ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ವಿಜಯಪುರ, ನ.17- ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕೇಂದ್ರ ಸಮಿತಿಯ ಮೇರೆಗೆ ಇಡೀ ರಾಷ್ಟ್ರವ್ಯಾಪಿ ಅಗತ್ಯ ವಸ್ತುಗಳ ಬೆಲೆ ಏರಿಮೆ ಪೆಟ್ರೋಲ್ ಗ್ಯಾಸ, ಡಿಸೇಲ್ ಬೆಲೆ ಏರಿಕೆಯಾಗಿರುವುದರಿಂದ ಇಂದು ನಗರದ ಡಾ. ಬಿ.ಅರ್. ಅಂಬೇಡ್ಕರ್ ವೃತ್ತದಲ್ಲಿ ಗ್ಯಾಸ ಇಟ್ಟುಕೊಂಡು ಶವಸಂಸ್ಕಾರ ಮಾಡುವ ಸಂದರ್ಭದಲ್ಲಿ ರೋಧಿಸುವ ಹಾಗೇ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸುರೇಖಾ ರಜಪೂತ ಮಾತನಾಡಿ, ಕೇಂದ್ರದಲ್ಲಿ ಹಿಂದೆ ಮನಮೋಹನ ಸರ್ಕಾರ ವಿದ್ದಾಗ ಗ್ಯಾಸ್ ಬೆಲೆ ಏರಿಕೆಯಾದಾಗ ಸ್ಮೃತಿ ಇರಾಣಿಯವರು ಪ್ರತಿಭಟನೆ ಹಮ್ಮಿಕೊಂಡಿದ್ದರು ಆದರೆ ಸದ್ಯ ಗ್ಯಾಸ ಬೆಲೆ ಡಬಲ್ ದುಬಾರಿಯಾಗಿದ್ದು, ಹಾಗೂ ಸಿದ್ರಾಮಯ್ಯ ಸರ್ಕಾರ ವಿದ್ದಾಗ ಗ್ಯಾಸಗಾಗಿ ಸಬ್ಸೀಡಿ ನೀಡುತ್ತಿದ್ದರೂ ಅದನ್ನು ಕಡಿತಗೊಳಿಸಿ ಇಡೀ ಕುಟುಂಬಕ್ಕೇ ಸಂಸಾರ ನಡೆಸಿಕೊಂಡು ಹೋಗುವುದಕ್ಕೆ ಹೆಣ್ಣುಮಕ್ಕಳ ಪರಿಸ್ಥಿತಿ ಕಣ್ಣೀರು ನಿಂದ ತುಂಬಿದೆ. ಇದನ್ನು ಯಾರ ಕೇಳಬೇಕು. ಎಲ್ಲಿ ಹೋದರು ಸ್ಮೃತಿ ಇರಾನಿ. ಸದ್ಯ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದ್ದು, ದಿನದಿನಂದಕ್ಕೆ ಕುಟುಂಬ ನಿರ್ವಹಿಸಿಕೊಂಡು ಹೋಗುವುದು ದರ್ಲಬವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ಭೀಮಶಿ ಕಲಾದಗಿ ಮಾತನಾಡಿ, ಪೆಟ್ರೋಲ್, ಡಿಸಲೇ ಬೆಲೆ ಏರಿಕೆಯಿಂದ ಸಿಮೇಂಟ್, ಕಲ್ಲು, ಮುಂತಾದವುಗಳೆಲ್ಲಾ ಬೆಲೆ ಏರಿಕೆಯಾಗಿದೆ. ಇದ್ದರಿಂದ ಸಾರ್ವಜನಿಕರು ತೊಂದರೆವುಂಟಾಗಿದೆ. ಹಾಗೂ ಸಮಸ್ತ ಜನತೆ ಕೆಂದ್ರ ಸರ್ಕಾರದ ವಿರದ್ದ ಆಕ್ರೋಶ ಭರಿತರಾಗಿದ್ದಾರೆ. ಈ ಬೆಲೆ ಏರಿಕೆ ಕಡಿತಗೊಳಿಸಿ ಸಾರ್ವಜನಿಕರಿಗೆ ಬದುಕಲು ಅನುವ ಮಾಡಿಕೊಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಾಜಮಾ ನಧಾಫ್, ಕುಸಮಾ ಹಜೇರಿ, ಸುಮಿತ್ರಾ ಘೊಣಸಗಿ, ಸೋಮಿಭಾಯಿ ರಾಠೊಡ, ವಿಜಯಲಕ್ಷ್ಮಿ ಪಾಟೀಲ, ಯಲ್ಲವ್ವ ಇಲಕಲ್, ರತ್ನಾ ತೇಲಿ ಮುಂತಾದವರು ಇದ್ದರು.