ಬೆಲೆ ಏರಿಕೆ ವಿರುದ್ಧ ಬಿಜೆಪಿ ಮುಖಂಡರಿಂದ ರಾಜ್ಯಪಾಲರಿಗೆ ಮನವಿ

ಅಫಜಲಪುರ:ಜೂ.6: ಐದು ಉಚಿತ ಘೊಷಣೆಗಳನ್ನು ಮಾಡಿ ಜನರಿಗೆ ಮಂಕು ಬೂದಿ ಎರಚಿರುವ ಕಾಂಗ್ರೆಸ್ ಸರ್ಕಾರ ಈಗ ವಿದ್ಯುತ್ ಬೆಲೆ ಏರಿಕೆ ಮಾಡಿ ಜನರಿಗೆ ಬರೆ ಎಳೆದಿದೆ ಎಂದು ಬಿಜೆಪಿ ಮುಖಂಡ ಕುಶಾಲ್ ಗುತ್ತೇದಾರ ಆರೋಪಿಸಿದರು.

ವಿದ್ಯುತ್ ಬೆಲೆ ಏರಿಕೆ ಮಾಡಿದ್ದನ್ನು ಖಂಡಿಸಿ ಅಫಜಲಪುರ ಮಂಡಲದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಚುನಾವಣೆಗೂ ಮುನ್ನ ಗ್ಯಾರಂಟಿ ಕಾರ್ಡುಗಳನ್ನು ತೋರಿಸಿ ಮತ ಪಡೆದು ಅಧಿಕಾರಕ್ಕೆ ಬಂದವರು ಈಗ ವರಸೆ ಬದಲಿಸಿ ಬೆಲೆ ಏರಿಕೆ ಮಾಡಿದ್ದಾರೆ. ಇದು ಅಕ್ಷಮ್ಯವಾಗಿದ್ದು ಕೂಡಲೇ ಸರ್ಕಾರ ತನ್ನ ನಿರ್ಧಾರ ಬದಲಿಸಿ ಬೆಲೆ ಏರಿಕೆಯನ್ನು ಕೈಬಿಡಬೇಕು. ಇಲ್ಲಿದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ ಗುಣಾರಿ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಅಶೋಕ ಬಗಲಿ ಮಾತನಾಡಿದರು.

ನಂತರ ತಹಸೀಲ್ದಾರ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮುಖಂಡರಾದ ಅಪ್ಪಾಶ ಬುರಲಿ, ಶ್ರೀಶೈಲ್ ಬಳೂರ್ಗಿ, ಮಲ್ಲಿಕಾರ್ಜುನ ಮಾತೋಳಿ, ರಾಘವೇಂದ್ರ ಕುಲಕರ್ಣಿ, ಸಚಿನ ಮ್ಯಾಕೇರಿ, ಸೋಮು ಶ್ರೀಗಿರಿ, ಸಿದ್ದು ದಿಕ್ಸಂಗಿ, ಅಶೋಕ ದುದ್ದಗಿ, ಸುಭಾಷ ಪಾಟೀಲ್, ಶ್ರೀದೇವಿ, ಶಾಂತಾಕುಮಾರಿ, ಶಿವಾನಂದ ಮಾಸ್ಟರ್, ಅವಧೂತ ಜಮಾದಾರ, ಫೀರೋಜ ಪಠಾಣ್ ಅನೇಕರಿದ್ದರು.