ಬೆರಳೆಣಿಕೆಯಷ್ಟು ಸಿಟಿ ಬಸ್ಸುಗಳು, ನಗರ ಸಾರಿಗೆ ವೈಫಲ್ಯ

ಚಿತ್ರದುರ್ಗ.ನ.20;  ನಗರ ಸಾರಿಗೆ ಉತ್ತಮ ಸೌಲಭ್ಯ ಕಲ್ಪಿಸುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದ ಜನರಿಗೆ ನಿರಾಸೆ ತಂದಿದೆ, ನಗರ ಸಾರಿಗೆಗೆ ಎಂದು ಬಿಟ್ಟ ಬಸ್ಸುಗಳನ್ನೆಲ್ಲ ನಗರದ ಹೂರ ಸಂಚಾರಕ್ಕೆ ಕಳುಹಿಸಿಕೊಟ್ಟಿದ್ದರ ಫಲವಾಗಿ ಇಂದು ನಗರದ ಬಸ್ಸುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮುಂದೊAದು ದಿನ ಸಿಟಿ ಬಸ್ಸುಗಳನ್ನು ಭೂತ ಕನ್ನಡಿ ಹಾಕಿ ಹುಡುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ಎಂದಿದ್ದಾರೆ.ನಗರ ಸಾರಿಗೆ ವೈಫಲ್ಯದಿಂದಾಗಿ ಜನರು ಹೆಚ್ಚು ಸ್ವಂತ ವಾಹನಗಳನ್ನ ಖರೀದಿ ಮಾಡುತ್ತಿದ್ದಾರೆ. ಇದರಿಂದ ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜುಗಳಿಗೆ ಆಟೋರಿಕ್ಷಗಳನ್ನೇ ನಂಬಿ ಕುಳಿತಿದ್ದಾರೆ. ನಗರದ ಎಲ್ಲಾ ಭಾಗಗಳಲ್ಲಿ ಸಂಚರಿಸಲು ಆಟೋಗಳು ಸಿಗದೇ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಂಜೆ ಆಯಿತೆಂದರೆ ಸರಿಯಾಗಿ ಆಟೋಗಳು ಸಿಗದೇ ವಿದ್ಯಾರ್ಥಿಗಳು ಮನೆಗೆ ತಲುಪುವುದು ಕಷ್ಟಕರವಾಗಿದೆ ಎಂದು ಆಪಾದಿಸಿದ್ದಾರೆ.ದಾವಣಗೆರೆ ನಗರ ಅತ್ಯುತ್ತಮವಾದ ನಗರ ಸಾರಿಗೆಯನ್ನು ಕಲ್ಪಿಸಿ ಜನಸಾಮಾನ್ಯರಿಗೆ ಸುಗಮವಾಗಿ ಸಾಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ, ಆದರೆ ಚಿತ್ರದುರ್ಗ ಜಿಲ್ಲೆ, ಇನ್ನೂ ಸಹ ಹಿಂದುಳಿಯುವುದರಲ್ಲಿಯೇ ಮುಂದುವರೆಯುತ್ತಿದೆ ಎಂದಿದ್ದಾರೆ.ದಾವಣಗೆರೆಯಲ್ಲಿ ಖಾಸಗಿ ನಗರ ಸಾರಿಗೆಯವರು ದಿನನಿತ್ಯ ಓಡಾಡುವಂತಹ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಪಾಸ್ ಗಳನ್ನು ವಿತರಿಸಿ, ನಗರ ಸಾರಿಗೆ ಬಳಕೆಯನ್ನು ಹೆಚ್ಚಿಸಿದ್ದಾರೆ. ಆದರೆ ಚಿತ್ರದುರ್ಗ ನಗರ ಸಾರಿಗೆ ವಿದ್ಯಾರ್ಥಿಗಳಿಗೆ ಪಾಸ್ ನೀಡಲೇಬಾರದು ಎಂದು ಮನಸ್ಸು ಮಾಡಿದಂತೆ ಕಾಣುತ್ತಿದೆ. ಜಿಲ್ಲಾಡಳಿತ ಇತ್ತ ಕಡೆ ಗಮನಹರಿಸಿ, ಚಿತ್ರದುರ್ಗದ ಜನತೆಗೂ ಸಹ ದಿನನಿತ್ಯದ ಪಾಸ್ ವಿತರಣೆ ಮಾಡಿ, ನಗರ ಸಾರಿಗೆ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ. ನಗರ ಸಾರಿಗೆಯನ್ನು ಉತ್ತಮಗೊಳಿಸದಿದ್ದರೆ ಸ್ವಂತ ವಾಹನಕೊಳ್ಳುವರ ಸಂಖ್ಯೆ ಹೆಚ್ಚಾಗಿ, ಮಾಲಿನ್ಯ ಹೆಚ್ಚಾಗಿ, ನಗರದ ರಸ್ತೆಗಳು ದಟ್ಟಣೆಯಿಂದ ತುಂಬಿ, ಅಪಘಾತಗಳು ಹೆಚ್ಚಾಗುತ್ತದೆ. ಶಾಲಾ ಮಕ್ಕಳಂತೂ ಆಟೋರಿಕ್ಷದಲ್ಲಿ 5, 6 ಜನ ಕುಳಿತು ಶಾಲಾ ಕಾಲೇಜುಗಳಿಗೆ ಸಂಚರಿಸುವ ದೃಶ್ಯ ಮನಕಲಗುವಂತಿದೆ ಎಂದಿದ್ದಾರೆ. 

ಚಿತ್ರದುರ್ಗದ ನಗರದ ಅಭಿವೃದ್ಧಿಯೇ ಬೇಡ ಎಂದು ಹಠ ತೊಟ್ಟಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದರಿಂದ ನಗರ ಸಾರಿಗೆ ದಿನನಿತ್ಯ ಕುಸಿಯುತ್ತಿದೆ. ನಗರದ ನಗರ ಸಾರಿಗೆಗಳು ಮಧ್ಯಾಹ್ನ 4:ಂA ನಂತರ ಕಾಣೆಯಾಗುತ್ತಿರುವುದು ಶೋಚನೀಯ. ಸಂಜೆ ನಾಲ್ಕರ ನಂತರ ಸಿಟಿ ಬಸ್ಸುಗಳೇ ರಸ್ತೆಯಿಂದ ಕಣ್ಮರೆಯಾಗುತ್ತಿರುವುದು ಆಶ್ಚರ್ಯಕರವಾಗಿದೆ ಎಂದಿದ್ದಾರೆ.