ಬೆಲೆ ಏರಿಕೆ ಖಂಡಿಸಿ ಅಡುಗೆ ಮನೆಯಿಂದಲೇ ಪ್ರತಿಭಟನೆ

ಕಲಬುರಗಿ,ಜೂ.9- ಕೋವಿಡ ಸಂಕಷ್ಟದ ಸಂದರ್ಭದಲ್ಲಿ ನಮ್ಮನ್ನು ಆಳುವ ಸರಕಾರಗಳು, ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿಯಂತ್ರಣ ಮಾಡುತ್ತಿಲ್ಲ. 5 ರಾಜ್ಯಗಳ ಚುನಾವಣೆ ನಂತರ ಇಂಧನ ಬೆಲೆಯಲ್ಲಿ ಕಳೆದ 35 ದಿನದಲ್ಲಿ 20 ಬಾರಿ ಹೆಚ್ಚಳವಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 4.91ರೂ. ಹಾಗೂ ಡೀಸೆಲ್ ಗೆ 5.49 ರೂ.ಏರಿಕೆ ಕಂಡಿರುವುದು ಖಂಡಿಸಿ ಆನ್‍ಲೈನ್ ಮೂಲಕ ಅಖಿಲ ಭಾರತ ಯುವಜನ ಫೆಡರೇಶನ್ ನೇತೃತ್ವದಲ್ಲಿ ಅಡುಗೆ ಮನೆಯಿಂದಲೇ ಪ್ರತಿಭಟ ನಡೆಸಲಾಯಿತು.
ಕೊರೋನಾ ಸೊ0ಕಿನಿ0ದ ಜನರ ಬದುಕು ಸಂಪೂರ್ಣ ಹದಗೆಟ್ಟಿದೆ. ಜನರು ಉದ್ಯೋಗವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಕಷ್ಟಗಳನ್ನು ಅನುಭವಿಸುತ್ತಾ ಬದುಕನ್ನು ಸಾಗಿಸಲು
ವಿಷಯವಾಗಿದೆ ಎಂದು ಅಖಿಲ ಭಾರತ ಯುವಜನ ಫೆಡರೇಶನ್ ಕಲಬುರಗಿ ಜಿಲ್ಲಾ ಅಧ್ಯಕ್ಷ, ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ ಕಳವಳ ವ್ಯಕ್ತಪಡಿಸಿದರು.
ಎಐವೈಎಫ್ ಸಂಘಟನೆಯ ರಾಜ್ಯ ಮಟ್ಟದ ಕರೆಯ ಮೇರೆಗೆ ಅಡುಗೆ ಮನೆಯಿಂದಲೇ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 1ತಿಂಗಳಲ್ಲಿ ಅಂತಾರಾಷ್ಟ್ರೀಯ ತೈಲ ಬೆಲೆಗಳು ಏರಿಳಿತ ಕಂಡರೂ, ನಮ್ಮ ರಾಷ್ಟ್ರದಲ್ಲಿ ಮಾತ್ರ ಬೆಲೆ ಹೆಚ್ಚುತ್ತಲೇ ಇದೆ ಎಂದರು.
ಉದಾಹರಣೆ ಮೇ 20 ರಂದು ಬ್ರೆ0ಚ ಕಚ್ಚಾ ತೈಲ ದರ 65.11 ಡಾಲರ್ ಗೆ ಕುಸಿದಿತ್ತು. 34ದಿನಗಳಲ್ಲಿ ಇದು ಅತ್ಯಂತ ಕಡಿಮೆ ದರವಾಗಿತ್ತು ಆದರೆ ಭಾರತದಲ್ಲಿ ಮರುದಿನ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಕ್ರಮವಾಗಿ 19 ಪೈಸೆ ಮತ್ತು 29 ಪೈಸೆ ಏರಿಕೆ ಮಾಡಿರುವದು ಖ0ಡನಿಯ.
ಚುನಾವಣೆ ಕಾರಣದಿಂದ ಫೆಬ್ರವರಿ 26 ರಿಂದ 66 ದಿನಗಳ ಕಾಲ ದರ ಹೆಚ್ಚು ಮಾಡದೆ ಇದ್ದುದರಿಂದ ತೈಲ ಮಾರಾಟ ಕಂಪನಿಗಳಿಗೆ ಆದಾಯ ನಷ್ಟವಾಗಿತ್ತು. ಹೀಗಾಗಿ ಚುನಾವಣೆ ನಂತರ ಅವು ಆ ನಷ್ಟ ತುಂಬಿಸಿಕೊಳ್ಳಲು ದರ ಏರಿಕೆ ಮಾಡುತ್ತಿದೆ ಎಂದು ಸರಕಾರಿ ತೈಲ ಕಂಪನಿಗಳ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಇವಗಳ ಬೆಲೆ ಶತಕವನ್ನು ತಲುಪಿದ್ದು ಸಾಮಾನ್ಯ ಜನರಿಗೆ ಹೊರೆಯಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯೂ ಸಹಜವಾಗಿಯೇ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಪೂರಕವಾಗುತ್ತದೆ. ಅಡುಗೆ ಎಣ್ಣೆ, ಬೇಳೆಕಾಳು ಹಾಗೂ ಇತರೆ ದಿನ ನಿತ್ಯ ಆಹಾರ ಪದಾರ್ಥಗಳ ಬೆಲೆಯು ಗಗನಕ್ಕೆ ಏರುತ್ತಿದ್ದು ಸರಕಾರಗಳು ಬೆಲೆ ನಿಯಂತ್ರಿಸುವಲ್ಲಿ ವಿಫ ಲವಾಗಿವೆ.
ಬಡ ಹಾಗೂ ಮಧ್ಯಮ ವರ್ಗದ ಜನರು ಈ ಬೆಲೆ ಏರಿಕೆಯಿಂದಾಗಿ ತತ್ತರಿಸುತ್ತಿದ್ದು, ಸರಕಾರಗಳು ಬಡ ಜನರ ಕಷ್ಟಕ್ಕೆ ಸ್ಪಂದಿಸಬೇಕು ಕೊರೋನಾ ಪರಿಸ್ಥಿತಿಯಲ್ಲಿ ಜನರ ಬಳಿ ಕೆಲಸವೂ ಇಲ್ಲ ಹಾಗೆ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಹಣವೂ ಇಲ್ಲದೆ ಸಂದಿಗ್ಧ ಪರಿಸ್ಥಿತಿಯಲ್ಲಿ ಬದುಕು ದೂಡುತ್ತಿದ್ದಾರೆ. ಹಿಂದೆ ಃಎP ವಿರೋಧ ಪಕ್ಷವಿದ್ದಾಗ ಆಗೊಮ್ಮೆ, ಈಗೊಮ್ಮೆ ಬೆಲೆ ಏರಿಕೆಯಾಗುತ್ತಿದ್ದಗಲೆಲ್ಲ ಬೀದಿಗಳಿದು ಪ್ರತಿಭಟನೆ ನಡೆಸುತ್ತಿತ್ತು ಆದರೆ ಈಗ ಅವರೆ ಸ್ವತಃ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಪ್ರತಿನಿತ್ಯ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿದ್ದರು ಮಾತನಾಡುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರದ ಈ ಜನವಿರೋಧಿ ಆಡಳಿತವನ್ನು ಸಂಘಟನೆ ಖಂಡಿಸುತ್ತದೆ.
ಜೊತೆಗೆ ಕೂಡಲೇ ಜನತೆಗೆ ಅಗತ್ಯ ವಸ್ತುಗಳ ಅನುಕೂಲಕರ ಬೆಲೆಯಲ್ಲಿ ಕೊಳ್ಳಲು ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಬೇಕೆಂದು ಅಖಿಲ ಭಾರತ ಯುವಜನ ಒಕ್ಕೂಟ ಂIಙಈ ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ
ಇ ಡಿಜಿಟಲ್ ಪ್ರತಿಭಟನಾ ಮೂಲಕ ಒತ್ತಾಯಿಸುತ್ತದೆ. ಪ್ರತಿಭಟನೆಯಲ್ಲಿ ಶ್ರೀದೇವಿ ಎಚ್. ಅಟ್ಟೂರ, ವಿಠಾಬಾಯಿ ಅಟ್ಟೂರ, ಚನ್ನವೀರ ಅಟ್ಟೂರ, ಸಂಗಮೇಶ ಅಟ್ಟೂರ, ಪ್ರಥ್ವಿರಾಜ ಅಟ್ಟೂರ ಭಾಗವಹಿಸಿದ್ದರು.