ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ: ಕಲಾಪದಿಂದ ನಾಲ್ವರು ಕೈ ಸದಸ್ಯರ ಅಮಾನತು

ನವದೆಹಲಿ, ಜು.25- ಬೆಲೆ ಏರಿಕೆ ಖಂಡಿಸಿ ಲೋಕಸಭೆಯಲ್ಲಿ ಇಂದು ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ನಾಲ್ವರು ಕಾಂಗ್ರೆಸ್ ಸಂಸದರನ್ನು ಇಂದು ಅಮಾನತು ಮಾಡಲಾಗಿದೆ.
ಸದನದಲ್ಲೇ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಟಿಎನ್ ಪ್ರತಾಪನ್ ಅವರನ್ನು ಅಮಾನತು ಮಾಡಲಾಗಿದ್ದು, ಆಗಸ್ಟ್ 12ರ ವರೆಗೂ ನಡೆಯಲಿರುವ ಮುಂಗಾರು ಅಧಿವೇಶನದಿಂದ ಹೊರಗಿಡುವಂತೆ ಸಭಾಧ್ಯಕ್ಷ ಓಂ ಬಿರ್ಲಾ ಆದೇಶಿಸಿದ್ದಾರೆ.
ಯಾವುದೇ ವಿಷಯದ ಬಗ್ಗೆ ಚರ್ಚಿಸಲು ಸಿದ್ಧನಿದ್ದೇನೆ. ಇಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆಗಳು ಆಗಬೇಕು. ನೀವು ಪ್ರತಿಭಟನೆ ಮಾಡುವುದಿದ್ದರೆ ಸದನದಿಂದ ಹೊರಗೆ ಮಾಡಿ. ಆದರೆ ನನ್ನ ಹೃದಯವಂತಿಕೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ ಎಂದು ಸಭದ್ಯಕ್ಷರು ಎಚ್ಚರಿಕೆ ನೀಡಿ
ದ್ದರು.
ಭೋಜನ ವಿರಾಮದ ನಂತರ ಚರ್ಚೆ ಮುಂದುವರೆ ಸುವುದಾಗಿ ತಿಳಿಸಿದ್ದರು. ಆದರೆ ಕಾಂಗ್ರೆಸ್ ಸದಸ್ಯರು ನಾಮಫಲಕ ಹಿಡಿದು ಪ್ರವೇಶಿಸಿದ್ದರಿಂದ ಅವರನ್ನು ಇಡೀ ಅಧಿವೇಶನದಿಂದ ಅನಾನತು ಮಾಡಿ ಸಭಾಧ್ಯಕ್ಷರು ಕಲಾಪ ನಾಳೆಗೆ ಮುಂದೂಡಿದರು.