ಬೆಮಳಖೇಡಾ ಗ್ರಾಮಸ್ಥರಿಂದ ಸಂವಿಧಾನ ಜಾಗೃತಿ ಜಾಥಾಕ್ಕೆ ಭವ್ಯ ಸ್ವಾಗತ

ಚಿಟಗುಪ್ಪ:ಫೆ.14: ತಾಲೂಕಿನ ಬೆಮಳಖೇಡಾ ಗ್ರಾಮಕ್ಕೆ ಮಂಗಳವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾವನ್ನು ಬೆಮಳಖೇಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮದ ಮಹಿಳೆಯರು ಸಂವಿಧಾನ ಭವ್ಯ ಸ್ವಾಗತ ಕೋರಿದರು.
ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಮಹಿಳೆಯರು ಕುಂಭ ಮೇಳ ಹೊತ್ತು, ಆರತಿ ಬೆಳಗಿ ಸಡಗರ ಸಂಭ್ರಮದಿಂದ ಜಾಥಾಕ್ಕೆ ಸ್ವಾಗತಿಸಿದರು. ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಸುಣಗಾರ್ ಅವರು ಡಾ. ಬಿ ಆರ್ ಅಂಬೇಡ್ಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಸಂವಿಧಾನ ಜಾಗೃತಿ ಕುರಿತು ಶಿಕ್ಷಕರಾದ ಅಯೋದ್ದಿನ ಮತ್ತು ಶಿವಾನಂದ ಪೂಜಾರಿ ಮಾತನಾಡಿದ ಅವರು ಭಾರತಕ್ಕೆ ಸಂವಿಧಾನ ಸಮರ್ಪಣೆ ಮಾಡುವುದು ಬಹಳ ಸುಲಭದ ಕೆಲಸವಾಗಿದ್ದಿಲ್ಲ ಡಾ. ಬಿ ಆರ್ ಅಂಬೇಡ್ಕರ್ ಅವರು ಭಾರತದ ಸಂವಿಧಾನವು ಒಟ್ಟು ಶಬ್ದಗಳು 146.485. ಮತ್ತು ಒಟ್ಟು ಪುಟಗಳ ಸಂಖ್ಯೆ 251 ಹಾಗೂ ಒಟ್ಟು ಹಸ್ತಕ್ಷರಗಳ ಸಂಖ್ಯೆ 284 ಆಗಿದ್ದು ಸಂವಿಧಾನ ಬರೆಯುವುದಕ್ಕೆ ಡಾ. ಬಿ ಆರ್ ಅಂಬೇಡ್ಕರ್ ಅವರು ಎರಡು ವರ್ಷ 11 ತಿಂಗಳು 18 ದಿನಗಳು ಹಿಡಿದಿದ್ದು ಆ ಸಂವಿಧಾನ ಬಗ್ಗೆ ನಾವೆಲ್ಲರೂ ಅರಿತುಕೊಳ್ಳಬೇಕು ಈ ಭಾರತ ದೇಶವು ಸಂವಿಧಾನವಾದ ತತ್ವ ಸಿದ್ಧಾಂತ ಮೇಲೆ ಭಾರತ ಸವಿಧಾನವನ್ನು ನಡೆದಿದ್ದು ಯಾವುದೇ ಒಂದು ವಿಷಯದಲ್ಲೂ ಸಂವಿಧಾನವಿಲ್ಲದೆ ಕೆಲಸವಾಗುವುದಿಲ್ಲ ಹಾಗಾಗಿ ನಾವೆಲ್ಲರೂ ಸಂವಿಧಾನ ಬಗ್ಗೆ ತಿಳಿದುಕೊಳ್ಳಬೇಕೆಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಲಿಂಗರಾಜ, ಸಂವಿಧಾನ ಪೀಠಿಕೆ ಬೋಧಿಸಿದರು. ಹಿಂದುಳಿದ ವರ್ಗಗಳ ತಾಲೂಕ ಅಧಿಕಾರಿ ವಿಠಲ ಸೇಡಂಕ್ಕರ್, ಗ್ರಾಮ ಪಂಚಾಯತ ಉಪಾಧ್ಯಕ್ಷೆ ರೇಷ್ಮಾ ರಾಜಕುಮಾರ್ , ಗ್ರಾಮ ಪಂಚಾಯತ್ ಸದಸ್ಯರು, ಕಂದಾಯ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ವಿವಿಧ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶಾಂತಕುಮಾರ ವಂದಿಸಿದರು.