ಬೆಲೆ ಏರಿಕೆ ಲೆಕ್ಕಿಸದೆ ದೀಪಾವಳಿಗೆ ವಸ್ತುಗಳ ಖರೀದಿ

ಸಿರವಾರ.ನ.೪-ಕೋವೀಡ್ ಸಂಕಷ್ಟ ದೂರವಾಗಿ ಮನೆ, ಮನಗಳಲ್ಲಿ ದುಷ್ಟ ಶಕ್ತಿಗಳನ್ನು ಓಡಿಸಿ ದೀಪ ಬೆಳಗಲಿ ಎಂದು ಆಚರಣೆ ಮಾಡಲು ದೀಪಾವಳಿ ಆಗಮಿಸಿದ್ದೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ಸಹ ಜನರು ಖರೀದಿಯಲ್ಲಿ ತೊಡಗಿದ್ದಾರೆ.
ಬಹುತೇಕರು ಆಚರಣೆ ಮಾಡುವ ಹಬ್ಬ ದೀಪಾವಳಿಯಾಗಿದೆ. ಸಿಹಿ ತಿಂಡಿಗಳು, ಹಣ್ಣು, ಹೂ, ಕುಂಬಳಕಾಯಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿವೆ. ಮನೆ, ವ್ಯಾಪಾರ ಮಾಡುವ ಅಂಗಡಿ, ಹೊಟೆಲ್ ಎಲ್ಲಾವನ್ನು ಸ್ವಚ್ಚಗೊಳಿಸಿ ಪೂಜೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ದೀಪಾವಳಿಗೆ ಮುಖ್ಯವಾಗಿ ದೀಪಗಲನ್ನು ಹಚ್ಚಲು ವಿವಿಧ ಬಗೆಯ ಪಣತಿಗಳು, ಆಕಾಶ ಬುಟ್ಟಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಎಲ್ಲೆಂದರಲಿ ಪಟಾಕಿಗಳನ್ನು ಮಾರಾಟ ಮಾಡದೆ ಪಿಡಬ್ಲ್ಯೂಡಿ ಕ್ಯಾಂಪಿನ ಮುಂಭಾಗದಲ್ಲಿ ಒಂದೇ ಕಡೆ ಪಟಾಕಿ ಮಾರಟಕ್ಕೆ ಅವಕಾಶವನ್ನು ನೀಡಲಾಗಿದೆ. ದೀಪಾವಳಿ ಅಂಗಡಿ ಪೂಜೆ ನೆಪದಲ್ಲಿ ಇಸ್ಪೀಟ್, ಜೂಜಾಟವನ್ನು ನಿಷೇಧ ಮಾಡಲಾಗಿದೆ, ಒಂದು ವೇಳೆ ಆಡುತ್ತಿರುವುದು ಕಂಡು ಬಂದರೆ ಕ್ರಮಕೈಗೊಳಲಾಗುವುದು ಎಂದು ಪೋಲಿಸ್ ಈಗಾಗಲೇ ವಾಹನದಲ್ಲಿ ಘೋಷಣೆ ಮಾಡಿದ್ದಾರೆ.