ಬೆಲೆ ನಿಯಂತ್ರಣ ಮಾಡುವಲ್ಲಿ ಮೋದಿ ವಿಫಲ: ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಗ್ದಾಳಿ

ಸಂಜೆವಾಣಿ ವಾರ್ತೆ,
ವಿಜಯಪುರ, ಏ.27:ಪ್ರಧಾನಿ ನರೇಂದ್ರ ಮೋದಿ ಸರಕಾರ ದೇಶದಲ್ಲಿ ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ನಗರ ಹೊರ ವಲಯದ ಸೊಲ್ಲಾಪುರ ರಸ್ತೆಯ ಬಿಎಲ್ಡಿಇ ನೂತನ ಕಾಲೇಜ್ ಕ್ಯಾಂಪಸ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರಚಾರ ಭಾಷಣದ ವೇದಿಕೆಯಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿಯವರು ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ.
ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲೆಂಡರ್ ಬೆಲೆ ಹೆಚ್ಚಳ ಮಾಡಿದ್ದಾರೆ. ಅಚ್ಚೇ ದಿನ್ ಆಯೇಂಗೆ ಎಂದು ಬೆಲೆ ಏರಿಕೆ ಮಾಡಿದ್ದಾರೆ. ಬೆಲೆ ನಿಯಂತ್ರಣ ಮಾಡುವಲ್ಲಿ ಮೋದಿ ವಿಫಲರಾಗಿದ್ದಾರೆ ಎಂದರು.
ಬೆಲೆ ಏರಿಕೆ ಸೇರಿದಂತೆ ದೇಶದ ಮುಂದಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಿಲ್ಲ ಎಂದು ಹೇಳಿದರು.
ರೈತರ ಕೃಷಿ ಬೆಳೆಗೆ ಬೆಲೆ ನಿಗದಿ ಬೇಡಿಕೆಗಳ ಬಗ್ಗೆ ಗಮನ ಹರಿಸುತ್ತಿಲ್ಲ.
ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದೆ ಎಂದು ತಿಳಿಸಿದರು.
2023 ರ ವಿಧಾನಸಭಾ ಚುನಾವಣೆಯಲ್ಲಿ ನಾವು ಪ್ರಣಾಳಿಕೆಯಲ್ಲಿ ಗ್ಯಾರಂಟಿ ಜಾರಿ ಮಾಡುತ್ತೇವೆಂದು ಮಾತು ಕೊಟ್ಟಿದ್ದೇವು. ಅದರಂತೆ ನಡೆದುಕೊಂಡು ಈಗಾಗಲೇ ಐದು ಗ್ಯಾರಂಟಿ ಅನುಷ್ಠಾನ ಮಾಡಿದ್ದೇ. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ನುಡಿದರು.
ಅನ್ನಭಾಗ್ಯ ಯೋಜನೆ ಮೂಲಕ 7 ಕೆಜಿ ಅಕ್ಕಿ ನೀಡುತ್ತಿದ್ದೇವು.
ಯಡಿಯೂರಪ್ಪ ಸಿಎಂ ಆದ ಬಳಿಕ 7 ರಿಂದ 5 ಕೆಜಿಗೆ ಕಡಿತಗೊಳಿಸಿದರು.
ಯಡಿಯೂರಪ್ಪಗೆ ಈ ಕುರಿತು ಕೇಳಿದರೆ ಅವರು ಒಪ್ಪಲಿಲ್ಲ.
ಕಳೆದ ಚುನಾವನೆಯಲ್ಲಿ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿದ್ದೇವೆ
ಆದರೆ ಕೇಂದ್ರ ಅಕ್ಕಿ ನೀಡಲಿಲ್ಲ.
ಫುಡ್ ಕಾಪೆರ್Çೀರೇಷನ್ ಆಫ್ ಇಂಡಿಯಾದವರಿಗೆ ಅಕ್ಕಿ ನೀಡಬೇಡಿ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ಆಧಿಕಾರಿಗಳು ಹೇಳಿದರು.
ಇದು ಬಡವರಿಗೆ ಮಾಡಿದ ಮಹಾ ಮೋಸ ಎಂದು ಸಿಎಂ ಸಿದ್ಧರಾಮಯ್ಯ ಟೀಕಿಸಿದರು.
ಇತರೆ ರಾಜ್ಯಗಳಲ್ಲಿ ಅಕ್ಕಿ ಕೇಳಿದರೂ ಸಿಗದಿದ್ದಾಗ ಅಕ್ಕಿ ಬದಲಾಗಿ 120 ರೂಪಾಯಿ ಹಣ ನೀಡುತ್ತಿದ್ದೇವೆ.
ಈಗ ಮಹಿಳೆಯರಿಗೆ ಬಸ್ ಚಾರ್ಜ್ ಇಲ್ಲ. ರಾಜ್ಯದಲ್ಲಿ ಎಲ್ಲಿ ಬೇಕಾದರೂ ಹೋಗಬಹುದು.
ಅರಸೀಕರೆಯಲ್ಲಿ ಓರ್ವ ಮಹಿಳೆ ಎಲ್ಲೆಲ್ಲಿ ಬಸ್ ಗಳಲ್ಲಿ ಓಡಾಡಿದ್ದರೋ ಆ ಟಿಕೆಟ್ ಗಳ ಮೂಲಕ ಹಾರ ಮಾಡಿ ಹಾಕಿದ್ದರು.
ಧರ್ಮಸ್ಥಳದ ಹೆಗಡೆ ಅವರು ಶಕ್ತಿ ಯೋಜನೆಯಿಂದ ದೇವಸ್ಥಾನಗಳ ಆದಾಯ ಹೆಚ್ಚಾಗಿದೆ ಎಂದು ಪತ್ರ ಬರೆದಿದ್ದರು. ಎಲ್ಲ ಪಕ್ಷದವರೂ ಬಸ್ ಗಳಲ್ಲಿ ಉಚಿತವಾಗಿ ಓಡಾಡುತ್ತಿಲ್ಲವಾ? ಎಲ್ಲಾ ಜಾತಿ ಪಕ್ಷದವರೂ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.
ಹಾಗೇ ಅನ್ನಭಾಗ್ಯದ ಅಕ್ಕಿಯನ್ನು ಸಹ ಎಲ್ಲರಿಗೂ ನೀಡಲಾಗುತ್ತಿದೆ.
ಗೃಹ ಜ್ಯೋತಿ ಕಾರ್ಯಕ್ರಮಕ್ಕೆ ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ನಾಯಕರು ಚಾಲನೆ ನೀಡಿದ್ದೇವೆ.
ಗೃಹ ಲಕ್ಷ್ಮ ಯೋಜನೆ ಮೂಲಕ ಮಹಿಳೆಯರಿಗೆ ಮಾಸಿಕ 2000 ರೂಪಾಯಿ ನೀಡುತ್ತಿದ್ದೇವೆ. ದೇಶದಲ್ಲಿ ಬೆಲೆ ಏರಿಕೆಯಾಗಿದ್ದರಿಂದ ವಸ್ತುಗಳನ್ನು ಕೊಳ್ಳಲು ವರ್ಷಕ್ಕೆ 24 ಸಾವಿರ ರೂಪಾಯಿ ನೀಡಲಾಗುತ್ತಿದೆ.
ಯುವನಿಧಿ ಯೋಜನೆಗೆ ಶಿವಮೊಗ್ಗದಲ್ಲಿ ಚಾಲನೆ ನೀಡಿದ್ದೇವೆ.
ಬಸವಾದಿ ಶರಣರು ಕೊಟ್ಟ ಮಾತಿನಂತೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ.
ವಿಶ್ವಗುರು ಬಸವಣ್ಣ ಸಾಂಸ್ಕøತಿಕ ನಾಯಕ ಎಂದು ಆದೇಶ ಮಾಡಿದ್ದೇವೆ.
ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಹಾಕಲು ಆದೇಶ ಮಾಡಿದ್ದೇವೆ.
ಯಡಿಯೂರಪ್ಪ, ಬೊಮ್ಮಾಯಿ ಇದನ್ನು ಮಾಡಿಲ್ಲ. ಇದು ಹೆಚ್ಚುಗಾರಿಕೆ ಅಲ್ವಾ? ನಾವು ಬಸವಾದಿ ಶರಣರ ಅನುಯಾಯಿಗಳು
ಗ್ಯಾರಂಟಿಗಳು ಚುನಾವಣೆಗೆ ಮಾತ್ರ ಎಂದು ಬಿಜೆಪಿಯವರು ಹೇಳುತ್ತಾರೆ.
ಯಾವುದೇ ಕಾರಣಕ್ಕೂ 5 ವರ್ಷ ಯಾವ ಗ್ಯಾರಂಟಿ ನಿಲ್ಲಲ್ಲ ಎಂದು ಭರವಸೆ ನೀಡುತ್ತೇನೆ ಎಂದ ಸಿಎಂ ಸಿದ್ಧರಾಮಯ್ಯ
37 ಸಾವಿರ ಕೋಟಿ ಕಲೆದ ವರ್ಷ ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ.
57 ಸಾವಿರ ಕೋಟಿ ಈ ವರ್ಷದ ಗ್ಯಾರಂಟಿಗೆ ಇಡಲಾಗಿದೆ.
ಬಿಜೆಪಿಯವರಿಗೆ ಬಡವರಿಗೆ ಸಹಾಯ ಮಾಡುವ ಮನಸ್ಸಿಲ್ಲ.
ಕಾರಣ ಈಗ ಅವಕಾಶ ಇದೆ. ಈಗ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಲೋಕಸಭಾ ಚುನಾವಣೆ ಹಿನ್ನಲೆ ದೇಶದಾದ್ಯಂತ ಜಾರಿ ಮಾಡಲು ಐದು ಗ್ಯಾಂರಂಟಿ ಘೋಷಣೆ ಮಾಡಿದ್ದೇವೆ.
ಬಡ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ ನೀಡಲಾಗುತ್ತದೆ.
ಇದರ ಜೊತೆಗ ರಾಜ್ಯದ 24 ಸಾವಿರ ವರ್ಷಕ್ಕೆ ಸಿಗುತ್ತದೆ.
ನಿರುದ್ಯೋಗಿ ಯುವಕರಿಗೆ 1 ಲಕ್ಷ ಸ್ಟೈಪಂಡ್ ನೀಡಲಾಗುತ್ತದೆ.
ರೈತರ ಎಲ್ಲ ಸಾಲ ಮನ್ನಾ ಮಾಡಲಾಗುತ್ತದೆ.
ರೈತರ ಬೆಳೆಗಳಿಗೆ ಬೆಲೆ ನಿಗದಿ,
ಜಾತಿ ಜನಗಣತಿ ಮಾಡಲಾಗುತ್ತದೆ.
ಎನ್ ಆರ್ ಇ ಜಿ ಎಸ್ ಟಿಪಿ ಯಲ್ಲಿ ಕನಿಷ್ಟ ವೇತನ ನೀಡುತ್ತೇವೆ.
ನಿತ್ಯ 400 ರೂಪಾಯಿ ನಿಗದಿ ಮಾಡುತ್ತೇವೆ.
ನಮ್ಮ ಉದ್ದೇಶ ಎಲ್ಲ ಬಡವರು ರೈತರು ಯುವಕರು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವುದೇ ಆಗಿದೆ ಎಂದರು.
ರಾಜಕೀಯ, ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಎಲ್ಲರಿಗೂ ಸಿಗಬೇಕೆಂದು ಅಂಬೇಡ್ಕರ್ ಹೇಳಿದ್ದರು. ಇಂದಿರಾ ಗಾಂಧಿ ಅವರು ಬಡವರನ್ನು ಮೇಲೆತ್ತಲು ಕೆಲಸ ಮಾಡಿದ್ದರು.
ಗರೀಬಿ ಹಠಾವೋ ಎಂದು ಹೇಳಿದ್ದರು.
ಬಿಜೆಪಿ ಕಾಲದಲ್ಲಿ ಬಡವರಿಗೆ ಸಹಾಯ ಮಾಡುವ ಕೆಲಸ ಮಾಡಿಲ್ಲ.
ವಾಜಪೇಯಿ ಭಾರತ ಪ್ರಜ್ವಲಿಸುತ್ತಿದೆ ಎಂದು ಹೇಳಿ 2004 ರಲ್ಲಿ ಸೋತು ಹೋದರು.
ಈಗ ಮೋದಿ ವಿಕಸಿತ ಭಾರತ ಮಾಡುತ್ತೇವೆಂದು ಹೇಳುತ್ತಾರೆ.
2047 ಕ್ಕೆ ವಿಕಸಿಕ ಭಾರತ ಮಾಡುವ ಮಾತನ್ನು ಮೋದಿ ಆಡುತ್ತಾರೆ.
ಆದರೆ ಚುನಾವಣೆಯಲ್ಲಿ ಸೋಲುತ್ತೇವೆಂದು ಹೇಳುತ್ತಿದ್ದಾರೆ.
400 ಸೀಟ್ ಬರುತ್ತೇವೆ ಎನ್ನುತ್ತಾರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ.
ಇವರಿಗೆ ಸಂವಿಧಾನ ಬಗ್ಗೆ ಕಾಳಜಿ ಇಲ್ಲ.
ಬಡವರಿಗೆ ವಿರೋಧವಾಗಿ ಇರುವುದು,
ಸಮಾಜದಲ್ಲಿ ಅಸಮಾನತೆ ಇರಬೇಕೆನ್ನುವುದು ಬಿಜೆಪಿ ಧೋರಣೆಯಾಗಿದೆ. ಬಿಜೆಪಿಯವರು ಶೋಷಣೆ ಮಾಡಲು ಹೇಳುತ್ತಾರೆ.
ನೀವೆಲ್ಲ ಈ ಬಾರಿ ದೊಡ್ಡ ಮನಸ್ಸು ಮಾಡಬೇಕಿದೆ.
ಏನೂ ಕೆಲಸ ಮಾಡದ ಹಾಲಿ ಸಂಸದ ಬಿಜೆಪಿಯ ರಮೇಶ ಜಿಗಜಿಣಗಿ ಅವರನ್ನು ಸೋಲಿಸಬೇಕೆಂದು ಕರೆ ನೀಡಿದರು.