟು ರೈತರು ಬೆಳೆಯುವ ಬೆಳೆಗೆ ನೀರು, ಪ್ರಾಣಿಗಳ ಕಾಟದಜೊತೆಗೆ ಕಳ್ಳರ ಕಾಟವು ಹೆಚ್ಚಾಗಿದ್ದು ಚಾಮರಾಜನಗರದ ವಿವಿಧೆಡೆ ಕಂಡಕಂಡಲ್ಲಿ ಕಳ್ಳರು ಬಾಳೆ ಫಸಲು ಕದಿಯುತ್ತಿದ್ದಾರೆ.
ಬರ ಹಾಗೂ ಮಳೆ ಜೊತೆ ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿದ ರೈತರಿಗೆ ಈಗ ಕಳ್ಳರ ಸಂಕಷ್ಟ ಎದುರಾಗಿದೆ. ಚಾಮರಾಜನಗರ ತಾಲೂಕಿನ ಬೇಡರಪುರ ಹಾಗೂ ಹೆಗ್ಗೋಠಾರ ಗ್ರಾಮದಲ್ಲಿ ಬಾಳೆ ಕಟಾವು ಮಾಡಲಾಗಿದೆ.
ಬೇಡರಪುರ ಗ್ರಾಮದ ಮೂರ್ತಿ ಎಂಬವರ ಜಮೀನಿನಲ್ಲಿ 300 ಕ್ಕೂ ಹೆಚ್ಚು ಬಾಳೆಗೊನೆಗಳನ್ನು ಖದೀಮರುಕಟಾವು ಮಾಡಿದ್ದಾರೆ. ರಾತ್ರೋ ರಾತ್ರಿ ರೈತರು ಬೆಳೆದ ಫಸಲನ್ನೇ ಕಳ್ಳರು ಎಗಿರುಸುತ್ತಿದ್ದಾರೆ. ಬೆಳೆಗೆ ಬೆಲೆ ಬಂದಕೂಡಲೇ ಕಳ್ಳರ ಕಾಟವನ್ನುರೈತರು ಎದುರಿಸುತ್ತಿದ್ದು ಪೆÇಲೀಸರು ಗಮನ ನೀಡಬೇಕಿದೆ.