ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ: ಈರುಳ್ಳಿ ರಫ್ತಿನ ಮೇಲೆ ಶೇ. 40 ರಷ್ಟು ಸುಂಕ : ಕೇಂದ್ರ ಸರ್ಕಾರ

ನವದೆಹಲಿ,ಆ.19-ದೇಶೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸುವ ಕ್ರಮವಾಗಿ ಡಿಸೆಂಬರ್ 31 ರವರೆಗೆ ಈರುಳ್ಳಿ  ರಫ್ತಿನ ಮೇಲೆ ಶೇಕಡಾ 40 ರಫ್ತು ಸುಂಕ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸೆಪ್ಟೆಂಬರ್‌ನಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ವರದಿಗಳ ನಡುವೆಯೇ ರಫ್ತು ಸುಂಕ ವಿಧಿಸಲಾಗಿದ್ದು   ಕೇಂದ್ರ ಹಣಕಾಸು ಸಚಿವಾಲಯ ಈ ಕುರಿತು ಅಧಿಸೂಚನೆ  ಹೊರಡಿಸಿದೆ

ಬೆಲೆ ಏರಿಕೆಯನ್ನು ತಡೆಯಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ  ಸುಧಾರಿಸಲು ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರ  ಈರುಳ್ಳಿ ಮೇಲೆ   ಶೆ. 40 ರಷ್ಡು ರಫ್ತು ಸುಂಕ ವಿಧಿಸಿದೆ.

ಈ ರಫ್ತು ಸುಂಕ  ಈ ವರ್ಷದ  ಡಿಸೆಂಬರ್ 31ರವರೆಗೆ ಮಾನ್ಯವಾಗಿರುತ್ತದೆ. ಈ ಹಿಂದೆ, ಗೃಹ ಗ್ರಾಹಕರು ಬಳಸುವ ಗುಣಮಟ್ಟದ ಈರುಳ್ಳಿಯ ಬೆಲೆಗಳು ಸೆಪ್ಟೆಂಬರ್ ವೇಳೆಗೆ ಕೆಜಿಗೆ 55-60 ರೂ.ಗೆ ಸುಮಾರು ದ್ವಿಗುಣಗೊಳ್ಳಲಿವೆ ಎಂದು ಹೇಳಲಾಗಿದೆ.

ದೇಶದಲ್ಲಿ ಸಾಕಷ್ಟು ಈರುಳ್ಳಿಯ ದಾಸ್ತಾನು ಇದ್ದರೂ, ಈ ವರ್ಷ ಬೇಸಿಗೆಯ ಬಿಸಿಲಿನ ದೀರ್ಘಾವಧಿಯ ಕಾರಣದಿಂದಾಗಿ ಕಳಪೆ ಗುಣಮಟ್ಟದ ಈರುಳ್ಳಿಯ ಹೆಚ್ಚಿನ ಪ್ರಮಾಣದ ಉತ್ತಮ ಗುಣಮಟ್ಟದ ಈರುಳ್ಳಿ ದುಬಾರಿಯಾಗಿದೆ .

ಹೆಚ್ಚಿನ ಪ್ರಮಾಣದಲ್ಲಿ ಕೆಟ್ಟ ಗುಣಮಟ್ಟದ ಈರುಳ್ಳಿಯ ಜೊತೆಗೆ, ಇತರ ತರಕಾರಿಗಳಲ್ಲಿನ ಹೆಚ್ಚಿನ ಹಣದುಬ್ಬರ ಈರುಳ್ಳಿ ಬೆಲೆ ಹೆಚ್ಚಿಸಲು ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಕೆಟ್ಟ ಗುಣಮಟ್ಟದ ಈರುಳ್ಳಿಯ ಜೊತೆಗೆ, ಇತರ ತರಕಾರಿಗಳಲ್ಲಿನ ಹೆಚ್ಚಿನ ಹಣದುಬ್ಬರವೂ ಈರುಳ್ಳಿ ಬೆಲೆಯನ್ನು ಹೆಚ್ಚಿಸಲು ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.