ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ಚಿಂತಾಜನಕ : ಮೌನೇಶ ನಾಟೇಕಾರ

ಶಹಾಪುರ : ಜು.20: ಅಗತ್ಯ ವಸ್ತುಗಳ ದರ ಏರಿಕೆಯಿಂದ ಈಗಾಗಲೇ ಕಂಗಲಾಗಿರುವ ಜನಸಾಮಾನ್ಯರ ಜೇಬಿಗೆ ಸೋಮವಾರದಿಂದ ಕತ್ತರಿ ಬಿದ್ದಿದೆ.
ಸರಕು ಮತ್ತು ಸೇವಾ ತೆರಿಗೆಯಲ್ಲಿ(ಜಿಎಸ್‍ಟಿ)ಹಲವು ಬದಲಾವಣೆಗೆಗಳ ಕಾರಣದಿಂದ
ಮೊಸರು, ಲಸ್ಸಿ, ಪನೀರ್,ಮಜ್ಜಿಗೆ, ಅಕ್ಕಿ, ಗೋಧಿ ,ಬಾರ್ಲಿ, ಅಕ್ಕಿ, ಹಿಟ್ಟು, ಮಂಡಕ್ಕಿ ,ಅವಲಕ್ಕಿ, ಬೆಲ್ಲ, ಸಕ್ಕರೆ, ಜೇನುತುಪ್ಪ, ಇವುಗಳೆಲ್ಲ ಜನಸಾಮಾನ್ಯರಿಗೆ ಅತಿ ಅವಶ್ಯಕವಾಗಿರುವ ವಸ್ತುಗಳಾಗಿದ್ದು ಇವುಗಳ ಮೇಲೆ 5 %(ಜಿಎಸ್‍ಟಿ ) ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಬಡವರ ದಿನದಲಿತರ ಹಿಂದುಳಿದ ವರ್ಗದವರ ಬದುಕು ಚಿಂತಾಜನಕವಾಗಿದೆ ಎಂದು ಮೌನೇಶ ನಾಟೇಕಾರ ಆಕ್ರೋಶ ವ್ಯಕ್ತಪಡಿಸಿದರು ಮುಂದುವರೆದ ಮಾತನಾಡಿ ಅವರು ಬಿಜೆಪಿ ಸರ್ಕಾರ ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಜನರಿಗೆ ಮೋಸ ಮಾಡುತ್ತಿದೆ ಮತ್ತು 12/% ದಿಂದ 18% ಹೆಚ್ಚಳವಾಗಿದೆ ಇದರಿಂದ ರಾಜ್ಯದ ಜನರು ರೋಚ್ಚಿಗೆದ್ದಿದ್ದಾರೆ ಪ್ಯಾಕಿಂಗ್ ನೆಪಹೇಳಿ ಅಲ್ಲಿ ಕೂಡ ಮೊಸಮಾಡುತ್ತಿದೆ ಗುತ್ತಿಗೆ ಆಧಾರದಲ್ಲಿ ಮೇಲೆ ಕೆಲಸಮಾಡುವವರ ಮೇಲು 18%(ಜಿಎಸ್ಟಿ ಕಟ್ಟಬೇಕು) ಸರ್ಕಾರ ಮೊದಲೇ ಅವರಿಗೆ ಕನಿಷ್ಠ ಮಟ್ಟದ ವೇತನವೂ ಇರುವುದಿಲ್ಲ ಅವರ ಮೇಲೆ 18% ಜಿಎಸ್‍ಟಿ ಕಟ್ಟಿ ಅವರು ಸಂಸಾರ ಹೇಗೆ ಸಾಗಬೇಕು ಬಿಜೆಪಿ ಸರ್ಕಾರ ಬಡವರ ರಕ್ತ ಕುಡಿಯುತ್ತಿದೆ ಪೆಟ್ರೋಲ್ ಡೀಸೆಲ್ ಆಸ್ಪತ್ರೆ ರಸಗೊಬ್ಬರ ಹೋಟೆಲ್ ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರಿವೆ ಹೀಗಾದರೆ ಜನಸಾಮಾನ್ಯರು ಹೇಗೆ ಬದುಕಬೇಕು ಸರ್ಕಾರ ಕೂಡಲೇ (ಜಿಎಸ್‍ಟಿಯನ್ನು) ಹಿಂದಕ್ಕೆ ಪಡೆಯಬೇಕು ಇಲ್ಲದಿದ್ದರೆ ಜಿಲ್ಲೆಯಾದ್ಯಂತ ರೈತರು ಜನಸಾಮಾನ್ಯರೊಂದಿಗೆ ಸೇರಿಕೊಂಡು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಶಹಪುರ ತಾಲೂಕ ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾದ ಮೌನೇಶ್ ನಾಟೇಕಾರ ಆಕ್ರೋಶ ವ್ಯಕ್ತಪಡಿಸಿದರು.