ಬೆನ್ನುಮೂಳೆ ಸಮಸ್ಯೆಯೇ

ಜಂಜಾಟದಲ್ಲಿ ಯುವಪೀಳಿಗೆಗೆ ಇತ್ತೀಚೆಗೆ ಹೆಚ್ಚಾಗಿಯೇ ಬೆನ್ನುಮೂಳೆ ಸಮಸ್ಯೆ ಅಧಿಕವಾಗಿ ಕಾಡುತ್ತಿದೆ. ಹೌದು ೨೦೧೮ ರ ಸಮೀಕ್ಷೆ ಪ್ರಕಾರ ಭಾರತೀಯ ಮೆಟ್ರೋ ನಗರಗಳಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದ ೨೦,೦೦೦ ರೋಗಿಗಳ ಪೈಕಿ ಶೇ.೪೬ ಮಂದಿ ಬೆಂಗಳೂರಿನವರು ಯುವಪೀಳಿಗೆಯವರಾಗಿದ್ದಾರೆ. ಇವರಿಗೆ ಬೆನ್ನುಮೂಳೆ ಸಮಸ್ಯೆ ಅಧಿಕವಾಗಿ ಕಾಡುತ್ತಿತ್ತು. ಇದು ದೇಶದಲ್ಲಿ ಅತಿ ಹೆಚ್ಚು ಪ್ರಮಾಣದ್ದಾಗಿದೆ. ಸುಮಾರು ಶೇ.೪೩ ರಷ್ಟು ಜನರು ೭ ವಾರಗಳಿಗೂ ಅಧಿಕ ಕಾಲದವರೆಗೆ ತಮ್ಮ ನೋವನ್ನು ನಿರ್ಲಕ್ಷ್ಯ ಮಾಡುತ್ತಾರೆ. ಹೀಗೆ ನಿರ್ಲಕ್ಷ್ಯ ಮಾಡುವುದರಿಂದ ಚಿಕಿತ್ಸೆ ತಡವಾಗುತ್ತದೆ ಮತ್ತು ಸರ್ಜರಿ ಅಪಾಯ ಮಟ್ಟದಲ್ಲಿ ಹೆಚ್ಚಳವಾಗುತ್ತದೆ ಎಂದು ತಿಳಿದು ಬಂದಿದೆ.
“ಭಾರತದಲ್ಲಿ ದೀರ್ಘಕಾಲದ ನೋವಿನ ಸಂಭವದ ಬಗ್ಗೆ ನಡೆಸಲಾದ ಒಂದು ಅಧ್ಯಯನದ ಪ್ರಕಾರ ಶೇ.೧೯.೩ ರಷ್ಟು ಮಂದಿ ದೀರ್ಘಕಾಲದ ನೋವಿನಿಂದ ಬಳಲುತ್ತಿದ್ದಾರೆ. ಈ ಪೈಕಿ ಶೇ.೩೩ ರಷ್ಟು ಮಂದಿ ದಿನನಿತ್ಯದ ಕೆಲಸಗಳನ್ನು ಮಾಡಲು ಅಸಮರ್ಥರಾಗಿದ್ದಾರೆ. ಅನೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಇದರ ಪ್ರಮಾಣ ಶೇ.೧೮ ರಷ್ಟಿದೆ. ಮಹಿಳೆಯರಲ್ಲಿ ಶೇ.೨೫.೨ ರಷ್ಟು ಮಂದಿಯಲ್ಲಿ ದೀರ್ಘಕಾಲದ ನೋವಿನ ಪ್ರಮಾಣ ಹೆಚ್ಚಿದೆ. ೬೫ ವರ್ಷಕ್ಕಿಂತ ಅಧಿಕ ವಯೋಮಾನದವರಲ್ಲಿ ಇಂತಹ ನೋವು ಹೆಚ್ಚು ಕಾಣಿಸಿಕೊಳ್ಳುತ್ತದೆ. ಭಾರತದ ಎಂಟು ನಗರಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ ರೇಟಿಂಗ್ ಸ್ಕೇಲ್‌ನಲ್ಲಿ ನೋವಿನ ಸರಾಸರಿ ತೀವ್ರತೆಯು ಶೇ.೬.೯೩ ರಷ್ಟಿದೆ. ಅಂದರೆ, ಇದು ಮಧ್ಯಮ ಪ್ರಮಾಣದ ನೋವಿಗಿಂತ ತೀವ್ರವಾಗಿರುತ್ತದೆ. ದೀರ್ಘಕಾಲದ ಮಧ್ಯಮ ಮತ್ತು ದೀರ್ಘಕಾಲದ ತೀವ್ರವಾದ ನೋವಿನ ಬಗ್ಗೆ ಪ್ರತಿಕ್ರಿಯೆ ನೀಡಿದವರು ಕ್ರಮವಾಗಿ ಶೇ.೩೭ ಮತ್ತು ಶೇ. ೬೩ ರಷ್ಟು ಜನರಾಗಿದ್ದಾರೆ. ಮೊಣಕಾಲು ನೋವು ಅನುಭವಿಸುತ್ತಿದ್ದೇವೆ ಎಂದು ಹೇಳಿಕೊಂಡವರು ಶೇ.೩೨ ರಷ್ಟಾದರೆ, ಶೇ.೨೮ ರಷ್ಟು ಮಂದಿ ಕಾಲುಗಳ ನೋವು ಮತ್ತು ಶೇ.೨೨ ರಷ್ಟು ಮಂದಿ ಕೀಲುನೋವಿನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಇನ್ನು ಮುಂದೆ ವ್ಯಾಯಾಮ ಮಾಡುವುದಾಗಲೀ, ಸರಿಯಾದ ನಿದ್ದೆ ಮಾಡಲು, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಆಹ್ಲಾದಕರವಾದ ಸಂಬಂಧವನ್ನು ಕಾಪಾಡಿಕೊಳ್ಳಲು ಅಥವಾ ಸ್ವತಂತ್ರವಾದ ಜೀವನಶೈಲಿಯನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಜ್ಞರು ಹೇಳುತ್ತಾರೆ.
ಇದಕ್ಕಾಗಿ ನಗರದಲ್ಲಿ ಇದೀಗ ಬೆನ್ನುಮೂಳೆ ಆರೈಕೆ ಮತ್ತು ದೀರ್ಘಕಾಲೀನ ನೋವು ನಿರ್ವಹಣೆಯನ್ನು ಮಾಡುವ ಏಕೈಕ ಸ್ಪೆಷಾಲಿಟಿ ಸೆಂಟರ್‌ಗಳ ಜಾಲವಾಗಿರುವ ಇಂಟರ್‌ವೆನ್ಷನಲ್ ಪೇಯ್ನ್ ಅಂಡ್ ಸ್ಪೈನ್ ಸೆಂಟರ್(ಐಪಿಎಸ್‌ಸಿ) ಸಹಕಾರ ನಗರದಲ್ಲಿ ತನ್ನ ನೂತನ ಕೇಂದ್ರವನ್ನು ಆರಂಭಿಸಲಾಗಿದೆ.
ಈ ಹೊಸ ಕೇಂದ್ರವು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಥಿಯೇಟರ್‌ಗಳನ್ನು ಹೊಂದಿದ್ದು, ಕೀಲುನೋವು, ಲೋ ಬ್ಯಾಕ್ ಪೇಯ್ನ್, ಸ್ಲಿಪ್ಡ್ ಡಿಸ್ಕ್ ಸೇರಿದಂತೆ ಎಲ್ಲಾ ರೀತಿಯ ದೀರ್ಘಕಾಲೀನ ನೋವಿಗೆ ಕನಿಷ್ಠ ಆಕ್ರಮಣಕಾರಿ ತಂತ್ರಗಳನ್ನು ಬಳಸಿ ನುರಿತ ತಜ್ಞ ವೈದ್ಯರಿಂದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸ್ಪಾಂಡಿಲೈಟಿಸ್/ಸಿಯಾಟಿಕಾ, ನರವಿಜ್ಞಾನ ನೋವು, ಮೈಗ್ರೇನ್, ಮುಖದ ನೋವು, ಸಂಧಿವಾತ ಮತ್ತು ಕ್ಯಾನ್ಸರ್ ಸಂಬಂಧಿತ ನೋವುಗಳಿಗೆ ಇಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೇ, ಕ್ರೀಡಾ ಸಂಬಂಧಿತ ಗಾಯಗಳ ನಿವಾರಣೆ ಮತ್ತು ನಿರ್ವಹಣೆ ಸೌಲಭ್ಯವನ್ನೂ ಇಲ್ಲಿ ಕಲ್ಪಿಸಲಾಗುತ್ತಿದೆ. ಈ ಕೇಂದ್ರದ ಪುನರುಜ್ಜೀವನ ವಿಭಾಗದ ತಜ್ಞರು ದೇಹದ ನೈಸರ್ಗಿಕ ಜೀವಕೋಶಗಳನ್ನು ಬಳಸಿ ಹಾನಿಗೊಂಡ ಅಂಗಾಂಶಗಳನ್ನು ಕೈಗೆಟುಕುವ ದರದಲ್ಲಿ ಸರಿಪಡಿಸಲಿದ್ದಾರೆ ಎಂದು ಸಿಇಒ ಡಾ. ಪಂಕಜ್ ಎನ್. ಸುರಾಂ ತಿಳಿಸಿದ್ದಾರೆ.