ಬೆಲೆ ಕುಸಿತ: ಪ್ರತಿಭಟನೆ

ಲಕ್ಷ್ಮೇಶ್ವರ,ಆ4: ಲಕ್ಷ್ಮೇಶ್ವರದಲ್ಲಿ ನೂರಾರು ರೈತರು ದಿಡೀರನೆ ಟೊಮೆಟೊ ಬೆಲೆ ಕುಸಿತದಿಂದಾಗಿ ರೊಚ್ಚಿಗೆದ್ದು ಟೊಮೆಟೊ ಬೀದಿಗೆ ಸುರಿದು ಪ್ರತಿಭಟನೆ ಮಾಡಿದರು. ಮಾರುಕಟ್ಟೆಯಲ್ಲಿ ಪ್ರತಿ 20 ಕೆಜಿ ಟೊಮೆಟೊದ ಬಾಕ್ಸಿಗೆ ಕೇವಲ 30 ರು ಖರೀದಿ ಮಾಡುತ್ತಿದ್ದು ರೈತರು ಇದರಿಂದಾಗಿ ಕಂಗಾಲಾಗಿದ್ದಾರೆ. ಜಮೀನಿನಿಂದ ಟೊಮೆಟೊ ಹಣ್ಣನ್ನು ಬಿಡಿಸಿಕೊಂಡು ಬರಲು ಪ್ರತಿ ಖುಷಿ ಕೂಲಿ ಕಾರ್ಮಿಕರಿಗೆ 250 ರಿಂದ 300 ರೂ ನೀಡಬೇಕಾಗಿದ್ದು ಅತಿವೃಷ್ಟಿಯಿಂದಾಗಿ ಮೊದಲೇ ಬೆಳೆ ಹಾನಿಗಿಡಾಗಿದ್ದು ರೈತರು ಕೋಲಾರ ಮತ್ತು ಕಡೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಮಾಡುವಂತೆ ಈ ಕೂಡಲೇ ರೈತರಿಗೆ ನೆರವಾಗಲು ಟೊಮೆಟೊ ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷಾತೀತ ರೈತ ಪರ ಹೋರಾಟ ವೇದಿಕೆಯ ಅಧ್ಯಕ್ಷ ಮಹೇಶ್ ಸೊಪ್ಪಿನವರು ಸರ್ಕಾರ ಪ್ರತಿಯೊಂದು ಉತ್ತರ ಕರ್ನಾಟಕದ ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದ್ದು, ರೈತರ ಸಹನೆವನ್ನು ಕಳೆದುಕೊಂಡು ಬೀದಿಗಿಳಿದರೆ ಯಾವ ಸರ್ಕಾರವು ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ ಆದ್ದರಿಂದ ತೋಟಗಾರಿಕಾ ಇಲಾಖೆಯವರು ಕೂಡಲೇ ಮಧ್ಯಪ್ರವೇಶಶಿ ರೈತರ ನೆರವಿಗೆ ಧಾವಿಸಿದಿದ್ದರೆ ಇನ್ನೂ ಉಗ್ರ ಹೋರಾಟ ಮಾಡುವುದಾಗಿ ಹೇಳಿದರಲ್ಲದೆ ಇದೇ ದಿನ ಅ,8 ರಂದು ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದಲ್ಲಿ ಸ್ವಯಂ ಪ್ರೇರಣೆಯಿಂದ ಬಂದ್ ಕರೆ ನೀಡಿರುವದಾಗಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ರಾಜು ಕರಾಟೆ, ಶಿವಾನಂದಲಿಂಗಶೆಟ್ಟಿ, ಶೇಖಣ್ಣ ಗೋಡಿ, ಸೋಮನಗೌಡ್ರು ಪಾಟೀಲ್, ಸೋಮು ಬಳಗಾನೂರ, ಬಸಣ್ಣ ಬೆಂಗಳೂರು, ಚನ್ನಬಸಪ್ಪ ಬಳಗಾನೂರ, ಶಿವಣ್ಣ ವಾಲ್ಮೀಕಿ ಸೇರಿದಂತೆ ಅನೇಕ ರೈತರಿದ್ದರು.