ಬೆಲೆ ಏರಿಕೆ ಮಧ್ಯಯು ಸಡಗರದಿಂದ ದೀಪಾವಳಿ ಆಚರಣೆ

ಗಗಣಕ್ಕೇರಿದ ಅಗತ್ಯ ವಸ್ತುಗಳು-ಸಾಲ ಮಾಡಿ ಖರೀದಿಗೆ ಮುಂದಾದ ಗ್ರಾಹಕ
ರಾಯಚೂರು.ನ.೦೪.ಬೆಳಕಿನ ಹಬ್ಬ ದೀಪಾವಳಿಯು ಬೆಲೆ ಏರಿಕೆ ನಡುವೆಯೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ನಗರದಲ್ಲಿ ಜೋರಾಗಿ ಕಂಡು ಬಂದಿತು.
ಕೊರೊನ ನಂತರದಲ್ಲಿ ದೇಶಾದ್ಯಂತ ಅತ್ಯಂತ ಸಡಗರದಿಂದ ಸಾರ್ವಜನಿಕರು ಬೆಳಕಿನ ಹಬ್ಬ ದೀಪಾವಳಿ ಯನ್ನು ಆಚರಿಸುತ್ತಿದ್ದು ಆದರೆ ಬೆಲೆ ಏರಿಕೆ ಬಡವರಿಗೆ ಕತ್ತಲು ತಂದಿದೆ ಆದರೂ ಸಾಲ ಮಾಡಿ ಹಬ್ಬವನ್ನು ಆಚರಿಸಲು ಮುಂದಾಗಿದ್ದಾರೆ.
ವ್ಯಾಪಾರಿಗಳು ಎರಡು ದಿನದಿಂದಲೇ ಹಣತೆ, ಕುಂಬಳಕಾಯಿ, ಹಣ್ಣು ಇತರ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿಕೊಂಡು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುತ್ತಿದ್ದು,ದೀಪಾವಳಿ ಹಬ್ಬಕ್ಕೆ ಒಂದು ವಾರ ಮೊದಲೆ ವ್ಯಾಪಾರ, ವಹಿವಾಟಿ ಜೋರು ಪಡೆದುಕೊಂಡಿದ್ದು ಉಡುಪು, ಬಟ್ಟೆ ಅಂಗಡಿ, ಆಕಾಶ ಬುಟ್ಟಿ, ಮದರಂಗಿ, ಪಟಾಕಿ ವ್ಯಾಪಾರ ಜೋರಾಗಿ ನಡೆಯುತ್ತಿದ್ದು ಆದರೆ ಮಾರುಕಟ್ಟೆಯಲ್ಲಿ ಅಗತ್ಯ ಸಾಮಗ್ರಿಗಳ ಬೆಲೆ ಮಾತ್ರ ಗಗನಕ್ಕೆ ಏರಿವೆ ಕುಂಬಳಕಾಯಿ ಬೆಲೆ ಒಂದಕ್ಕೆ ?೧೦೦ ರಿಂದ ೧೨೦ ಇದೆ. ಹೂವಿನ ದರ ?೪೦ಕ್ಕೆ ಮೊಳ, ಒಂದು ಹಾರಕ್ಕೆ ?೧೦೦ ನಿಗದಿ ಮಾಡಲಾಗಿದೆ. ಹಣ್ಣಿನ ದರ ಸಾಮಾನ್ಯ ದಿನಗಳಿಗಿಂತ ದುಪ್ಪಟ್ಟು ಮಾಡಲಾಗಿದೆ. ಬಾಳೆಗೊನೆ, ತೆಂಗಿನ ಪರಕೆ ಬೆಲೆಯೂ ಗಗನಕ್ಕೇರಿದೆ. ಹೀಗಾಗಿ ಗ್ರಾಹಕರು ಖರೀದಿಸಲು ಹಿಂದೇಟು ಹಾಕುವಂತಾಗಿದೆ ಆದರೆ ಕಳೆದ ೨ ವರ್ಷದಿಂದ ಸಡಗರದಿಂದ ಹಬ್ಬವನ್ನು ಆಚರಿಸಿಲ್ಲ ಅದರಿಂದ ಸಾಲ ಮಾಡಿ ಬೆಳಕಿನ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.ಇಂದು ಬಲಿಪಾಡ್ಯ ಅಂಗವಾಗಿ ಬೆಳಿಗ್ಗೆ ಆರತಿ, ಸಂಜೆ ಲಕ್ಷ್ಮಿ ಪೂಜೆ ಮಾಡಲಾಗುತ್ತಿದೆ. ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆಯನ್ನು ಪ್ರತಿ ವರ್ಷದಂತೆ ಈ ಬಾರಿ ಸಂಭ್ರಮದಿಂದ ಆಚರಣೆ ಮಾಡುತ್ತಾರೆ.